ಉಕ್ರೇನ್:
ಉಕ್ರೇನ್ ವಿರುದ್ಧ ಸಮರ ನಡೆಸುತ್ತಿರುವ ರಷ್ಯಾ, ಯುದ್ಧದಲ್ಲಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್(ಎಫ್‌ಎಸ್‌ಬಿ)ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದರ ಜತೆಗೆ ಉಕ್ರೇನ್ ವಿರುದ್ಧ ನಡೆಸಲಾಗಿರುವ ದಾಳಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಎಡವಟ್ಟು ಮಾಡಿಕೊಳ್ಳಲಾಗಿದೆ ಎಂದೂ ರಷ್ಯಾ ಸಂಸತ್, ಕ್ರೆಮ್ಲಿನ್‌ನಲ್ಲಿಯೂ ಕೂಡ ಅಭಿಪ್ರಾಯಗಳು ಕೇಳಿ ಬಂದಿವೆ ಎಂದು ಆ ಅಧಿಕಾರಿ ಹೇಳಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ “ಡೈಲಿ ಮೈಲ್’ ವರದಿ ಮಾಡಿದೆ.
ಈ ಬಗ್ಗೆ ಇರುವ ಸಮಗ್ರ ವರದಿಯನ್ನು ಮಾನವ ಹಕ್ಕುಗಳ ಸಂಘಟನೆಯೊಂದರ ಜತೆಗೆ ಹಂಚಿಕೊಳ್ಳಲಾಗಿದೆ ಎಂದು ಆ ವರದಿಯಲ್ಲಿ ಹೇಳಿಕೊಳ್ಳಲಾಗಿದೆ. ಜತೆಗೆ ಪುತಿನ್ ಹಿಟ್ಲರ್‌ನಂತಾಗಿದ್ದಾರೆ. ರಷ್ಯಾದ ಸೇನೆಯ ಎರಡನೇ ಪ್ರಮುಖ ಅಧಿಕಾರಿಯನ್ನು ಉಕ್ರೇನ್ ಸೇನೆ ಹತ್ಯೆ ಮಾಡಿದೆ ಎಂಬ ಅಂಶವೂ ಅದರಲ್ಲಿ ಪ್ರಸ್ತಾವಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ