ಕರ್ನಾಟಕ ಮೂಲದ ನಾಲ್ಕು ಕಂಪನಿಗಳಿಗೆ ಡೆಲಾಯ್ಟೆ ಇಂಡಿಯಾ ಎಂಟರ್‌ಪ್ರೈಸ್ ಗ್ರೋತ್ ಅವಾರ್ಡ್ಸ್ 2025

ಬೆಂಗಳೂರು:

   ಡೆಲಾಯ್ಟೆ ಇಂಡಿಯಾ ಆಯೋಜಿಸಿದ್ದ ಎಂಟರ್‌ಪ್ರೈಸ್ ಗ್ರೋತ್ ಅವಾರ್ಡ್ಸ್ (ಇಜಿಎ) 2025 ರ ಮೊದಲ ಆವೃತ್ತಿಯಲ್ಲಿ ಕರ್ನಾಟಕ ಮೂಲದ ನಾಲ್ಕು ಕಂಪನಿಗಳಾದ ಆದಿತ್ಯ ಆಟೋ ಪ್ರಾಡಕ್ಟ್ಸ್ ಆಂಡ್ ಇಂಜಿನಿಯರಿಂಗ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಟೀಮ್‌ಲೀಸ್ ಸರ್ವೀಸಸ್ ಲಿಮಿಟೆಡ್, ಇಂಡಿಜೀನ್ ಲಿಮಿಟೆಡ್ ಮತ್ತು ಆಟೋಮೋಟಿವ್ ಆಕ್ಸೆಲ್ಸ್ ಲಿಮಿಟೆಡ್‌ ವಿಜೇತರಾಗಿವೆ. 

  ಎಂಟರ್‌ಪ್ರೈಸ್ ಗ್ರೋತ್ ಅವಾರ್ಡ್ಸ್ ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಸ್ಥಳೀಯ ಮಹತ್ವಾಕಾಂಕ್ಷೆಯನ್ನು ರಾಷ್ಟ್ರೀಯ ಯಶಸ್ಸಿನ ಕಥೆಯನ್ನಾಗಿ ಪರಿವರ್ತಿಸಿದ ಉದ್ಯಮ ಗಳನ್ನು ಇದು ಸಂಭ್ರಮಿಸುತ್ತದೆ. ವಿಜೇತರಲ್ಲಿ ಕುಟುಂಬ ಮಾಲೀಕತ್ವದ ಉದ್ಯಮಗಳು ಸೇರಿದ್ದು, ಉದ್ದೇಶ, ಆಡಳಿತ ಮತ್ತು ಸುಸ್ಥಿರ ಪ್ರಗತಿಗೆ ಬದ್ಧತೆಯನ್ನು ಪ್ರದರ್ಶಿಸಿದವು ಗಳನ್ನು ಮನ್ನಿಸಲಾಗಿದೆ. ಅಲ್ಲದೆ, ಇದು ರಾಷ್ಟ್ರೀಯ ಬ್ರ್ಯಾಂಡ್‌ಗಳಾಗಿ ವ್ಯಾಪಿಸಿಕೊಳ್ಳುವು ದರ ಜೊತೆಗೆ ಭಾರತದ ಉದ್ಯಮಶೀಲತೆ ಭವಿಷ್ಯವನ್ನೂ ರೂಪಿಸುತ್ತಿವೆ. 

   ದೇಶದ 2ನೇ ಮತ್ತು 3ನೇ ಹಂತದ ನಗರಗಳೂ ಸೇರಿದಂತೆ 500 ಕ್ಕೂ ಹೆಚ್ಚು ಕಂಪನಿಗಳು ಇಜಿಎ ಯಲ್ಲಿ ಭಾಗವಹಿಸಿದ್ದವು. ಪ್ರಮುಖ ವಲಯಗಳಾದ ಗ್ರಾಹಕರು, ಹಣಕಾಸು ಸೇವೆ ಗಳು, ಜೀವ ವಿಜ್ಞಾನ ಮತ್ತು ಆರೋಗ್ಯ ಸೇವೆ, ತಂತ್ರಜ್ಞಾನ, ಮಾಧ್ಯಮ ಮತ್ತು ಟೆಲಿಕ ಮ್ಯೂನಿಕೇಶನ್ಸ್ (ಟಿಎಂಟಿ) ಮತ್ತು ಎನರ್ಜಿ, ಸಂಪನ್ಮೂಲಗಳು ಮತ್ತು ಉದ್ಯಮಗಳು (ಇಆರ್‌&ಐ) ಇತ್ಯಾದಿಯಿಂದ 33 ವಿಜೇತರನ್ನು ಹೆಸರಿಸಲಾಗಿತ್ತು. ಭಾಗವಹಿಸಿದ ಕೌಟುಂ ಬಿಕ ಉದ್ಯಮವು 1,000 ಕೋಟಿ ರೂ. ಇಂದ 5000 ಕೋಟಿ ರೂ.ವರೆಗಿನ ವಹಿವಾಟನ್ನು ಹೊಂದಿದ್ದು, ಗಮನಾರ್ಹ ಪ್ರಮೋಟರ್ ಮಾಲೀಕತ್ವವನ್ನು (26% ಗೂ ಹೆಚ್ಚು) ಹೊಂದಿ ದ್ದವು. ಈ ಉದ್ಯಮಗಳು ಅಪಾರ ಬೆಳವಣಿಗೆಯನ್ನು ಪ್ರದರ್ಶಿಸಿದ್ದು, ಮಾರ್ಕೆಟ್ ಲೀಡರ್‌ಗಳಾಗುವ ಅವಕಾಶವನ್ನು ಹೊಂದಿವೆ.

   “ಭಾರತದ 2ನೇ ಹಂತದ ನಗರಗಳು ಮತ್ತು ಔದ್ಯಮಿಕ ಕೇಂದ್ರಗಳಲ್ಲಿ, ಎಲೆಮರೆಯ ಕಾಯಿಯಂತೆ ಬೆಳೆದು, ಸ್ಥಳೀಯ ಆರ್ಥಿಕತೆಯಲ್ಲಿ ಪರಿವರ್ತನೆಯನ್ನು ಉಂಟುಮಾಡಿದ ಉದ್ಯಮಗಳಿವೆ. ಇವು ಉದ್ಯೋಗಗಳನ್ನು ಸೃಷ್ಟಿಸುತ್ತಿವೆ ಮತ್ತು ತಮ್ಮ ಉದ್ಯಮವನ್ನು ವಿಸ್ತರಿಸುತ್ತಿವೆ. ಆರಂಭ ಹೇಗೇ ಇದ್ದರೂ ಅಪಾರ ಬೆಳವಣಿಗೆ ಕಂಡಿರುವ ಮತ್ತು ಅನ್ವೇಷಣೆ ಯನ್ನು ಪ್ರದರ್ಶಿಸಿರುವ ಮತ್ತು ಸಹಿಷ್ಣುತೆಯನ್ನು ಸಾಧಿಸಿರುವ ಉದ್ಯಮದ ಯಶಸ್ಸಿನ ಕಥೆಗಳನ್ನು ಎಂಟರ್‌ಪ್ರೈಸ್ ಗ್ರೋತ್ ಅವಾರ್ಡ್ಸ್‌ ಗುರುತಿಸುತ್ತಿದೆ.

   ಅವರ ಸಾಧನೆಗಳನ್ನು ಸಂಭ್ರಮಿಸುವ ಮೂಲಕ, ಭಾರತದ ಆರ್ಥಿಕತೆಯನ್ನು ರೂಪಿಸುವ ಮತ್ತು ಇನ್ನಷ್ಟು ಉದ್ಯಮಗಳು ಸುಸ್ಥಿರತೆಯ ಕಡೆಗೆ ಸಾಗುವುದಕ್ಕೆ ಪ್ರೇರೇಪಿಸುವ ಉದ್ಯಮ ವನ್ನು ನಾವು ಪ್ರೋತ್ಸಾಹಿಸುವುದಕ್ಕೆ ಬದ್ಧವಾಗಿದ್ದೇವೆ” ಎಂದು ಡೆಲಾಯ್ಟೆ ಇಂಡಿಯಾದ ಡೆಲಾಯ್ಟೆ ಪ್ರೈವೇಟ್‌ನ ಪಾರ್ಟ್ನರ್ ಮತ್ತು ಲೀಡರ್ ವಿಭಾಗದ ಕೆ.ಆರ್‌.ಶೇಖರ್ ಹೇಳಿ ದ್ದಾರೆ.

Recent Articles

spot_img

Related Stories

Share via
Copy link