ಫೆ.28ರವರೆಗೆ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರ ನಿರ್ಬಂಧ ವಿಸ್ತರಿಸಿ ಡಿಜಿಸಿಎ ಆದೇಶ

ನವದೆಹಲಿ:

ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ  ಸಂಚಾರದ ಆಗಮನವನ್ನು ನಿರ್ಬಂಧಿಸಲಾಗಿತ್ತು. ಈ ಆದೇಶವನ್ನು ಮತ್ತೆ ಫೆಬ್ರವರಿ 28, 2022ರವರೆಗೆ ವಿಸ್ತರಿಸಲಾಗಿದೆ.

          ಈ ಸಂಬಂಧ ಆದೇಶ ಹೊರಡಿಸಿರುವಂತ ಕೇಂದ್ರ ವಿಮಾನ ಸಚಿವಾಲಯ ( ಡಿಜಿಸಿಎ DGCA ) ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರದ ನಿರ್ಬಂಧವನ್ನು  ದಿನಾಂಕ 28-02-2022ರವರೆಗೆ ವಿಸ್ತರಣೆ ಮಾಡಿರೋದಾಗಿ ತಿಳಿಸಿದೆ.

ಇನ್ನೂ ಡಿಜಿಸಿಎನಿಂದ ಅನುಮತಿ ಪಡೆದಂತ ವಿಶೇಷ ವಿಮಾನಗಳ ಸಂಚಾರಕ್ಕೆ, ಅಂತರಾಷ್ಟ್ರೀಯ ಸರಕು ಸಾಗಾಣಿಕೆ ವಿಮಾನಗಳಿಗೆ ಈ ನಿರ್ಬಂಧ ಅನ್ವಯಿಸೋದಿಲ್ಲ ಎಂಬುದಾಗಿ ಹೇಳಿದೆ.

Recent Articles

spot_img

Related Stories

Share via
Copy link