ನವದೆಹಲಿ:
ಮಹತ್ವದ ಬೆಳವಣಿಗೆಯಲ್ಲಿ ವಂಚನೆಯ ವಹಿವಾಟಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸೆಬಿ ಉದ್ಯಮಿ ಮೆಹುಲ್ ಚೋಕ್ಸಿಗೆ ಬಹುಕೋಟಿ ರೂಗಳ ಡಿಮ್ಯಾಂಡ್ ನೋಟಿಸ್ ನೀಡಿದೆ.
ಮೂಲಗಳ ಪ್ರಕಾರ ಗೀತಾಂಜಲಿ ಜೆಮ್ಸ್ ಲಿಮಿಟೆಡ್‌ನ ಷೇರುಗಳಲ್ಲಿ ವಂಚನೆಯ ವಹಿವಾಟಿಗೆ ಸಂಬಂಧಿಸಿದ ಪ್ರಕರಣದಲ್ಲಿ 5.35 ಕೋಟಿ ರೂಪಾಯಿ ಪಾವತಿಸುವಂತೆ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಗೆ ಸೆಬಿ ಗುರುವಾರ ನೋಟಿಸ್ ನೀಡಿದೆ. ಪಾವತಿಗೆ 15 ದಿನಗಳ ಗಡುವು ನೀಡಿದ್ದು, ಒಂದು ವೇಳೆ ಅವರು ವಿಫಲವಾದರೆ ಬಂಧಿಸಿ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡುವುದಾಗಿ ಸೆಬಿ ಎಚ್ಚರಿಸಿದೆ. ಚೋಕ್ಸಿಗೆ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ವಿಧಿಸಿದ ದಂಡವನ್ನು ಪಾವತಿಸಲು ವಿಫಲವಾದ ನಂತರ ಈ ಬೇಡಿಕೆ ನೋಟಿಸ್ ಬಂದಿದೆ.