ದೆಹಲಿ: ಡೇಟಾ ಕೆಬಲ್‌ ನಿಂದ ಗೆಳತಿಯ ಕೊಲೆ

ನವದೆಹಲಿ:

      ದೆಹಲಿ ರಸ್ತೆ ಬದಿಯ ರೆಸ್ಟೋರೆಂಟ್‌ನಲ್ಲಿ ಫ್ರಿಡ್ಜ್‌ನಲ್ಲಿ ಮಹಾ ಎಂದರೆ ಕೂಲ್‌ ಡ್ರಿಂಕ್‌ ಸಿಗಬಹುದು ಆದರೆ ಸಿಕ್ಕಿದ್ದು ಮಾತ್ರ ಶವ ಪತ್ತೆಯಾದ ಶವವನ್ನು ದೆಹಲಿ ಮಹಿಳೆ ಎಂದು ಗುರುತಿಸಲಾಗಿದೆ. ಆಕೆಯ ಲೀವ್-ಇನ್ ಗೆಳಯ ಡೇಟಾ ಕೇಬಲ್‌ನಿಂದ ಕತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ  ಎಂದು ಪೊಲೀಸ್ ಮೂಲಗಳು ಇಂದು ತಿಳಿಸಿವೆ.

     24 ವರ್ಷದ ಸಾಹಿಲ್ ಗೆಹ್ಲೋಟ್ ಎಂಬಾತನನ್ನು ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಂತೆಯೇ ಘಟನೆಯಲ್ಲಿ ತನ್ನ ಗೆಳತಿಯನ್ನು ಕೊಲೆ ಮಾಡಿ ಅದನ್ನು ಮರೆಮಾಚಲು ಯತ್ನಿಸಿದ ಆರೋಪದಲ್ಲಿ ಬಂಧಿತನಾಗಿದ್ದಾನೆ.

   ಇಬ್ಬರ ನಡುವೆ ಜಗಳವಾದ ನಂತರ 23 ವರ್ಷದ ನಿಕ್ಕಿ ಯಾದವ್‌ಳನ್ನು ಕೊಂದು ಆಕೆಯ ಶವವನ್ನು ತನ್ನ ಕುಟುಂಬದ ಒಡೆತನದ ಧಾಬಾದಲ್ಲಿ ಫ್ರಿಡ್ಜ್‌ನಲ್ಲಿ ತುಂಬಲು ನಿರ್ಧರಿಸಿದ್ದ.

    ನಿಕ್ಕಿ ಯಾದವ್ ಹತ್ಯೆಗೀಡಾದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಹಿಲ್‌ ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

   24 ವರ್ಷದ ಫಾರ್ಮಾ ಪದವೀಧರನಾದ ಸಾಹಿಲ್ ಕೊಲೆಯಾದ ದಿನವೇ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಸಾಹಿಲ್ ಬೇರೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು,  ನಿಕ್ಕಿಗೆ ತಡವಾಗಿ ಗೊತ್ತಾಯಿತು.ಆಕೆಯ ತಂದೆ ಸುನೀಲ್ ಯಾದವ್ ಸಾಹಿಲ್‌ಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ