ಕೊರಟಗೆರೆ:
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಶಾಸಕ ಡಾ.ಜಿ.ಪರಮೇಶ್ವರ ಮತ ಯಾಚಿಸಿ ಮಾತನಾಡುತ್ತಿರುವುದು.
ತುಮಕೂರು ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಉತ್ತಮ ಜನಸಂಪರ್ಕದ ಅಭ್ಯರ್ಥಿಯಾದ ರಾಜೇಂದ್ರರಾಜಣ್ಣನವರಿಗೆ ಪ್ರಥಮ ಪ್ರಾಶಸ್ಯದ ಮತ ನೀಡಿ, ಇತರರ ಮಾತಿಗೆ ಕಿವಿಕೊಟ್ಟು ಎರಡು, ಮೂರು ಪ್ರಾಶಸ್ತ್ಯದ ಮತ ಹಾಕಲೇಬೇಡಿ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ಡಿಸೆಂಬರ್ 07ರ ಮಂಗಳವಾರ ತಾಲ್ಲೂಕಿನ ಗ್ರಾಮಪಂಚಾಯತಿ ಸದಸ್ಯರುಗಳನ್ನು ಭೇಟಿಯಾಗಿ ಪಕ್ಷದ ಅಭ್ಯರ್ಥಿ ರಾಜೇಂದ್ರ ಪರ ಮತ ಯಾಚಿಸಿ ಮಾತನಾಡಿದರು. ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗಾಗಿ ಜನರಿಗೆ ಸ್ಪಂದಿಸುವ ಪ್ರತಿನಿಧಿ ಬೇಕಾಗಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಸದಾ ಜನಸಂಪರ್ಕದಲ್ಲಿ ಇದ್ದು, ಸ್ಥಳೀಯ ಯುವಕರಾಗಿ ಸಹಕಾರ ಕ್ಷೇತ್ರದಲ್ಲಿ ಈಗಾಗಲೆ ರೈತರಿಗೆ, ಬಡ ಜನರಿಗೆ ಸಾಕಷ್ಟು ಸೇವೆ ಮಾಡಿದ್ದಾರೆ.
ಅವರು ವಿಧಾನಪರಿಷತ್ ಸದಸ್ಯರಾದ ಮೇಲೆ ಕೊರಟಗೆರೆ ಕ್ಷೇತ್ರಕ್ಕೂ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿಸಿಕೊಳ್ಳಬಹುದು. ನಮ್ಮ ಕ್ಷೇತ್ರದಲ್ಲಿ ಹೆಚ್ಚು ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ಇದ್ದು, ಕೊರಟಗೆರೆ ಕ್ಷೇತ್ರ ರಾಜೇಂದ್ರರವರಿಗೆ ಅತಿ ಹೆಚ್ಚು ಮತಗಳನ್ನು ನೀಡಲಿದೆ ಎಂದರು.
ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಮತದಾರರು ಮತದಾನ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 2 ರ ರಾಜೇಂದ್ರ ರಾಜಣ್ಣರವರಿಗೆ 1 ಎಂದು ಬರೆಯುವ ಮುಖಾಂತರ ಮತ ನೀಡಿ. ಮತದಾನ ಕೇಂದ್ರದಲ್ಲಿ ನೀಡುವ ಪೆನ್ನನ್ನೇ ಬಳಸಬೇಕಿದೆ, ಇತರರು ಬೇರೆ ರೀತಿಯಲ್ಲಿ ದಾರಿ ತಪ್ಪಿಸುವ ಹಾಗೆ ಹೇಳಿದರೂ ಯಾವುದೇ ಪ್ರಾಶಸ್ತ್ಯದ ಮತಗಳನ್ನು ಹಾಕಬೇಡಿ. ಒಂದು ವೇಳೆ ಅದು ತಪ್ಪಾದರೆ ನಿಮ್ಮ ಮತ ಹಾಳಾಗುತ್ತದೆ.
ಕೊರಟಗೆÀರೆ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಇದನ್ನು ಇತ್ತೀಚೆಗೆ ವಿರೋಧಪಕ್ಷದವರ ಬಾಯಿಯಿಂದಲೆ ಕೇಳಿದ್ದೀರಿ. ರಾಜೇಂದ್ರರವರು ಗೆದ್ದರೆ ಪಂಚಾಯಿತಿಗಳ ಅಭಿವೃದ್ಧಿಗೆ ಸಹಕಾರವಾಗುತ್ತದೆ. ಇದಕ್ಕಾಗಿ ಅವರನ್ನು ಗೆಲ್ಲಿಸಲೇಬೇಕಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
