ಶಿರಸಿ
ವರದಿ: ಶ್ರೀನಿವಾಸ ಆಚಾರಿ
ಶಿರಸಿ ವಿಭಾಗ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮಣ್ಣು ಸಾಗಾಟ ದಂಧೆ.
ಅರಣ್ಯ ಭೂಮಿ, ಕಂದಾಯ ಭೂಮಿ ಎಲ್ಲೆಂದರಲ್ಲಿ ಅಕ್ರಮವಾಗಿ ಮಣ್ಣು ಬಗೆದು ಅಲ್ಲಲ್ಲಿ ತಲೆ ಎತ್ತುತ್ತಿರುವ ಲೇ ಔಟ್ ಗಳಿಗೆ ಟಿಪ್ಪರ್ ಗಳಲ್ಲಿ ಸಾಗಿಸುತ್ತಿರುವ ದಂಧೆಕೋರರು ಹಾಗೂ ಕೆಲವು ಕಡೆ ತೋಟ ವಿಸ್ತರಣೆಗಾಗಿ ಬೆಟ್ಟವನ್ನು ಬಗೆದುಕೊಡುವುದಾಗಿ ಈ ಸಂದರ್ಭದಲ್ಲಿ ಯಾವುದೇ ಅಡ್ಡಿ ಬಾರದಂತೆ ನೋಡಿಕೊಳ್ಳುವುದಾಗಿ ಗ್ರಾಮೀಣ ಭಾಗದ ಜನರಿಗೆ ಭರವಸೆ ಮೂಡಿಸಿ ಮಣ್ಣನ್ನು ಲೇ ಔಟ್ ಗಳಿಗೆ ಸಾಗಿಸುತ್ತಿರುವ ಬಗ್ಗೆ ಕೇಳಿ ಬರುತ್ತಿದೆ. ದಂಧೆಕೋರರು ಟಿಪ್ಪರ್ ವೊಂದಕ್ಕೆ 2 ರಿಂದ 3 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ.
ಇದರಲ್ಲೂ ಮಾಮೂಲಿ ನೀಡುವ ಮೂಲಕ ಭ್ರಷ್ಟ ಅಧಿಕಾರಿಗಳ ಕೈ ಬಾಯಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಕೆಲವಷ್ಟು ಸಾಕ್ಷಿಗಳು ದೊರೆಯ ತೊಡಗಿವೆ.ಅಕ್ರಮ ಮಣ್ಣು ಸಾಗಾಟ ಕಂಡರೂ ಕಾಣದಂತಿರುವ ಅಧಿಕಾರಿಗಳು
ಕೆಲವಾರು ಕಡೆ 5 ರಿಂದ 7-8 ಅಡಿವರೆಗೂ ಭೂಮಿ ಕೊರೆದು ಮಣ್ಣು ಸಾಗಿಸುತ್ತಿದ್ದರೂ ಸಂಬಂಧಿಸಿದ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದು ಸಂದೇಹಕ್ಕೆ ಎಡೆ ಮಾಡಿಕೊಡುತ್ತಲಿದೆ.
ಅಕ್ರಮ ಮಣ್ಣು ಸಾಗಾಟದ ಸಂಧರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಗಿಡ ಮರಗಳನ್ನು ನಾಶ ಪಡಿಸಲಾಗುತ್ತಿದೆ. ಈ ನಡುವೆ ಕಂದಾಯ ಇಲಾಖೆಯ ಅಧಿಕಾರಿಗಳು ಕೂಡ ಮೌನವಾಗಿರುವುದು ಕಾಣ ಬರುತ್ತದೆ. ಹಾಗೆಯೇ ಅರಣ್ಯ ಭಾಗದಲ್ಲೂ ಕೂಡ ಅವ್ಯಾಹತವಾಗಿ ಭೂಮಿ ಬಗೆದು ಮಣ್ಣು ಸಾಗಿಸಲಾಗುತ್ತಿದ್ದರೂ ಕೇವಲ ಸಣ್ಣ -ಪುಟ್ಟ ಪ್ರಕರಣಗಳನ್ನು ದಾಖಲಿಸಿ ತಿಪ್ಪೆ ಸಾರಿಸುತ್ತಿರುವುದು ಕಂಡುಬರುತ್ತದೆ.
ಇಲ್ಲಿ ನೂತನ DFO ಸಂದೀಪ್ ಸೂರ್ಯವಂಶಿ ಇದಕ್ಕೆಲ್ಲ ಕಡಿವಾಣ ಹಾಕುವರೆಂದು ಭಾವಿಸಲಾಗಿತ್ತು. ಆದರೆ ಈ ಅಕ್ರಮ ಮಣ್ಣುದಂಧೆಗೆ ಯಾವುದೇ ಕಡಿವಾಣ ಬಿದ್ದಂತಿಲ್ಲ.ಇಂದಿನ ವಿಭಾಗಿಯ ಕಚೇರಿ ಉಪ ಅರಣ್ಯ ಸoರಕ್ಷಣಾಧಿಕಾರಿಗಳ ಕಾರ್ಯಾಲಯ ಸುಸ್ಥಿತಿಯಲ್ಲಿದ್ದರೂ,DFO ಕಛೇರಿ ಆಧುನಿಕರಣವಾಗಿದ್ದು ಬಿಟ್ಟರೆ ಇಲ್ಲಾವುದೇ ಬದಲಾವಣೆ ಮರೀಚಿಕೆಯಾಗಿದೆ. ಕೆಲವು ಅಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳ ಗಮನ ಸೆಳೆದರೂ ಫಲಶ್ರುತಿ ಕಾಣ ಬರುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಕೂಡಲೆ ಕ್ರಮ ಕೈಗೊಳ್ಳಬೇಕಾಗಿದೆ.








