ಪೂರ್ಣ ಬಹುಮತದ ಬಿಜೆಪಿ ಸರಕಾರದಿಂದ ಮಾತ್ರ ಕರ್ನಾಟಕದ ಸಮಗ್ರ ಅಭಿವೃದ್ಧಿ: ಅಮಿತ್ ಶಾ

ಬೆಂಗಳೂರು

    ಪೂರ್ಣ ಬಹುಮತದ ಸರಕಾರದಿಂದ ಮಾತ್ರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ನೆನಪಿಟ್ಟು ರಾಜ್ಯದಲ್ಲಿ ಬಿಜೆಪಿಯನ್ನೇ ಬೆಂಬಲಿಸಿ ಎಂದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

   ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗೊರಟಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿ ಅನಾವರಣ ಮತ್ತು ಹುತಾತ್ಮರ ಸ್ಮಾರಕ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ತುಷ್ಟೀಕರಣ, ಮತಬ್ಯಾಂಕ್ ರಾಜಕೀಯದಿಂದಾಗಿ ಹೈದರಾಬಾದ್ ಕರ್ನಾಟಕದ ಮುಕ್ತಿಗಾಗಿ ಪ್ರಯತ್ನ ನಡೆಯಲಿಲ್ಲ. ಬಿಜೆಪಿ ತುಷ್ಟೀಕರಣ ರಾಜಕೀಯದಲ್ಲಿ ನಂಬಿಕೆ ಇಟ್ಟಿಲ್ಲ. ಕಾಂಗ್ರೆಸ್ ಪಕ್ಷವು ಮತಬ್ಯಾಂಕ್ ಗಾಗಿ ಶೇ 4ರಷ್ಟು ಮೀಸಲಾತಿಯನ್ನು ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟ ಪಕ್ಷ ಎಂದು ಆಕ್ಷೇಪಿಸಿದರು.

    ಒಳಮೀಸಲಾತಿಯ ಮೂಲಕ ಸಾಮಾಜಿಕ ನ್ಯಾಯ ನೀಡಿದ ಪಕ್ಷ ಬಿಜೆಪಿ. ಕಾಂಗ್ರೆಸ್ ಪಕ್ಷವು ತುಷ್ಟೀಕರಣ ರಾಜಕೀಯಕ್ಕಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟಿತ್ತು. ಅದನ್ನು ನಾವು ಬದಲಿಸಿದ್ದೇವೆ. ಕರ್ನಾಟಕದ ಒಳಿತನ್ನು ಕಾಂಗ್ರೆಸ್ ಪಕ್ಷ ಮಾಡಲಾರದು. ಅವರಿಗೆ ಕರ್ನಾಟಕವನ್ನು ಎಟಿಎಂ ಮಾಡುವ ಗುರಿ ಇದೆ. ಕಾಂಗ್ರೆಸ್ ಭ್ರಷ್ಟಾಚಾರವನ್ನು ಸಹಿಸಿಕೊಳ್ಳದಿರಿ ಎಂದು ತಿಳಿಸಿದರು.

    ಜೆಡಿಎಸ್ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದ ಎರಡು ಮುಖಗಳು. ಅವರನ್ನು ಅಧಿಕಾರದಿಂದ ದೂರವಿಡಿ ಎಂದು ಮನವಿ ಮಾಡಿದರು. ಯಡಿಯೂರಪ್ಪ ಅವರು ದಾಸ್ಯವನ್ನು ನೆನಪಿಸುವ ಹೈದರಾಬಾದ್ ಕರ್ನಾಟಕ ಎಂಬ ಹೆಸರನ್ನು ಬದಲಿಸಿ ಕಲ್ಯಾಣ ಕರ್ನಾಟಕ ಎಂದು ಬದಲಿಸಿದರು. ಅಲ್ಲದೆ, ಈ ಭಾಗಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ಆ ಮೊತ್ತವನ್ನು 5 ಸಾವಿರ ಕೋಟಿಗೆ ಬಸವರಾಜ ಬೊಮ್ಮಾಯಿ ಅವರು ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.

    ಬಿಜೆಪಿ ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ವಿವರಿಸಿದ ಅವರು, ಕಿಸಾನ್ ಸಮ್ಮಾನ್, ಆಯುಷ್ಮಾನ್ ಮತ್ತಿತರ ಯೋಜನೆಗಳನ್ನು ಗಮನಿಸಿ ಬಿಜೆಪಿಯನ್ನೇ ಮತ್ತೆ ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದರು. ಇದಕ್ಕಾಗಿ ಶ್ರಮಿಸುವಂತೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

    ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಕನಸು ನನಸಾಗುತ್ತಿದೆ. 370ನೇ ವಿಧಿಯನ್ನು ರದ್ದು ಮಾಡಿ ನಾವು ಕಾಶ್ಮೀರವನ್ನು ನಮ್ಮದಾಗಿಸಿಕೊಂಡಿದ್ದೇವೆ. ಇವೆಲ್ಲವನ್ನೂ ಕಾಂಗ್ರೆಸ್ ತಡೆಹಿಡಿದಿತ್ತು ಎಂದು ನೆನಪಿಸಿದರು. ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಕೊಡಿ ಎಂದು ತಿಳಿಸಿದರು.

    ಇದೊಂದು ಅವಿಸ್ಮರಣೀಯ ಸ್ಮಾರಕ. ಈ ಸ್ಮಾರಕಕ್ಕೆ ನಾನೇ ಶಿಲಾನ್ಯಾಸ ಮಾಡಿದ್ದೆ ಎಂದ ಅವರು, ಬಿಜೆಪಿಗೆ ರಾಜ್ಯದಲ್ಲಿ ಬಹುಮತ ಕೊಟ್ಟರೆ ಈ ಸ್ಮಾರಕವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ಇದಕ್ಕಾಗಿ 50 ಕೋಟಿ ಮೀಸಲು ಇಡಲಾಗುವುದು ಎಂದು ಪ್ರಕಟಿಸಿದರು.

   ಕ್ರೂರ ನಿಜಾಮರಿಂದಾಗಿ ಈ ಭಾಗ ಸ್ವಾತಂತ್ರ್ಯ  ಪಡೆದಿರಲಿಲ್ಲ. ಹೈದರಾಬಾದ್ ವಿಮೋಚನೆಯನ್ನು ನಾವು ಆಚರಿಸಲು ಸೂಚಿಸಿದ್ದೇವೆ. ತೆಲಂಗಾಣದಲ್ಲಿ ಇದನ್ನು ಆಚರಿಸುತ್ತಿಲ್ಲ ಎಂದು ತಿಳಿಸಿದರು.

    ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ಭಾಗಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರಿಗೆ ಗೌರವ ನಮನಗಳು ಎಂದರು. ಗೊರಟಾದಲ್ಲಿ ಇಂದು ಹುತಾತ್ಮರ ಸ್ಮಾರಕ ರಚಿಸಲಾಗಿದೆ. 20 ಅಡಿಯ ಪುತ್ಥಳಿಯನ್ನೂ ಅನಾವರಣ ಮಾಡಲಾಗಿದೆ ಎಂದ ಅವರು, ಬಸವಣ್ಣನವರು ಶ್ರೇಷ್ಠ ವ್ಯಕ್ತಿ. ಅವರಿಗೆ ನಮನಗಳು ಎಂದರಲ್ಲದೆ, ಗುರುನಾನಕ ಸಾಹೇಬ್ ಝೀರಾ, ನರಸಿಂಹ ಝರಣಿಗೆ ನಮನಗಳು ಎಂದರು.

    ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಮಾತನಾಡಿ, ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಮೋಚನೆ ಕೊಟ್ಟವರು ವಲ್ಲಭಭಾಯಿ ಪಟೇಲ್ ಅವರು. ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಯಡಿಯೂರಪ್ಪ ಅವರು ಮರುನಾಮಕರಣ ಮಾಡಿದ್ದಾರೆ. ಇಲ್ಲಿ ಹುತಾತ್ಮರಾದವರೆಲ್ಲರೂ ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ ಎಂದರು.

    ಕ್ರಾಂತಿಕಾರಿ ಮತ್ತು ಅಹಿಂಸಾ ಹೋರಾಟದಿಂದ ಸ್ವಾತಂತ್ರ÷್ಯ ಬಂದಿದೆ. ಒಂದೇ ಕುಟುಂಬದಿAದ ನಮಗೆ ಸ್ವಾತಂತ್ರ್ಯ ಬಂದಿಲ್ಲ ಎಂದು ನುಡಿದರು. ಸ್ವಾತಂತ್ರ÷್ಯದ ನಂತರ ಇತಿಹಾಸವನ್ನು ತಿರುಚುವ ಕಾರ್ಯವೂ ನಡೆದಿದೆ ಎಂದು ತಿಳಿಸಿದರು. ಇಲ್ಲಿ 200 ಜನರ ಹತ್ಯೆ ಆಗಿದೆ. ಹಿಂದೂಗಳ ಮೇಲೆ ದಬ್ಬಾಳಿಕೆಯೂ ಆಗ ನಡೆದಿತ್ತು ಎಂದು ನೆನಪಿಸಿದರು. ಪಕ್ಷದ ಹಿರಿಯ ಮುಖಂಡ- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಸ್ಮಾರಕ ಮತ್ತು ಪುತ್ಥಳಿಯನ್ನು 4 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಬಿಜೆಪಿ ಸರಕಾರವು ಈ ಗ್ರಾಮ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ತಿಳಿಸಿದರು.

    ಗೊರಟಾ ಹತ್ಯಾಕಾಂಡದಲ್ಲಿ ಮಡಿದವರಿಗೆ ನಮನಗಳು ಎಂದ ಅವರು, ಜಲಿಯನ್‌ವಾಲಾಬಾಗ್ ಹತ್ಯಾಕಾಂಡವು ಸ್ವಾತಂತ್ರ್ಯ ಸಂಗ್ರಾಮವನ್ನು ತೀವ್ರಗೊಳಿಸಲು ಕಾರಣವಾಯಿತು. ಅದೇ ಮಾದರಿಯಲ್ಲಿ ಗೊರಟಾದಲ್ಲಿ 200 ಜನರ ಹತ್ಯೆ ನಡೆದಿತ್ತು. ಭಾರತದ ಸೇನೆ ನಿಜಾಮರ ಆಡಳಿತ ಕೊನೆಗೊಳಿಸಲು ಕಾರಣವಾಯಿತು ಎಂದು ವಿವರಿಸಿದರು. ಚುನಾವಣೆ ಹತ್ತಿರದಲ್ಲಿದೆ. ಈ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಬಿಜೆಪಿ ಕೈಗೆ ಕೊಡಿ ಎಂದು ಮನವಿ ಮಾಡಿದರು.

    ಕಾಂಗ್ರೆಸ್‌ನವರ ಸಿಎಂ ಕನಸು ಮತ್ತು ಕುಣಿದಾಡುವಿಕೆಯು ಅಸೆಂಬ್ಲಿ ಚುನಾವಣೆ ನಂತರ ಕೊನೆಯಾಗಲಿದೆ. ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸದಿಂದ ನುಡಿದರು. ರಾಜ್ಯ ಯುವಮೋರ್ಚಾ ಮಾಜಿ ಅಧ್ಯಕ್ಷ ತುಳಸಿ ಮುನಿರಾಜು ಗೌಡ ಅವರು ಮಾತನಾಡಿ, 54 ಸಾವಿರ ಬೂತ್‌ಗಳಿಂದ ಹಣ ಸಂಗ್ರಹಿಸಿ ಪುತ್ಥಳಿ, ಸ್ಮಾರಕ ರಚನೆ ಮಾಡಲಾಗಿದೆ ಎಂದರು.

     ಕೇಂದ್ರ ಸಚಿವ ಭಗವಂತ ಖೂಬಾ, ಪಕ್ಷದ ತೆಲಂಗಾಣ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್, ರಾಜ್ಯದ ಸಚಿವ ಪ್ರಭು ಚೌಹಾಣ್, ಸಂಸದರಾದ ಉಮೇಶ್ ಜಾಧವ್, ರಾಜಾ ಅಮರೇಶ್ವರ ನಾಯಕ, ಶಾಸಕ ಶರಣು ಸಲಗರ್, ಬಸವರಾಜ ಮತ್ತಿಮೊಡ, ಡಾ.ಅವಿನಾಶ್ ಜಾಧವ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಶಶೀಲ್ ನಮೋಶಿ, ಬಿ.ಜಿಪ.ಪಾಟೀಲ್, ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಸಂದೀಪ್, ವಿಭಾಗ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳ್‌ಕರ್, ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap