ಪಾವಗಡ
ಪಟ್ಟಣದಲ್ಲಿ ಇತ್ತೀಚಿಗೆ ಮನೆಗಳ್ಳರ ಹಾವಳಿ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಳ ಹಾಕುವ ನಿಟ್ಟಿನಲ್ಲಿ ಪಾವಗಡ ಪೊಲೀಸರು ವಿನೂತನ ಪ್ರಯತ್ನ ಮಾಡಿದ್ದಾರೆ.
ಮನೆ ಮಂದಿಯಲ್ಲ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋದಂತಹ ಸಂದರ್ಭದಲ್ಲಿ ಪಾವಗಡ ಪೊಲೀಸರಿಗೆ ಮಾಹಿತಿ ನೀಡಿ ನಾವು ನಿಮ್ಮ ಮನೆಗೆ ರಕ್ಷಣೆ ಕಲ್ಪಿಸುತ್ತೇವೆ ಎಂಬ ಮಾಹಿತಿ ಮತ್ತು ಪೊಲೀಸರನ್ನು ದೂರವಾಣಿ ಸಂಖ್ಯೆಗಳನ್ನು ಒಳಗೊಂಡಂತಹ ಸ್ಟಿಕ್ಕರ್ ಅನ್ನ ಪಾವಗಡ ಪಟ್ಟಣದ ಶ್ರೀನಿವಾಸನಗರ ನಾಗರಕಟ್ಟೆ ವೃತ್ತ ಸೇರಿದಂತೆ ವಿವಿಧಡೆ ಮನೆಗಳ ಬಾಗಿಲುಗಳ ಮೇಲೆ ಪೊಲೀಸರೇ ಸ್ವತಃ ಅಂಟಿಸಿ ಜಾಗೃತಿ ಮೂಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಪಾವಗಡ ವೃತ್ತ ನಿರೀಕ್ಷಕ ಎಂ ಆರ್ ಸುರೇಶ್ ಅವರು ಮನೆಗಳಿಂದ ಪ್ರವಾಸ ಅಥವಾ ಊರುಗಳಿಗೆ ಹೋಗುವ ಸಂದರ್ಭದಲ್ಲಿ ಬೆಲೆ ಬಾಳುವಂತಹ ವಸ್ತುಗಳನ್ನ ಜೋಪಾನವಾಗಿ ತಮ್ಮ ಜೊತೆಗೆ ತೆಗೆದುಕೊಂಡು ಹೋಗುವುದಾಗಲಿ ಬ್ಯಾಂಕಿನಲ್ಲಿ ಇರಿಸುವುದಾಗಲಿ ಮಾಡಬೇಕು ಅಥವಾ ತಾವು ಊರುಗಳಿಗೆ ಹೋದಂತಹ ಸಂದರ್ಭದಲ್ಲಿ ಪಾವಗಡ ಪೊಲೀಸರಿಗೆ ಮಾಹಿತಿ ನೀಡಿದರೆ ತಮ್ಮ ಮನೆಗಳ ಬಳಿ ಹೆಚ್ಚಿನ ಭದ್ರತೆ ವಹಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು
ಈ ಒಂದು ಜಾಗೃತಿ ಕಾರ್ಯದಲ್ಲಿ ಇಲಾಖೆಯ ಸಿಬ್ಬಂದಿಗಳಾದ ದೀಪಕ್, ತಳವಾರ ರಾಜು, ನಾಗೇಶ್, ಪ್ರವೀಣ್, ನವೀನ್, ಸ್ಥಳೀಯ ಯುವಕರಾದ ಗೋಪಾಲ ಮಿರ್ಚೀ, ಅಭಿ ಸೇರಿದಂತೆ ಹಲವರು ಹಾಜರಿದ್ದರು