ದೆಹಲಿ ಕಾರು ಸ್ಫೋಟಕ್ಕೆ ಸಂಬಂಧಿಸಿ ತುಮಕೂರಿನಲ್ಲಿ ಮಾಜಿ ಉಗ್ರನ ವಿಚಾರಣೆ

ತುಮಕೂರು:

    ದೆಹಲಿ ಕೆಂಪು ಕೋಟೆಯಲ್ಲಿ ನಡೆದ ಬೀಕರ ಕಾರು ಸ್ಫೋಟ  ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ತುಮಕೂರಿನಲ್ಲಿ ಮಾಜಿ ಉಗ್ರನೊಬ್ಬನನ್ನು ವಿಚಾರಣೆ ಮಾಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಮಾಜಿ ಉಗ್ರ ಮುಜಾಹಿದ್ಧೀನ್ ಎಂಬಾತನನ್ನು ಎಎಸ್ಪಿ ಪುರುಷೋತ್ತಮ ನೇತೃತ್ವದಲ್ಲಿ ತಿಲಕ್ ಪಾರ್ಕ್ ಪೊಲೀಸರು ವಿಚಾರಣೆ ಮಾಡಿದ್ದಾರೆ.

    ದೆಹಲಿಯ ಕೆಂಪುಕೋಟೆಯ ಬಳಿ ಸಂಭವಿಸಿದ್ದ ಕಾರು ಸ್ಫೋಟ ಸಂಬಂಧ ಎನ್‌ಐಎ ತೀವ್ರ ವಿಚಾರಣೆ ನಡೆಸುತ್ತಿದೆ. ಈ ಹಿನ್ನೆಲೆ ದೇಶದೆಲ್ಲಡೆ ಹೈ ಅಲರ್ಟ್ ಘೋಷಿಸಲಾಗಿದ್ದು, ಕರ್ನಾಟಕದಲ್ಲೂ ಟೆರರ್‌ ಸೆಲ್‌ಗಳ ಮೇಲೆ ಒಂದು ಕಣ್ಣಿಡಲಾಗಿದೆ.

    ಮಾಜಿ ಉಗ್ರನನ್ನು 2016ರಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಬಳಿಕ 6 ವರ್ಷಗಳ ಕಾಲ ತಿಹಾರ್ ಜೈಲಿನಲಿದ್ದ. ಖಲಿಫತ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಈತ, ಸಂಘಟನೆ ಮುಖಂಡರಿಗೆ ತುಮಕೂರಿನಲ್ಲಿ ಸಭೆಗೆ ಅವಕಾಶ ಮಾಡಿ, ಅದರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಸದ್ಯ ದೆಹಲಿ ಪ್ರಕರಣ ಸಂಬಂಧ ಉಗ್ರನ ವಿಚಾರಣೆ ಮಾಡಲಾಗಿದೆ. ಪ್ರಕರಣದಲ್ಲಿ ಈತನ ಪಾತ್ರವಿಲ್ಲ ಎಂದು ತಿಳಿದುಬಂದಿದ್ದು, ಬಿಟ್ಟುಕಳುಹಿಸಿದ್ದಾರೆ.

Recent Articles

spot_img

Related Stories

Share via
Copy link