ದೀನದಯಾಳ ಉಪಾಧ್ಯಾಯ ಜಯಂತಿ:ಸಂಸದ ಕಾಗೇರಿ ಭಾಗಿ

ಶಿರಸಿ:

   ದೇಶದ ಸ್ವಾತಂತ್ರಾ ನಂತರ ದೇಶದ ಅಂದಿನ ಪ್ರಧಾನ ವಿದೇಶೀ ಚಿಂತನೆಯಲ್ಲಿದ್ದರು. ನಾವು ನಮ್ಮ ಸಂಸ್ಕೃತಿಯ ಜೊತೆಗೆ ಹೇಗೆ ಬೆಳೆಯಬೇಕು ಎಂದು ತೋರಿಸಿಕೊಟ್ಟು, ಏಕಾತ್ಮ ಮಾನನವತಾವಾದವನ್ನು ಬಿತ್ತಿ ದೇಶಕ್ಕೆ ಭದ್ರ ಬುನಾದಿ ಹಾಕಿದವರು ಪಂ. ದೀನದಯಾಳ ಉಪಾಧ್ಯಾಯರು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

    ತಾಲೂಕಿನ ಕೊಳಗಿಬೀಸ್ ಮಾರುತಿ ದೇವಾಲಯಲ್ಲಿ ಪಂ. ದೀನದಯಾಳ ಉಪಾಧ್ಯಾಯ ಅವರ ಜಯಂತಿಯ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಮಹಾತ್ಮಾ ಗಾಂಧೀಜಿಯವರನ್ನು, ವಿನೋಭಾ ಭಾವೆ ಅವರನ್ನು ನಾವೆಲ್ಲ ನಿತ್ಯ ಸ್ಮರಿಸಿದಂತೆಯೇ ಪಂ. ದೀನ ದಯಾಳ ಅವರನ್ನು ಇಂದು ರಾಷ್ಟ್ರ ಸ್ಮರಿಸಿಕೊಳ್ಳುತ್ತಿದೆ. ಏಕಾತ್ಮ ಮಾನವತಾವಾದ ಸಿದ್ದಾoತವನ್ನು ದೇಶಾದ್ಯಂತ ನೀಡಿದವರು ಅವರು. ಜನಸಂಘದ ಆರಂಭದಲ್ಲಿ ಪ್ರಮುಖ ಪಾತ್ರ ವಹಿಸಿ, ಇಡೀ ದೇಶಕ್ಕೆ ಜನಸಂಘದ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಕಾರಣವಾದರು.

   ಸೃಷ್ಠಿಯ ಜೊತೆ ಸಾಗಿದಾಗ ಮಾತ್ರ ಭಾರತದ ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದ ಅವರು, ಪರಕೀಯರ ದಾಳಿಯಿಂದಾಗಿ ನಮ್ಮ ಋಷಿ ಮುನಿಗಳು ಕಂಡುಕೊoಡ ಸತ್ಯಗಳೆಲ್ಲ ಜನತೆಗೆ ತಲುಪುತ್ತಿರಲಿಲ್ಲ. ಸ್ವಾತಂತ್ರಾ ನಂತರ ಅವರ ಏಕಾತ್ಮ ಮಾನವತಾ ವಾದ ನಾಡಿನಾದಯಂತ ಹೊಸ ಸಂಚಲನವನ್ನೇ ಸೃಷ್ಠಿಸಿದೆ. ಸ್ವದೇಶಿ ಕಲ್ಪನೆ, ಕೃಷಿ, ಗುಡಿ ಕೈಗಾರಿಕೆಗೆ ಆದ್ಯತೆ ನೀಡಿದರಷ್ಟೇ ಭಾರತದ ಭವಿಷ್ಯ. ಶೈಕ್ಷಣಿಕ ಪರಿವರ್ತನೆ, ನಮ್ಮ ಸೈನ್ಯ ಹೇಗಿರಬೇಕು ಎಂಬೆಲ್ಲ ಅಂಶಗಳನ್ನು ಅವರು ಸ್ಪಷ್ಟ ಕಲ್ಪನೆ ನೀಡಿದ್ದಾರೆ ಎಂದರು.

   ಅವರ ಜನ್ಮ ದಿನಾಚರಣೆ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ದೇಶಾದ್ಯಂತ ಆಚರಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿವರಿಗೆ ಇನ್ನಷ್ಟು ಶಕ್ತಿ ತುಂಬುವ ಹಾಗೂ ವಸುದೈವ ಕುಟುಂಬಕo ಸಂಕಲ್ಪವನ್ನು ಸಾಧಿಸುವ ಅವರ ಕನಸಿಗೆ ಬೆಂಬಲ ನೀಡುವ ಸಲುವಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಹಿರಿಯರ ಹೆಸರಿನಲ್ಲಿ ಗಿಡ ನೆಡುವ ಮತ್ತು ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದರು.

   ಬಳಿಕ ಕೊಳಗಿಬೀಸ್‌ನಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸ್ವತಃ ಸಂಸದರೇ ಭಾಗಿಯಾಗಿ ಕಸ ಆಯುವ ಮೂಲಕ ಪಾಲ್ಗೊಂಡರು. ಈ ವೇಳೆ ಗ್ರಾ ಪಂ ಅಧ್ಯಕ್ಷ ಲಾಝರ್ ಸಿಲ್ವೆಸ್ಟರ್ ರೆಬೆಲ್ಲೋ, ಸದಸ್ಯರಾದ ಚಂದ್ರಕಾoತ ಹೆಗಡೆ, ಬಿ.ವಿ. ಗಣೇಶ, ದೇವಸ್ಥಾನದ ಅಧ್ಯಕ್ಷ ಶ್ರೀಧರ ಹೆಗಡೆ, ಸ್ಥಳೀಯರಾದ ರವಿ ಹೊಸ್ಮನೆ, ಗಣಪತಿ ಭಟ್ ಹೆಬ್ಬಲಸು, ಆರ್. ಡಿ. ಹೆಗಡೆ ಜಾನ್ಮನೆ, ಸತೀಶ ಮಡಿವಾಳ, ಚಂದ್ರು ಮಡಿವಾಳ ಇತರರಿದ್ದರು.

Recent Articles

spot_img

Related Stories

Share via
Copy link