ದೆಹಲಿ:

ಏಕೆ ಇಷ್ಟೊಂದು ಗದ್ದಲ, ಗಲಾಟೆ ಮಾಡುತ್ತಿದ್ದೀರಿ ? ನಿಮಗಿಂತ ಶಾಲೆಯ ಮಕ್ಕಳೇ ವಾಸಿ’ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಂಸತ್ತಿನಲ್ಲಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚಿಸಬೇಕೆಂದು ಕೋರಿ ಕಾಂಗ್ರೆಸ್ ಸಂಸದರು ಮೊದಲಿಗೆ ಗಲಾಟೆ ಆರಂಭಿಸಿದ್ದರು.
ನಂತರ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕೋರಿ ತೆಲುಗು ದೇಶಂ ಪಕ್ಷ ಸಂಸದರು ಕೂಗಾಟ ಆರಂಭಿಸಿದರೆ, ಮೇಕೆದಾಟು ಆಣೆಕಟ್ಟನ್ನು ವಿರೋಧಿಸಿ ತಮಿಳುನಾಡಿನ ಎಐಎಡಿಎಂಕೆ ಸಂಸದರು ಪ್ರತಿಭಟನೆ ಆರಂಭಿಸಿದರು.
ಸಂಸತ್ತಿನಲ್ಲಿ ವಿಪರೀತ ಗದ್ದಲ ಮಾಡುತ್ತಿದ್ದ ವಿಪಕ್ಷೀಯರು, ಟ್ರೆಶರಿ ಬೆಂಚ್ ಸದಸ್ಯರು, ಚಳಿಗಾಲದ ಅಧಿವೇಶನಕ್ಕೆ ದಿನದಿನವೂ ಅಡ್ಡಿ ಮಾಡುತ್ತಿರುವ ಕೆಲ ಸಂಸದರ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ‘ನಿಮ್ಮ ವರ್ತನೆ ಶಾಲಾ ಮಕ್ಕಳಿಗಿಂತ ಕಡೆಯಾಗಿದೆ. ಅವರಾದರೂ ಸಭ್ಯವಾಗಿ ವರ್ತಿಸುತ್ತಾರೆ’ ಎಂದು ಎಂದಿದ್ದಾರೆ.
ಇಷ್ಟೆಲ್ಲ ಆದರೂ ಕೂಡಾ ಸಂಸದರು ಗಲಾಟೆಯನ್ನು ನಿಲ್ಲಿಸದ ಕಾರಣ ಲೋಕಸಭೆ ಕಲಾಪವನ್ನು ಮಧ್ಯಾನಕ್ಕೆ ಮುಂದೂಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








