ಶಿರಸಿ:
ಇದೇ ಶನಿವಾರ ಮತ್ತು ರವಿವಾರ ರಂದು ಶಿರಸಿ ನಗರದ ಯೋಗ ಮಂದಿರದಲ್ಲಿ ಎರಡು ದಿನಗಳ ಡೇರೆಯ ಮೇಳ ಆಯೋಜನ ಗೊಂಡಿದೆ. ಪ್ರತೀವರ್ಷದಂತೆ ಪ್ರಸ್ತುತ ಮೇಳವನ್ನು ಶ್ರೀಮತಿ ಅಂಜನಾ ಹೆಗಡೆ ಮತ್ತು ಶ್ರೀಮತಿ ವೇದಾ ನೀರ್ನಹಳ್ಳಿ ಸಂಘಟಿಸಿದ್ದು ವನಸ್ತ್ರೀಯ ಮಹಿಳೆಯರೂ ಪಾಲ್ಗೊಳ್ಳಲಿದ್ದಾರೆ. ಜುಲೈ 19 ರ ಬೆಳಿಗ್ಗೆ 10.30 ಕ್ಕೆ ಕಾರ್ಯಕ್ರಮವು ಆರಂಭಗೊಳ್ಳಲಿದೆ.ಎರಡೂ ದಿನವೂ ಸಂಜೆ ಆರು ಗಂಟೆಯವರೆಗೆ ಮೇಳ ನಡೆಯುತ್ತದೆ.ಶನಿವಾರ (19) ಡೇರೆಮೇಳದ ಉದ್ಘಾಟನೆಯನ್ನು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಬಿ ಆರ್ ಸತೀಶ ಅವರು ನಡೆಸಿಕೊಡಲಿದ್ದಾರೆ.
ಯೋಗ ಮಂದಿರದ ಅಧ್ಯಕ್ಷರಾದ ಎಸ್ ಎಸ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.ಅತಿಥಿಗಳಾಗಿ ವಿಶ್ವೇಶ್ವರ ಭಟ್ .ಕದಂಬ ಮಾರ್ಕೇಟಿಂಗ್
ಆರ್ ಟಿ ಪಾಟೀಲ್. ಪ್ರಾಧ್ಯಾಪಕರು ತೋಟಗಾರಿಕಾ ಮತ್ತು ಪಾರೆಸ್ಟ್ರಿ ಕಾಲೇಜು.ರೂಪಾ ಪಾಟೀಲ್ ಕೆವಿಕೆ ಮುಖ್ಯಸ್ಥರು.
ಶೈಲಜಾ ಗೊರನ್ಮನೆ ವನಸ್ತ್ರೀ ಟ್ರಸ್ಟಿ ಪಾಲ್ಗೊಳ್ಳಲಿದ್ದಾರೆ.ಡೇರೆ ಮೇಳದಲ್ಲಿ ಪಾಲ್ಗೊಳ್ಳಲು ಆಸಕ್ತರು ಅಂಜನಾ ಹೆಗಡೆ(9481111112) ಹಾಗೂ ವೇದಾ ಹೆಗಡೆ ನೀರ್ನಹಳ್ಳಿ (9448993304) ಇವರಿಗೆ ಪೋನ್ ಮಾಡಿ ಶುಕ್ರವಾರದ ಸಂಜೆಯೊಳಗೆ ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.








