ಬಲಿಗಾಗಿ ಕಾದಿರುವ ಈಚನೂರು ಕೆರೆ

ತಿಪಟೂರು :

      ನಗರಕ್ಕೆ ಕುಡಿಯುವ ನೀರೊದಗಿಸು ಮಹಾತ್ವಾಕಾಂಕ್ಷೆಯಿಂದ ಈಚನೂರು ಕೆರೆಗೆ ನೀರನ್ನು ತುಂಬಿಸಿ ಸಂಗ್ರಹಿಸಿ ನಗರಕ್ಕೆ ನೀರುಕೊಡುತ್ತಿದ್ದಾರೆ. ಈ ಬಾರಿ ವರುಣನ ಕೃಪೆಯಿಂದ ಬಹುಬೇಗೆ ಕೆರೆಯಲ್ಲಿ ನೀರು ಸಂಗ್ರಹವಾಗಿದೆ. ಹಿಂದೆ ಕರೆ ತುಂಬಿದರೆ ಹೊಡೆಯದಿರಲು ಕೆರೆಗೆ ಬಲಿಕೊಡಲು ಕೆರೆ ಹಾರವಾಗುತ್ತಿದ್ದರು.

      ಈಗಲೂ ಇದನ್ನು ನೆನಪಿಸುವಂತೆ ಈಗ ಈಚನೂರು ಕೆರೆ ತುಂಬಿ ಕಂಗೊಳಿಸುತ್ತಿದ್ದು ಬಲಿಗಾಗಿ ಕಾದಿದೆಯೇನೂ ಎನ್ನುವಂತೆ ತಿಪಟೂರಿನಿಂದ ಕರಾಡಾಳು ಸಂತೆ ಹೋಗುವ ಈ ರಸ್ತೆ ಒಂದೇ ಸಾರಿ ಎರಡು ವಾಹನಗಳು ಹೋಗದಷ್ಟು ಕಿರಿದಾಗಿದ್ದು ನೇರವಾಗಿ ಕೆರೆಗೆ ಸಂಪರ್ಕ ಕಲ್ಪಿಸುವಂತಿದೆ. ಈ ರಸ್ತೆಯು ತಿರುವಿನಲ್ಲಿ ಕೆರೆಗೆ ಯಾವುದೇ ತಡೆಗೋಡೆಯಾಗಲಿ, ಸೂಚನಾ ಫಲಕವಾಗಲಿ ಇರುವುದಿಲ್ಲ. ಈ ಸ್ಥಳದಲ್ಲಿ ಅನಾಹುತವಾಗುವ ಮೊದಲೇ ಸೂಚನಾ ಫಲಕ ಮತ್ತು ತಡೆಗೋಡೆಯನ್ನು ನಿರ್ಮಿಸಲು ಅಧಿಕಾರಿಗಳು ಸೂಕ್ತಕ್ರಮ ಕೈಗೊಂಡು ಅನಾಹುತವಾಗದಂತೆ ಎಚ್ಚರವಹಿಸಬೇಕಾಗಿದೆ. ಈ ಮಾರ್ಗದ ರಸ್ತೆ ಪಕ್ಕದಲ್ಲಿ ಹೆಚ್ಚಾಗಿ ಗಿಡಗಳು ಬೆಳದಿರುವುದು ಅಪಘಾತಕ್ಕೆ ಕಾರಣವಾಗುತ್ತಿದ್ದು ಇದನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap