ನವದೆಹಲಿ:
ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ದರದಲ್ಲಿ ಕನಿಷ್ಠ 15 ರೂಪಾಯಿ ಏರಿಕೆ ನಿರೀಕ್ಷಿಸಲಾಗಿತ್ತು. ಆದರೆ, ಕಚ್ಚಾ ತೈಲ ದರ 130 ಡಾಲರ್ನಿಂದ ಮತ್ತೆ 100 ಡಾಲರ್ ಮಟ್ಟಕ್ಕೆ ಬಂದಿದೆ. ಜಾಗತಿಕ ಮಟ್ಟದಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ಗೆ 98 ಡಾಲರ್ ಆಸುಪಾಸಿನಲ್ಲಿದೆ.
ಕಚ್ಚಾತೈಲ ಬೆಲೆ ಇಳಿಕೆಯು ಚಿಲ್ಲರೆ ಇಂಧನ ಮಾರಾಟಗಾರರ ನೋವನ್ನು ಕಡಿಮೆ ಮಾಡಲಿದೆ. ಮಾರ್ಚ್ 7ರಂದು ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ಗೆ 139 ಡಾಲರ್ ತಲುಪಿದಾಗ 20 ರೂಪಾಯಿ ಹೊರೆ ಚಿಲ್ಲರೆ ಮಾರಾಟಗಾರರ ಮೇಲೆ ಬಿದ್ದಿತ್ತು. ಸೋಮವಾರ ಕಚ್ಚಾ ತೈಲ ದರ 128.24 ಡಾಲರ್ನಿಂದ 110.3 ಡಾಲರ್ಗೆ ಕುಸಿದ ಕಾರಣ ಪೇಟೆ ಕೊಂಚ ನಿರಾಳವಾಗಿತ್ತು.
‘7ನೇ ವೇತನ ಆಯೋಗ’ ಜಾರಿ ನಿರೀಕ್ಷೆಯಲ್ಲಿದ್ದ ‘ರಾಜ್ಯ ಸರ್ಕಾರಿ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ
https://prajapragathi.com/medical-seat-scam-for-ineligible-students/
ಸಾಮಾನ್ಯವಾಗಿ, ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ಬ್ರೆಂಟ್ ತೈಲದ ಬೆಲೆ ಏರಿಕೆ ಪ್ರತಿ ಬ್ಯಾರೆಲ್ ಮೇಲೆ 2 ರಿಂದ 5 ಡಾಲರ್ ಆಸುಪಾಸಿನಲ್ಲಿರುತ್ತದೆ. ಆದರೆ, ಈ ಸಲ ಇದನ್ನು ಮೀರಿ ದರ ಏರಿಕೆ ಆಗಿತ್ತು. ಇನ್ನೊಂದು ಸುತ್ತಿನ ತೆರಿಗೆ ಕಡಿತಕ್ಕೆ ಒತ್ತಡವೂ ಸರ್ಕಾರದ ಮೇಲೆ ಹೆಚ್ಚಾಗಿತ್ತು. ಇದು ಮುಂದಿನ ವರ್ಷದ ಹಣಕಾಸುವರ್ಷದ ಮೇಲೆ ಪರಿಣಾಮ ಬೀರುವಂಥ ವಿಚಾರವಾಗಿತ್ತು.
ಪ್ರತಿಬ್ಯಾರೆಲ್ ಕಚ್ಚಾ ತೈಲ ದರ ಮಂಗಳವಾರ 100 ಡಾಲರ್ ಒಳಗೆ ಬಂದಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನಿರೀಕ್ಷಿತ ಮಟ್ಟದಲ್ಲಿ ಆಗಲ್ಲ. ಆದಾಗ್ಯೂ, ಬೆಲೆ ಏರಿಕೆ ಅನಿವಾರ್ಯವಾಗಿದ್ದು, ಅದರ ಪ್ರಮಾಣ ಮತ್ತು ದರ ಏರಿಕೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಎಟಿಎಫ್ ದರ 18% ಏರಿಕೆ:
ಏವಿಯೇಷನ್ ಟರ್ಬೆನ್ ಫ್ಯುಯೆಲ್ (ಎಟಿಎಫ್) ದರ ಸಾರ್ವಕಾಲಿಕ ಮಟ್ಟಕ್ಕೆ ಏರಿದ್ದು, ಶೇಕಡ 18.3ರ ಹೆಚ್ಚಳ ದಾಖಲಿಸಿದೆ. ಇದರಂತೆ ಎಟಿಎಫ್ ದರ ಪ್ರತಿ ಕಿಲೋ ಲೀಟರ್ ಮೇಲೆ 17,153.63 ರೂಪಾಯಿ ಏರಿದ್ದು, 1,10,666.29 ರೂಪಾಯಿ ಆಗಿದೆ. ಎಟಿಫ್ ದರ ಸತತ ಆರನೇ ವರ್ಷ 1 ಲಕ್ಷ ರೂಪಾಯಿ ಮೇಲೆ ಏರಿದೆ. ನವೆಂಬರ್ 4ರಿಂದ ಎಟಿಎಫ್ ದರವೂ ಸ್ಥಿರವಾಗಿತ್ತು.
ಕಳೆದ ನ. 4ರಿಂದ ದರ ಪರಿಷ್ಕರಣೆ ಆಗಿಲ್ಲ:
ಪೆಟ್ರೋಲ್ ಮತ್ತು ಡೀಸೆಲ್ ದರಗಳ ಪರಿಷ್ಕರಣೆ ಕಳೆದ ವರ್ಷ ನವೆಂಬರ್ 4ರಿಂದೀಚೆಗೆ ನಡೆದೇ ಇಲ್ಲ. ಇಂಧನ ದರ ಗಗನಮುಖಿ ಆಗಿದ್ದಾಗ ಅದನ್ನು ತಡೆಯಲು ಕೇಂದ್ರ ಸರ್ಕಾರ ಪೆಟ್ರೋಲ್ಗೆ ಲೀಟರ್ ಮೇಲೆ 5 ರೂಪಾಯಿ, ಡೀಸೆಲ್ಗೆ ಲೀಟರ್ ಮೇಲೆ 10 ರೂಪಾಯಿ ತೆರಿಗೆ ಹೊರೆಯನ್ನು ಇಳಿಸಿತ್ತು. ಆ ಸಂದರ್ಭದಲ್ಲಿ ಕಚ್ಚಾ ತೈಲ ದರ ಪ್ರತಿಬ್ಯಾರೆಲ್ಗೆ 83 ಡಾಲರ್ ಆಗಿತ್ತು.
ಯೂಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಭಾರತ ಬೆಂಬಲಿಸಿಲ್ಲ. ಮಾತುಕತೆಯ ಮೂಲಕ ಬಿಕ್ಕಟ್ಟು ಪರಿಹರಿಸುವಂತೆ ಪದೇಪದೆ ಭಾರತ ಕೋರಿಕೊಳ್ಳುತ್ತ ಬಂದಿದೆ. ಹೀಗಾಗಿ ರಿಯಾಯಿತಿ ದರದಲ್ಲಿ ರಷ್ಯಾದಿಂದ ಕಚ್ಚಾ ತೈಲವನ್ನು ಭಾರತ ಖರೀದಿಸಿದರೆ ಅದು ಅಮೆರಿಕದ ನಿರ್ಬಂಧವನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ.
‘ವಂಶ ರಾಜಕಾರಣ’ಕ್ಕೆ ‘ಪ್ರಧಾನಿ ಮೋದಿ’ ಬ್ರೇಕ್: ‘ರಾಜ್ಯ ಕೇಸರಿಪಡೆ’ಯಲ್ಲಿ ಹೆಚ್ಚಿದ ಆತಂಕ.!
ಸುಂಕ ಇಳಿಸದ ರಾಜ್ಯಗಳು:
ಗ್ರಾಹಕರ ಮೇಲಿನ ಹೊರೆ ತಗ್ಗಿಸುವುದಕ್ಕಾಗಿ ಕೇಂದ್ರ ಸರ್ಕಾರ ಮತ್ತು ಕೆಲವು ರಾಜ್ಯ ಸರ್ಕಾರಗಳು ಈ ಹಿಂದೆಯೇ ತೆರಿಗೆ ಪ್ರಮಾಣವನ್ನು ತಗ್ಗಿಸಿವೆ. ಆದಾಗ್ಯೂ, ಕೇಂದ್ರದ ಅಬಕಾರಿ ಸುಂಕ ಇಳಿಸುವಂತೆ ಸವಾಲು ಹಾಕಿದ್ದ ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಒಂಬತ್ತು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಇಳಿಸಿಲ್ಲ ಎಂದು ಸಚಿವ ಪುರಿ ಸಂಸತ್ಗೆ ತಿಳಿಸಿದರು. 2021ರ ನವೆಂಬರ್ 4ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ ಪ್ರತಿ ಲೀಟರಿಗೆ -ಠಿ;5 ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರಿಗೆ -ಠಿ;10 ಅಬಕಾರಿ ಸುಂಕ ಇಳಿಸಿತ್ತು.
35 ಲಕ್ಷ ಬ್ಯಾರೆಲ್ ತೈಲ ಖರೀದಿ ಒಪ್ಪಂದ:
ಭಾರತಕ್ಕೆ ಗರಿಷ್ಠ ಪ್ರಮಾಣದ ಶೇ. 30 ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಪೂರೈಸಲು ರಷ್ಯಾ ಮುಂದಾಗಿದೆ. ಭಾರತದಲ್ಲಿ ನಿತ್ಯ 45 ಲಕ್ಷ ಬ್ಯಾರೆಲ್ ಇಂಧನ ಬಳಕೆಯಾಗುತ್ತಿದೆ. 2021ರ ಏಪ್ರಿಲ್ ಮತ್ತು 2022ರ ಜನವರಿ ನಡುವೆ ಭಾರತ ಆಮದು ಮಾಡಿಕೊಂಡ 176 ದಶಲಕ್ಷ ಟನ್ ಕಚ್ಚಾ ತೈಲದಲ್ಲಿ ರಷ್ಯಾದಿಂದ ಆಮದು ಮಾಡುವ ಪ್ರಮಾಣ ಶೇಕಡ 2 ಮಾತ್ರ ಇತ್ತು.
ತೈಲವನ್ನು ಭಾರತಕ್ಕೆ ತಲುಪಿಸುವ ತನಕ ಸಾಗಣೆ ಮತ್ತು ವಿಮಾ ರಕ್ಷಣೆ ಸೇರಿ ಎಲ್ಲವನ್ನೂ ರಷ್ಯಾವೇ ಗಮನಿಸಲಿದೆ. ಇದಕ್ಕೆ ಸಂಬಂಧಿಸಿದ ಪಾವತಿ ವ್ಯವಸ್ಥೆ ಹೇಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಡಾಲರ್ನಲ್ಲಿ ಅಂತಾರಾಷ್ಟ್ರೀಯ ವಹಿವಾಟು ನಡೆಯುತ್ತದೆ. ಆದರೆ ರಷ್ಯಾ ವಿರುದ್ಧ ನಿರ್ಬಂಧ ಇರುವ ಕಾರಣ ರೂಪಾಯಿ ಮತ್ತು ರೂಬಲ್ ನಡುವೆ ನೇರ ವಿನಿಮಯದ ಅವಕಾಶದ ಬಗ್ಗೆ ಉಭಯ ಸರ್ಕಾರಗಳ ನಡುವೆ ಮಾತುಕತೆ ನಡೆದಿದೆ ಎಂದು ಮೂಲ ತಿಳಿಸಿವೆ.
ಗ್ರಾಹಕರ ಹಿತವನ್ನು ಕಾಪಾಡಲು ಬದ್ಧ:
ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ತರುವ ಬಗ್ಗೆ ಸಂಸತ್ನಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಈ ವಿಚಾರ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಆದರೆ, ಈ ಬಗ್ಗೆ ರಾಜ್ಯಗಳಿಂದ ಒಲವು ವ್ಯಕ್ತವಾಗಿಲ್ಲ. ಪೆಟ್ರೋಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಿಂದಲೇ ರಾಜ್ಯಗಳಿಗೆ ಹೆಚ್ಚಿನ ಆದಾಯ ಬರುತ್ತದೆ.
ಇದೆ ರೀತಿ, ಮದ್ಯವೂ ಕೂಡ ರಾಜ್ಯಗಳ ಆದಾಯದ ಇನ್ನೊಂದು ಪ್ರಮುಖ ಮೂಲ. ಇದನ್ನು ಕಳೆದುಕೊಳ್ಳಲು ರಾಜ್ಯಗಳು ಬಯಸಲಾರವು. ಆದಾಗ್ಯೂ, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಪರಿಣಾಮ ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ.
ರಷ್ಯಾ ಮತ್ತು ಯೂಕ್ರೇನ್ ಸಮರದಿಂದಾಗಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ಗೆ 130 ಡಾಲರ್ ಆಸುಪಾಸಿನಲ್ಲಿದೆ. ನಮ್ಮದೇ ಆದ ಇತಿಮಿತಿಯಲ್ಲಿ ನಾವು ದೇಶದ ಪ್ರಜೆಗಳ ಮತ್ತು ಗ್ರಾಹಕರ ಹಿತವನ್ನು ಕಾಪಾಡಲು ಬದ್ಧರಾಗಿದ್ದೇವೆ ಎಂದು ಸಚಿವ ಪುರಿ ಭರವಸೆ ನೀಡಿದರು.
ಪುತಿನ್ ಯುದ್ಧಾಪರಾಧಿ
ಯೂಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ‘ಯುದ್ಧಾಪರಾಧಿ’ ಎಂದು ಪರಿಗಣಿಸಿ ತನಿಖೆಗೆ ಒಳಪಡಿಸುವ ಪ್ರಸ್ತಾವನೆಯನ್ನು ಅಮೆರಿಕದ ಸೆನೆಟ್ ಒಮ್ಮತದಲ್ಲಿ ಅನುಮೋದಿಸಿದೆ. ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ ಫಾರ್ ಪೊಟೆನ್ಶಿಯಲ್ ವಾರ್ ಕ್ರೖೆಮ್್ಸ ನಲ್ಲಿ ಪುತಿನ್ ಮತ್ತು ಅವರ ಆಡಳಿತದ ವಿರುದ್ಧ ದಾವೆ ಹೂಡುವುದಕ್ಕೆ ಅಮೆರಿಕ ಸಿದ್ಧತೆ ನಡೆಸಿದೆ.
ಉಕ್ರೇನ್ನಲ್ಲಿ 90% ಬಡತನ:
ರಷ್ಯಾ- ಯೂಕ್ರೇನ್ ಸಮರದ ಕಾರಣ ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಕುಸಿಯಲಿದೆ. ಶೇಕಡ 90 ಯೂಕ್ರೇನಿಯನ್ನರು ಬಡತನಕ್ಕೆ ತಳ್ಳಲ್ಪಡಲಿದ್ದಾರೆ. ಇಂಥವರಿಗೆ ಆರ್ಥಿಕವಾಗಿ ನೆರವಾಗುವುದಕ್ಕೆ ಅಗತ್ಯ ಕ್ರಮಗಳನ್ನು ಈಗಲೇ ತೆಗೆದುಕೊಳ್ಳಬೇಕು ಎಂದು ವಿಶ್ವಸಂಸ್ಥೆಯ ಆಡಳಿತಾಧಿಕಾರಿ ಅಚಿಮ್ ಸ್ಟೇನರ್ ಹೇಳಿದ್ದಾರೆ.
ರಷ್ಯಾ-ಯೂಕ್ರೇನ್ ಸಮರದ ಕಾರಣ ಭಾರತದಿಂದ ಫಾರ್ವಸ್ಯುಟಿಕಲ್ಸ್, ಟೆಲಿಕಾಂ ಉಪಕರಣ, ಟೀ, ಕಾಫಿ ಮತ್ತು ಸಾಗರ ಉತ್ಪನ್ನಗಳನ್ನು ರಫ್ತು ಮಾಡುವುದು ಕೊಂಚ ಕಷ್ಟವಾಗಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.
ಅಮೆರಿಕ ಕಾಂಗ್ರೆಸ್ ಉದ್ದೇಶಿಸಿ ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮಾತನಾಡಿದ್ದು, ಹೆಚ್ಚುವರಿ ನೆರವು ಕೋರಿದ್ದಾರೆ. ಇದರ ಬೆನ್ನಿಗೆ ಯೂಕ್ರೇನ್ ಮೇಲಿನ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಮರಿಯುಪೋಲ್, ಕಿಯೆವ್ ಮುಂತಾದ ಪಟ್ಟಣಗಳ ಮೇಲೆ ದಾಳಿ ತೀವ್ರಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
