ನವದೆಹಲಿ:
ಮೋದಿ ಸರ್ಕಾರದ ಐದು ವರ್ಷ ಪೂರ್ಣ ಆಗಲು ಕೆಲವೇ ತಿಂಗಳು ಬಾಕಿ ಇದ್ದು, ಫೆಬ್ರವರಿ 1 ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.
2019-20 ನೇ ಸಾಲಿನ ಮಧ್ಯಂತರ ಬಜೆಟ್ ಇದಾಗಲಿದ್ದು, ಈಗಾಗಲೇ ಬಜೆಟ್ ಮಂಡಿಸಲು ಸಕಲ ಸಿದ್ಧತೆ ಪೂರ್ಣಗೊಂಡಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಮೋದಿ ಅವರ ಸರ್ಕಾರದ ಅವಧಿಯು ಏಪ್ರಿಲ್‌ಗೆ ಮುಗಿಯಲಿದೆ ಆ ನಂತರ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ ಹಾಗಾಗಿ ಕೇಂದ್ರವು ಮಧ್ಯಂತರ ಬಜೆಟ್ ಮಂಡಿಸುತ್ತಿದೆ.
ಪ್ರತಿ ಬಾರಿ ಫೆಬ್ರವರಿ ಕೊನೆಯ ವಾರದಲ್ಲಿ ಮುಂದಿನ ಸಾಲಿನ ಬಜೆಟ್ ಮಂಡಿಸಲಾಗುತ್ತಿತ್ತು. ಅದು ಪೂರ್ಣ ಬಜೆಟ್ ಆಗಿರುತ್ತಿತ್ತು. ಇದು ಚುನಾವಣಾ ವರ್ಷ ಆಗಿರುವ ಕಾರಣ ಈಗ ಮಂಧ್ಯಂತರ ಬಜೆಟ್ ಅಥವಾ ‘ವೋಟ್ ಆನ್ ಅಕೌಂಟ್’ ಮಂಡಿಸಿ ಮುಂದೆ ಬರುವ ಸರ್ಕಾರದಿಂದ ಒಪ್ಪಿಗೆ ಪಡೆದುಕೊಳ್ಳಲಾಗುತ್ತಿದೆ.
ಮೋದಿ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಇದಾಗಿದ್ದು, ಭಾರಿ ನಿರೀಕ್ಷೆಗಳು ಇವೆ. ಚುನಾವಣೆಗೆ ಎರಡು ತಿಂಗಳು ಮಂಡಿಸಲಾಗುತ್ತಿರುವ ಈ ಬಜೆಟ್‌ನಲ್ಲಿ ಭಾರಿ ಜನಪ್ರಿಯ ಯೋಜನೆಗಳು ಇರಲಿವೆ ಎಂದು ನಿರೀಕ್ಷಿಸಲಾಗಿದೆ. ಈ ಬಜೆಟ್ ಅನ್ನು ಫೆಬ್ರವರಿಯಲ್ಲಿ ಮಂಡಿಸಲಾದರೂ ಸಹ ಸಾರ್ವತ್ರಿಕ ಚುನಾವಣೆ ನಂತರ ಬರುವ ಸರ್ಕಾರವೇ ಅದಕ್ಕೆ ಅನುಮೋದನೆ ನೀಡಬೇಕಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
