ದೆಹಲಿ:
ದೆಹಲಿ ಮದ್ಯ ನೀತಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ್ ಕೇಜ್ರಿವಾಲ್ ಬಧನವಾಗಿದೆ. ಇದರ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ನಂತರ ದೆಹಲಿ ಆಡಳಿತ ಚುಕ್ಕಾಣಿ ಹಿಡಿಯುವವರು ಯಾರು? ಎಂಬ ಬಗ್ಗೆ ಎಎಪಿ ಮತ್ತು ಹೊರಗೆ ಚರ್ಚೆಯ ವಿಷಯವಾಗಿದೆ.
ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ 9 ನೇ ಸಮನ್ಸ್‌ಗೆ ಹಾಜರಾಗಲು ವಿಫಲವಾದ ನಂತರ ಗುರುವಾರ ಇಡಿಯಿಂದ ಮುಖ್ಯಮಂತ್ರಿಯನ್ನು ಬಂಧಿಸಲಾಯಿತು. ಪ್ರಕರಣದಲ್ಲಿ ಎಎಪಿಯ ಇಬ್ಬರು ಪ್ರಮುಖರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರನ್ನು ಇಡಿ ಈಗಾಗಲೇ ಬಂಧಿಸಿದೆ. ಕೇಜ್ರಿವಾಲ್ ಅವರ ಉತ್ತರಾಧಿಕಾರಿಯ ರೇಸ್‌ನಲ್ಲಿ ಹಲವಾರು ನಾಯಕರು ಇದ್ದಾರೆ ಎಂಬ ಗುಸುಗುಸು ಕೇಳಿ ಬರುತ್ತಿದೆ.
ಜೈಲಿನಲ್ಲೇ ಕುಳಿತು ಸರ್ಕಾರ ನಡೆಸಲು ತೀರ್ಮಾನ ಆಗಿದೆ. ಜೈಲಿಗೆ ಹೋದರೆ ಸಿಎಂ ರಾಜಿನಾಮೆ ಕೊಡುವ ಅವಶ್ಯಕತೆ ಕಾನೂನಿನಲ್ಲಿ ಇಲ್ಲ ಎಂದು ಎಎಪಿ ಪ್ರತಿಪಾದಿಸಿದೆ. ಕೇಜ್ರಿವಾಲ್ ಅವರ ಪತ್ನಿ ಸುನೀತಾ ಸಿಎಂ ಪಟ್ಟ ಅಲಂಕರಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಊಹಿಸಿದ್ದಾರೆ, ಆದರೆ ದೆಹಲಿ ಪರಿಸ್ಥಿತಿಯು ವಿಭಿನ್ನವಾಗಿದೆ. ಎಎಪಿ ವೀಕ್ಷಕರು ಹೇಳುವಂತೆ ಕೇಜ್ರಿವಾಲ್ ಅವರು ವಂಶವಾಹಿ ರಾಜಕಾರಣಕ್ಕೆ ಗುರಿಯಾಗಲು ಇಷ್ಟಪಡುವುದಿಲ್ಲ ಏಕೆಂದರೆ ಅವರು ಮತ್ತು ಅವರ ಪಕ್ಷವು ಯಾವಾಗಲೂ ಶುದ್ಧ ಸಾರ್ವಜನಿಕ ಚಿತ್ರಣವನ್ನು ಪ್ರತಿಪಾದಿಸುತ್ತದೆ, ಅಲ್ಲಿ ಅಂತಹ ರಾಜಕೀಯಕ್ಕೆ ಅವಕಾಶವಿಲ್ಲ ಎಂದು ತಿಳಿದು ಬಂದಿದೆ.
ಎಎಪಿಯ ಹಿರಿಯ ನಾಯಕರ ಪೈಕಿ ಗೋಪಾಲ್ ರೈ ಕ್ಯಾಬಿನೆಟ್ ಸಚಿವರಾಗಿ ಮುಂಚೂಣಿಯಲ್ಲಿದ್ದಾರೆ. ರೈ ಅವರು ಹಿರಿಯರಷ್ಟೇ ಅಲ್ಲ, ಆಪ್ ರಾಷ್ಟ್ರೀಯ ಸಂಚಾಲಕರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. 48 ವರ್ಷದ ರೈ, 2011ರಲ್ಲಿ ಭ್ರಷ್ಟಾಚಾರದ ವಿರುದ್ಧದ ಭಾರತ ಆಂದೋಲನದೊಂದಿಗೆ ಸಂಬಂಧ ಹೊಂದಿದ್ದರು. ಅವರ ಸಚಿವರ ಸಾಧನೆಯು ಸರಾಸರಿಗಿಂತ ಹೆಚ್ಚಿದೆ. ಮೃದು ಸ್ವಭಾವದ ಅವರು ಯಾವುದೇ ವಿವಾದವನ್ನು ಮೈಮೇಲೆ ಎಳೆದುಕೊಂಡಿಲ್ಲ.
ಕೆಲವು ವಿಶ್ಲೇಷಕರು ಅತಿಶಿಗೆ ಪರವಾಗಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಸಿಸೋಡಿಯಾ ಬಂಧನದ ನಂತರ ಅವರು ಮತ್ತಷ್ಟು ಪ್ರಾಬಲ್ಯ ಗಳಿಸಿದ್ದಾರೆ. ಸದ್ಯ 14 ಖಾತೆ ನಿರ್ವಹಿಸುತ್ತಿದ್ದಾರೆ, ಅತಿಶಿ ನಂತರ ಸೌರಭ್ ಭಾರದ್ವಾಜ್ ಅವರು ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಸತ್ಯೇಂದ್ರ ಜೈನ್ ಮತ್ತು ಸಿಯೋಡಿಯಾ ಅವರ ಬಂಧನದ ನಂತರ ಖಾಲಿಯಾದ ಸ್ಥಾನಗಳಿಗಂ ಅತಿಶಿ ಮತ್ತು ಭಾರದ್ವಾಜ್ ಅವರನ್ನು ನೇಮಿಸಲಾಯಿತು, ಈ ಇಬ್ಬರು ಕೇಜ್ರಿವಾಲ್ ಆಪ್ತರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ