ಮನೆ ಬಾಗಿಲಿಗೆ ಬರಲಿದೆ ದೇವಸ್ಥಾನದ ಪ್ರಸಾದ….!

ಬೆಂಗಳೂರು

    ಕರ್ನಾಟಕದ ಪ್ರತಿ ದೇವಾಲಯಗಳ ಪ್ರಸಾದವನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಜಾರಿಗೆ ಮುಜರಾಯಿ ಇಲಾಖೆ  ಚಿಂತನೆ ನಡೆಸಿದೆ. ಆ ಮೂಲಕ ರಾಜ್ಯದ ಜನರಿಗೆ ಮುಜರಾಯಿ ಇಲಾಖೆಯಿಂದ ಗುಡ್ ನ್ಯೂಸ್​ ನೀಡಿದೆ. ಈ ಕುರಿತಾಗಿ ಮುಜುರಾಯಿ ಸಚಿವರ ಜೊತೆ ಚರ್ಚೆ ಮಾಡಿ ಶೀಘ್ರದಲ್ಲೇ ಜಾರಿ ಮಾಡಲಾಗುವುದು ಎಂದು ಟಿವಿ9 ಗೆ ಮುಜುರಾಯಿ ಇಲಾಖೆ ಆಯುಕ್ತ ವೆಂಕಟೇಶ್ ಮಾಹಿತಿ ನೀಡಿದ್ದಾರೆ. 

   ಸದ್ಯ ಮುಜರಾಯಿ ಇಲಾಖೆ ಹೊಸ ಹೊಸ ತಂತ್ರಜ್ಞಾನವನ್ನ ಅಳವಡಿಸಿಕೊಂಡು ಜನರಿಗೆ ಸೇವೆ ನೀಡಲು ಹಲವಾರು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈಗಾಗಲೇ ಆನ್ ಲೈನ್ ಸೇವೆ, ಬುಕ್ಕಿಂಗ್ ಅಂತಾ ಜಾರಿ ಆಗಿದೆ. ಈಗ ಮತ್ತೊಂದು ಹೊಸ ಯೋಜನೆ ಜಾರಿಗೆ ಪ್ಲ್ಯಾನ್ ಮಾಡಲಾಗುತ್ತಿದೆ. ಇನ್ನು ಈ ಹೊಸ ಯೋಜನೆಯಿಂದ ಮನೆಯಲ್ಲೇ ಕುಳಿತು ಪ್ರಸಿದ್ದ ದೇವಾಲಯಗಳ ಪ್ರಸಾದವನ್ನ ಸ್ವೀಕರಿಬಹುದಾಗಿದೆ. 

   ಕರ್ನಾಟಕ ರಾಜ್ಯ ವ್ಯಾಪಿ ಇರುವ ಯಾವುದೇ ದೇವಸ್ಥಾನ ಪ್ರಸಾದವನ್ನ ಆನ್​ ಲೈನ್​ಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಪ್ರಸಾದ ತಂದು ಕೊಡುವ ಯೋಜನೆ ಶೀಘ್ರವೇ ಜಾರಿಗೆ ತರಲು ಚಿಂತನೆ ನಡೆದಿದೆ. ಈ ಕುರಿತಾಗಿ ಅಂಚೆ ಇಲಾಖೆ ಮತ್ತು ಖಾಸಗಿ ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ. ಪ್ರಸಾದಕ್ಕೆ ಎಷ್ಟು ದರ ಇದೆಯೋ ಅದರ ಜೊತೆಗೆ ಡೆಲಿವರಿ ದರ ಸೇರಿಸಿ ಮನೆ ಬಾಗಿಲಿಗೆ ಪ್ರಸಾದ ನೀಡುವ ದರವನ್ನು ನಿಗದಿ ಮಾಡಲಾಗುತ್ತಿದೆ. 

   ಕರ್ನಾಟಕದ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಕೆ ಮಾಡಬೇಕು ಎಂದು ಇತ್ತೀಚೆಗೆ ಆದೇಶ ಹೊರಡಿಸಲಾಗಿತ್ತು. ದೇವಸ್ಥಾನದ ಸೇವೆಗಳಿಗೆ, ದೀಪಗಳಿಗೆ, ಪ್ರಸಾದ ತಯಾರಿಕೆ ಮತ್ತು ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚನೆ ನೀಡಲಾಗಿತ್ತು.

Recent Articles

spot_img

Related Stories

Share via
Copy link