ದೆಹಲಿ ಆಸ್ಪತ್ರೆ ಅವಘಡ : ಬಯಲಾಯ್ತು ಬೆಚ್ಚಿಬಳಿಸುವ ಸಂಗತಿ ….!

ನವದೆಹಲಿ: 

    ಪೂರ್ವ ದೆಹಲಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಏಳು ನವಜಾತ ಶಿಶುಗಳು ಸಾವನ್ನಪ್ಪಿದ ಬೇಬಿ ಕೇರ್ ಆಸ್ಪತ್ರೆಯ ಪರವಾನಗಿ ಅವಧಿ ಮುಗಿದಿದ್ದರೂ ಸಹ ಚಾಲನೆಯಲ್ಲಿದೆ. ಆಸ್ಪತ್ರೆಯಲ್ಲಿ ನುರಿತ ವೈದ್ಯರಿಲ್ಲ ಮತ್ತು ಅಗ್ನಿಶಾಮಕ ಇಲಾಖೆಯಿಂದ NOC ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

   ದೆಹಲಿ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ನಿಂದ ಬೇಬಿ ಕೇರ್ ಆಸ್ಪತ್ರೆಗೆ ನೀಡಲಾದ ಪರವಾನಗಿ ಈಗಾಗಲೇ ಮಾರ್ಚ್ 31 ರಂದು ಮುಕ್ತಾಯಗೊಂಡಿದೆ. ಆಸ್ಪತ್ರೆಗೆ ನೀಡಲಾದ ಅವಧಿ ಮುಗಿದ ಪರವಾನಗಿಯು ಕೇವಲ ಐದು ಹಾಸಿಗೆಗಳಿಗೆ ಮಾತ್ರ ಎಂದು ಶಹದಾರ ಉಪ ಪೊಲೀಸ್ ಆಯುಕ್ತ ಸುರೇಂದ್ರ ಚೌಧರಿ ಹೇಳಿದರು. ಘಟನೆಯ ವೇಳೆ 12 ನವಜಾತ ಶಿಶುಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಆಸ್ಪತ್ರೆಯಲ್ಲಿ ಯಾವುದೇ ತುರ್ತು ಪರಿಸ್ಥಿತಿಗಾಗಿ ಅಗ್ನಿಶಾಮಕ ಸಾಧನಗಳನ್ನು ಅಳವಡಿಸಲಾಗಿಲ್ಲ. ತುರ್ತು ನಿರ್ಗಮನಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಆಸ್ಪತ್ರೆಯಲ್ಲಿ ಅಗ್ನಿಶಾಮಕ ತೆರವು ಇಲ್ಲ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡವು ಯಾವುದೇ ಅಗ್ನಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಹೊಂದಿಲ್ಲ. ನಾವು ಸೋಮವಾರ ಎನ್ಒಸಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತೇವೆ ಎಂದು ಡಿಎಫ್‌ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

    ಶನಿವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ ನಂತರ ತಲೆಮರೆಸಿಕೊಂಡಿದ್ದ ಆಸ್ಪತ್ರೆ ಮಾಲೀಕ ಡಾ. ನವೀನ್ ಕಿಚ್ಚಿ ಮತ್ತು ಕರ್ತವ್ಯ ನಿರತ ಸಿಬ್ಬಂದಿ, ಅನರ್ಹ ವೈದ್ಯ ಡಾ.ಆಕಾಶ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ದುರಂತದ ಬಗ್ಗೆ ದೆಹಲಿ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೂ ಆದೇಶಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap