ದೆಹಲಿಯಲ್ಲಿ ಗುಂಡಿನ ದಾಳಿ; ಗ್ಯಾಂಗ್‌ಸ್ಟರ್‌ನ ಸೋದರ ಸಂಬಂಧಿಯ ಹತ್ಯೆ

ನವದೆಹಲಿ:

    ದೆಹಲಿಯ ಬವಾನಾ ಪ್ರದೇಶದಲ್ಲಿ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ಗ್ಯಾಂಗ್‌ಸ್ಟರ್ ಮಂಜೀತ್ ಮಹಾಲ್‌ನ  ಸೋದರಸಂಬಂಧಿಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಗ್ಯಾಂಗ್ ದ್ವೇಷವೇ  ಈ ಹತ್ಯೆಯ ಮುಖ್ಯ ಉದ್ದೇಶವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

   ಈ ಕೃತ್ಯವನ್ನು ಪ್ರಸ್ತುತ ಲಂಡನ್‌ನಲ್ಲಿ ತಲೆ ಮರೆಸಿಕೊಂಡಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ನಂದು ರೂಪಿಸಿರುವ ಸಾಧ್ಯತೆ ಇದೆ ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. ಹತ್ಯೆಗೊಳಗಾದ ವ್ಯಕ್ತಿಯನ್ನು 30 ವರ್ಷದ ದೀಪಕ್ ಸಾಂಗ್ವಾನ್ ಎಂದು ಗುರುತಿಸಲಾಗಿದೆ. ನಂದು ಮತ್ತು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಮಂಜೀತ್ ಮಹಾಲ್ ಗ್ಯಾಂಗ್ ನಡುವೆ ಹಿಂದಿನಿಂದಲೂ ದ್ವೇಷವಿದ್ದು, ನಂದು ದೆಹಲಿಯಿಂದ ಲಂಡನ್‌ಗೆ ತಪ್ಪಿಸಿಕೊಂಡರೂ ಈ ವೈರತ್ವ ಮುಂದುವರಿದಿದೆ. ಈ ದ್ವೇಷದಿಂದ ಈಗಾಗಲೇ ಒಂದು ಡಜನ್‌ಗಿಂತಲೂ ಹೆಚ್ಚು ಜನರು ಕೊಲೆಯಾಗಿದ್ದಾರೆ. ಗ್ಯಾಂಗ್‌ಸ್ಟರ್ ನಂದು ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ. ಮಂಜೀತ್ ಮಹಾಲ್ ವಿರುದ್ಧ ವೈರತ್ವದಿಂದಾಗಿ, ಎರಡು ವರ್ಷಗಳ ಹಿಂದೆ ನಂದು ಬಿಜೆಪಿ ನಾಯಕರೊಬ್ಬರನ್ನು ಕೊಲೆ ಮಾಡಿದ್ದ. 

   ಇದೇ ರೀತಿಯ ಘಟನೆಯೊಂದರಲ್ಲಿ, ಪಂಜಾಬ್‌ನ ಬಟಾಲಾದಲ್ಲಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್‌ಪುರಿಯ ತಾಯಿ ಹರ್ಜೀತ್ ಕೌರ್ ಮತ್ತು ಆಕೆಯೊಂದಿಗಿದ್ದ ಇನ್ನೊಬ್ಬ ವ್ಯಕ್ತಿಯನ್ನು ಬೈಕ್‌ಸವಾರರು ಗುಂಡಿಟ್ಟು ಕೊಂದಿದ್ದರು. ಕೆಲವು ದಿನಳ ಹಿಂದೆ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಹರ್ಜೀತ್ ಕೌರ್‌ರನ್ನು ಅಮೃತಸರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಗುಂಡಿನ ದಾಳಿಯಿಂದಾದ ಗಾಯದಿಂದಾಗಿ ಅವರು ಮೃತಪಟ್ಟಿದ್ದರು ಎಂದು ಬಟಾಲಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.

   ಈ ಘಟನೆ ಕ್ವಾಡಿಯನ್ ರಸ್ತೆಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ. ಈ ಕೊಲೆಗಳು ಗ್ಯಾಂಗ್‌ಸ್ಟರ್‌ಗಳ ನಡುವಿನ ದ್ವೇಷದಿಂದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದೀಪಕ್ ಸಾಂಗ್ವಾನ್‌ನ ಹತ್ಯೆಯಿಂದ ದೆಹಲಿಯ ಗ್ಯಾಂಗ್‌ಸ್ಟರ್ ಚಟುವಟಿಕೆಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ನಂದು ವಿರುದ್ಧ ಕಾನೂನು ಕ್ರಮಕ್ಕೆ ಒತ್ತಡ ಹೆಚ್ಚಾಗಿದೆ.

Recent Articles

spot_img

Related Stories

Share via
Copy link