ರಾಜಸ್ಥಾನ :
ಸಿಎಂ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭರವಸೆ ನೀಡಿದ್ದ 5 ಗ್ಯಾರಂಟಿಗಳಲ್ಲಿ ಕೆಲವೊಂದು ಗ್ಯಾರಂಟಿಗಳನ್ನು ನೀಡುತ್ತ ಬಂದಿದೆ. ಅದರಲ್ಲೂ ಮಹಿಳೆಯರಿಗೆ ಅನುಕೂಲವಾಗುವಂತ ಕೆಲವೊಂದು ಯೋಜನೆಗಳನ್ನು ಸಿದ್ದು ಸರ್ಕಾರ ನೀಡುತ್ತಿದೆ. ಇದೀಗ ಮಹಿಳೆಯರಿಗೆ ಖುಷಿಯಾಗುವ ಸುದ್ದಿಯೊಂದು ಕೇಳಿ ಬಂದಿದೆ.
ರಾಜಸ್ಥಾನದ ರಾಜ್ಯ ಸರ್ಕಾರ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ. ಯಾರು ಬೇಕಾದ್ರೂ ಕೇವಲ 450 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಖರೀದಿ ಮಾಡಬಹುದಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (NFSA) ಅಡಿಯಲ್ಲಿ ಈ ಪ್ರಯೋಜನ ಪಡೆಯಬಹುದು. ಈ ಸ್ಕೀಮ್ ಅಡಿಯಲ್ಲಿ ಅರ್ಹ ಕುಟುಂಬಗಳು ಕೇವಲ 450 ರೂಪಾಯಿಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪಡೆಯಲಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿ ರಾಜ್ಯದಲ್ಲಿ ಗೆದ್ದುಗೆ ಹಿಡಿಯಿತು. ಈ ಬೆನ್ನಲ್ಲೇ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಸಿಎಂ ಸಿದ್ದರಾಮಯ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿತ್ತು. ಇದಾದ ನಂತರ ಬಹುತೇಕ ರಾಜ್ಯಗಳಲ್ಲಿ ಸರ್ಕಾರಗಳು ವಿವಿಧ ಯೋಜನೆಗಳ ಮೂಲಕ ಉಚಿತ ಭಾಗ್ಯಗಳು ನೀಡುವುದು ಒಂದು ಟ್ರೆಂಡ್ ಆಗಿತ್ತು. ಅದರಲ್ಲೂ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ, ಹಣದ ಸಹಾಯ ಮಾಡುವುದು ಹೀಗೆ ಹಲವು ಯೋಜನೆಗಳಿದ್ದವು.