ಇಸ್ರೇಲ್ :
ಭಾರತ ಸೇನೆಯ ನಿವೃತ್ತ ಅಧಿಕಾರಿ ಕರ್ನಲ್ ವೈಭವ್ ಅನಿಲ್ ಕಾಳೆ ಅವರು ಗಾಜಾ ಪಟ್ಟಿಯ, ರಫಾ ಭಾಗದಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. 2022ರಲ್ಲಿ ಭಾರತ ಸೇನೆಯಿಂದ ಕರ್ನಲ್ ವೈಭವ್ ಅನಿಲ್ ಕಾಳೆ ನಿವೃತ್ತಿ ಆಗಿದ್ದರು. ಆ ನಂತರ, ವಿಶ್ವಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಹಾಗಾದ್ರೆ ಕರ್ನಲ್ ವೈಭವ್ ಅನಿಲ್ ಕಾಳೆ ಅವರ ಸಾವಿಗೆ ಯಾವ ದೇಶ ಕಾರಣ? ಇಸ್ರೇಲ್ ದಾಳಿಯಲ್ಲಿ ಮೃತಪಟ್ಟರಾ ಭಾರತದ ಮಾಜಿ ಸೇನಾಧಿಕಾರಿ? ಬನ್ನಿ ತಿಳಿಯೋಣ.
ಇಸ್ರೇಲ್ & ಹಮಾಸ್ ನಡುವೆ ಭೀಕರ ಕಾಳಗ ನಡೆಯುತ್ತಿದೆ, ಇಸ್ರೇಲ್ ಸೇನೆ ಈಗಾಗಲೇ ಈ ಯುದ್ಧದಲ್ಲಿ ಭಾರಿ ದೊಡ್ಡ ಹಿಡಿತ ಸಾಧಿಸಿದೆ. ಯಾಕಂದ್ರೆ ತನ್ನಲ್ಲಿ ಇರುವ ಎಲ್ಲಾ ಕ್ರೂರ ಅಸ್ತ್ರಗಳನ್ನ ಇಸ್ರೇಲ್ ಬಳಸುತ್ತಿದೆ ಎಂಬ ಆರೋಪ ಇದೆ. ಇಂತಹ ಸಮಯದಲ್ಲೇ ಇಸ್ರೇಲ್ ದಾಳಿಯಲ್ಲಿ ವಿಶ್ವಸಂಸ್ಥೆ ಸಿಬ್ಬಂದಿ ಕೂಡ ಜೀವ ಬಿಡುತ್ತಿದ್ದಾರೆ ಎಂಬ ಆರೋಪ, ಗಂಭೀರ ಚರ್ಚೆಯನ್ನ ಹುಟ್ಟುಹಾಕಿದೆ. ಹೀಗಿದ್ದಾಗಲೇ ರಫಾ ಪ್ರದೇಶದಲ್ಲಿ ಭಾರತ ಮೂಲದ ಮಾಜಿ ಸೇನಾಧಿಕಾರಿ ಮೃತಪಟ್ಟಿದ್ದಾರೆ. ಹಾಗಾದರೆ ಇವರ ಸಾವಿಗೆ ಯಾವ ದೇಶ ಕಾರಣ? .
ಭಾರತೀಯ ಸೇನೆಯಿಂದ 2022ರಲ್ಲಿ ನಿವೃತ್ತರಾಗಿದ್ದ ಕರ್ನಲ್ ವೈಭವ್ ಅನಿಲ್ ಕಾಳೆ ಅವರು, ಭಾರತೀಯ ಸೇನೆಗಾಗಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸಿದ್ರು. ಹಾಗೇ ಉತ್ತಮ ಹೆಸರು ಕೂಡ ಪಡೆದಿದ್ದರು ಎನ್ನಲಾಗಿದೆ. ಇನ್ನು ಕೇವಲ 2 ತಿಂಗಳ ಹಿಂದೆ ಅವರು ಭದ್ರತಾ ಸಂಯೋಜಕ ಅಧಿಕಾರಿಯಾಗಿ ವಿಶ್ವಸಂಸ್ಥೆ ಸುರಕ್ಷತೆ & ಭದ್ರತಾ ವಿಭಾಗಕ್ಕೆ ಸೇರ್ಪಡೆ ಆಗಿದ್ದರು. ಹೀಗಿದ್ದಾಗ ರಫಾ ಪ್ರದೇಶದಲ್ಲಿ ಇಸ್ರೇಲ್ & ಹಮಾಸ್ ಬಂಡುಕೋರರ ನಡುವೆ ಘರ್ಷಣೆ ಆಗಿದೆ.
ಕಳೆದ ಹಲವು ದಿನದಿಂದ ರಫಾ ಪ್ರದೇಶ ನರಕವಾಗಿ ಬದಲಾಗಿದೆ. ಯಾಕಂದ್ರೆ ಈ ಜಾಗಕ್ಕೆ ಇಸ್ರೇಲ್ ಸೇನೆ ನುಗ್ಗಿದ್ದು, ಹಮಾಸ್ ಜೊತೆಗೂ ತಿಕ್ಕಾಟ ಕೂಡ ತೀವ್ರವಾಗಿದೆ ಎನ್ನಲಾಗಿದೆ. ಈ ವೇಳೆ ಯೂರೋಪಿಯನ್ ಆಸ್ಪತ್ರೆಗೆ ತೆರಳುತ್ತಿದ್ದ ವಿಶ್ವಸಂಸ್ಥೆ ವಾಹನದ ಮೇಲೆ ಕೂಡ ದಾಳಿ ನಡೆದು, ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಈ ದಾಳಿಯಲ್ಲಿ ಮತ್ತೊಬ್ಬ ಸಿಬ್ಬಂದಿಗೂ ಗಂಭೀರ ಗಾಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಭಾರತ ಸೇನೆಯ ಮಾಜಿ ಅಧಿಕಾರಿ ಸಾವಿಗೆ ಯಾವ ದೇಶ ಕಾರಣ? ಎಂಬ ಪ್ರಶ್ನೆ ಉತ್ತರ ಸಿಕ್ಕಿಲ್ಲ.
ಭಾರತ ಸೇನೆಯ ನಿವೃತ್ತ ಅಧಿಕಾರಿ ಕರ್ನಲ್ ವೈಭವ್ ಅನಿಲ್ ಕಾಳೆ ಅವರ ಸಾವಿನ ಕುರಿತಾಗಿ ಸಮಗ್ರ ತನಿಖೆಗೆ ವಿಶ್ವಸಂಸ್ಥೆ ಆದೇಶ ನೀಡಿದೆ. ಮತ್ತೊಂದು ಕಡೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಈ ಬಗ್ಗೆ ಮಾತನಾಡಿ ಸಂತಾಪ ಸೂಚಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ವಿಶ್ವಸಂಸ್ಥೆ ಇಸ್ರೇಲ್ & ಹಾಮಾಸ್ ಕಿತ್ತಾಟವನ್ನು ಗಂಭೀರವಾಗಿ ಸ್ವೀಕಾರ ಮಾಡಿದೆ. ಹಾಗೇ ಗಾಜಾದಲ್ಲಿ ಮಾನವೀಯ ನೆರವಿಗಾಗಿ ಕೆಲಸ ಮಾಡುತ್ತಿದ್ದ ಸುಮಾರು 190 ಸ್ವಯಂ ಸೇವಕರು & ವಿಶ್ವಸಂಸ್ಥೆಯ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ನಲ್ಲಿ ಈ ಘಟನೆ ಸಂಚಲನ ಸೃಷ್ಟಿ ಮಾಡಿದ್ದು, ಮುಂದೆ ಯಾವ ರೀತಿ ತಿರುವು ಪಡೆಯುತ್ತೆ? ಆಂತಾ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ