ರಾಜ್ಯ ಸರ್ಕಾರದಿಂದ 75 ಸರ್ಕಾರಿ ಶಾಲೆಗಳನ್ನು ‘ನೇತಾಜಿ ಅಮೃತ ಶಾಲೆ’ಗಳೆಂದು ಘೋಷಣೆ

ಬೆಂಗಳೂರು:BIGG NEWS: ರಾಜ್ಯ ಸರ್ಕಾರದಿಂದ 75 ಸರ್ಕಾರಿ ಶಾಲೆಗಳನ್ನು 'ನೇತಾಜಿ ಅಮೃತ ಶಾಲೆ'ಗಳೆಂದು ಘೋಷಣೆ

            ರಾಜ್ಯದಲ್ಲಿ ಪ್ರತಿ ಜಿಲ್ಲೆಯ 2 ಶಾಲೆಗಳಂತೆ 75 ಶಾಲೆಗಳನ್ನು ನೇತಾಜಿ ಅಮೃತ ಶಾಲೆಗಳೆಂದು ( Netaji Ambrut School ) ಸರ್ಕಾರ ಘೋಷಿಸಿದೆ. ಈ ಶಾಲೆಗಳಲ್ಲಿ ಎನ್ ಸಿಸಿ ಘಟಕಗಳನ್ನು ( NCC Training Unit ) ಸ್ಥಾಪಿಸಲಾಗುತ್ತದೆ ಎಂಬುದಾಗಿ ತಿಳಿಸಿದೆ.

            ಈ ಬಗ್ಗೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಕನಿಷ್ಟ 2ರಂತೆ ಒಟ್ಟು 75 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ, ಆ ಶಾಲೆಗಳಲ್ಲಿ ಎನ್ ಸಿಸಿ ಘಟಕಗಳನ್ನು ಸ್ಥಾಪಿಸಲು ಮತ್ತು ಈ ಶಾಲೆಗಳನ್ನು ನೇತಾಜಿ ಅಮೃತ ಶಾಲೆಗಳೆಂದು ಘೋಷಣೆ ಮಾಡಿ, ಆದೇಶಿಸಿದೆ.

ನೇತಾಜಿ ಅಮೃತ ಶಾಲೆಗಳೆಂದು ಘೋಷಿಸಲ್ಪಟ್ಟ ಪ್ರತಿ ಶಾಲೆಯಿಂದ 100 ವಿದ್ಯಾರ್ಥಿಗಳಂತೆ ಒಟ್ಟು 7500 ವಿದ್ಯಾರ್ಥಿಗಳಿಗೆ ಎನ್ ಸಿ ಸಿ ತರಬೇತಿಯನ್ನು ನೀಡಲು ಅನುಕೂಲವಾಗುವಂತೆ ಅದಕ್ಕೆ ತಗಲುವ ವೆಚ್ಚ ಒಬ್ಬ ವಿದ್ಯಾರ್ಥಿಗೆ ರೂ.12,000ದಂತೆ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap