ರೈತ ಸಮಾವೇಶಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೆರಗು

 

ಬೆಂಗಳೂರು:

ರೈತ ಸಂಘದಿಂದ ಏ.21ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸುವರು.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಮ್ ಆದ್ಮಿ ಪಕ್ಷ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್‌ರ ಆಹ್ವಾನದ ಮೇರೆಗೆ ರೈತರು ಮತ್ತು ಜನ ಸಾಮಾನ್ಯರನ ಸಮಾವೇಶದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಪಾಲ್ಗೊಳ್ಳುವರು. ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಐತಿಹಾಸಿಕ ದಿನ ಆಗಲಿದೆ ಎಂದು ತಿಳಿಸಿದರು.

75 ವರ್ಷದಲ್ಲಿ ಕರ್ನಾಟಕದ ರೈತರು, ಜನತೆ ಮೂರು ಪಕ್ಷಗಳಿಗೆ ಮತ ನೀಡಿ, ಗೆಲ್ಲಿಸಿದರು. ಮೂರು ಪಕ್ಷಗಳಲ್ಲಿ ಯೂರು ರೈತನ ಮತ್ತು ಜನಸಾಮಾನ್ಯರ ಭವಣೆ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಹೇಳಿದ ಅವರು, ಎಲ್ಲರಿಂದ ಅನ್ಯಾಯ ಎದುರಿಸಿ, ತಾವೇ ರಾಜಕಾರಣಕ್ಕಿಳಿದು ತಮ್ಮ ಭವಿಷ್ಯವನ್ನು ಕೈಗೆತ್ತಿಕೊಳ್ಳಲು ರೈತರು ತೀರ್ಮಾನಿಸಿದ್ದಾರೆ ಎಂದು ವಿವರಿಸಿದರು.

ಆಪ್ ಮುಖಂಡ ಭಾಸ್ಕರ್‌ರಾವ್ ಮಾತನಾಡಿ, ಕರ್ನಾಟಕ ರಾಜಕಾರಣ ವಿಶಿಷ್ಟವಾದದು. ಇಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಗೆ ಜನ ಒಲವು ತೋರುತ್ತಿದ್ದಾರೆ. ದೆಹಲಿ ಮಾದರಿಯ ಆಡಳಿತ ಬಯಸುತ್ತಿದ್ದಾರೆ. ರಾಜಕೀಯ ಪರಿಭಾಷೆ ಬದಲಾಗಿದೆ ಎಂದು ಹೇಳಿದರು.

ಎಎಪಿ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ, ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ, ಮುಖಂಡರಾದ ಸಂಚಿತ್ ಸೆಹ್ವಾನಿ, ಬಿ.ಟಿ. ನಾಗಣ್ಣ, ಸುರೇಶ್ ರಾಥೋಡ್, ಅಶೋಕ್ ಮೃತ್ಯುಂಜಯ, ವಿಜಯ್ ಶಾಸ್ತ್ರಿಮಠ, ಕೃಶಲ ಸ್ವಾಮಿ, ಉಷಾ ಮೋಹನ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ