ರಾಜಕಾರಣದಲ್ಲಿ ವಿಕಲಾಂಗ ಮಗು ಹುಟ್ಟಬಾರದು : ಸಿ ಟಿ ರವಿ

ಬೆಂಗಳೂರು

       ರಾಜಕಾರಣದಲ್ಲಿ ವಿಕಲಾಂಗ ಮಗು ಹುಟ್ಟಬಾರದು. ದಿವ್ಯಾಂಗ ಶಿಶು ಜನಿಸಿದರೆ ಅದರಿಂದ ಅವಕಾಶವಾದಿಗಳು ಲಾಭ ಮಾಡಿಕೊಳ್ಳುತ್ತಾರೆ. ಹಾಗಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಾರದಿದ್ದರೆ ವಸೂಲಿ ಕೇಂದ್ರಗಳು ಪ್ರಾರಂಭವಾಗಲಿವೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ವಿಧಾನಸಭೆಯಲ್ಲಿಂದು ಕಳವಳ ವ್ಯಕ್ತಪಡಿಸಿದರು.

     ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪರೋಕ್ಷವಾಗಿ ಜೆಡಿಎಸ್ ನ ಅವಕಾಶವಾದಿ ರಾಜಕಾರಣದ ಬಗ್ಗೆ ಸದನದಲ್ಲಿ ಟೀಕಾ ಪ್ರಹಾರ ನಡೆಸಿದರು.

     ಮಾಜಿ ಸಚಿವ ಸುರೇಶ್ ಕುಮಾರ್ ಅವರು ಹೇಳುತ್ತಿದ್ದಂತೆ ಸುಂದರ ದಂಪತಿಗೆ ಬಹಳ ಸಮಯದ ನಂತರ ವಿಕಾಲಂಗ ಮಗು ಜನಿಸಿತು. ಮಗುವನ್ನು ನೋಡಲು ಸುತ್ತಮುತ್ತಲಿನ ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದರು. ಆಗ ತಂದೆ ಮಗುವನ್ನು ನೋಡಲು ಟಿಕೆಟ್ ನಿಗದಿ ಮಾಡಿದ. ಹೆಚ್ಚು ಹಣ ಸಂಗ್ರವಾಗುತ್ತಿತ್ತು. ಸ್ವಲ್ಪ ಸಮಯದ ನಂತರ ಮಗು ಸತ್ತು ಹೋಯಿತು. ಕಲೆಕ್ಷನ್ ಕೂಡ ನಿಂತು ಹೋಯಿತು. ರಾಜಕಾರಣದಲ್ಲೂ ಇದೇ ಪರಿಸ್ಥಿತಿ ಇದೆ.

         ಅವಕಾಶವನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುವುದೇ ಆಗಿದೆ. 2004 ಮತ್ತು 2018 ರಲ್ಲಿ ಆದಂತೆ 2023 ರಕ್ಕೆ ಆಗಬಾರದು. ಹಾಗೇನಾದರೂ ಅತಂತ್ರ ಸ್ಥಿತಿ ನಿರ್ಮಾಣವಾದರೆ ವಸೂಲಿ ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು. ಜೆಡಿಎಸ್ ಪಕ್ಷವನ್ನು ಕಾಂಗ್ರೆಸ್ ಬಿ. ಟೀಂ ಎಂದು ಟೀಕೆ ಮಾಡಿತ್ತು. ಆದರೆ ನಮಗೆ ಎ ಮತ್ತು ಬಿ ಟೀಂ ಎಂಬುದಿಲ್ಲ. ನಮ್ಮದು ಸಿದ್ಧಾಂತ ಆಧಾರಿತ ಪಕ್ಷ. ನಮಗೆ ಎದುರಾಳಿಗಳು ಒಂದೇ ಟೀಂ ಎಂದರು.

       ಆಗ ಮಧ್ಯ ಪ್ರವೇಶಿಸಿದ ಜೆಡಿಎಸ್ ನ ಬಂಡೆಪ್ಪ ಕಾಶೆಂಪೂರ್, ನೀವು ಸರ್ಕಾರ ಹೇಗೆ ರಚಿಸಿದ್ದೀರಿ ಎಂಬುದನ್ನು ಪ್ರತಿಯೊಬ್ಬರೂ ನೋಡಿದ್ದಾರೆ. 2014 ರ ಲೋಕಸಭೆಯಲ್ಲಿ ನಾವು ನಾವು ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದೇವು. ಕಳೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿಗಳು ಸೋತಿರಬಹುದು. ತುಮಕೂರಿನಲ್ಲಿ ಎ ಮತ್ತು ಬಿ ಟೀಂ ಸೇರಿ ಸೋಲಿಸಿದರು. ಮುಂದಿನ ಚುನಾವಣೆ ಬಗ್ಗೆ ನೋಡೋಣ. ಫಲಿತಾಂಶದ ನಂತರ ಸರ್ಕಾರ ರಚನೆ ರಾಜ್ಯಪಾಲರ ಕೈಯಲ್ಲಿರಲಿದೆ ಎಂದು ಹೇಳಿದರು.

      ಬಿಜೆಪಿಯ ಚರಂತಿ ಮಠ್ ಮಾತನಾಡಿ, ಜೆಡಿಎಸ್ ನವರು ಕನಿಷ್ಠ 113 ಸ್ಥಾನಗಳನ್ನು ಗೆಲ್ಲುವ ಕುರಿತು ಗುರಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ಹೋಮ, ಹವನ ಮಾಡಿಸಲಿ. ಆದರೆ 37 ಮತ್ತು 40 ಸ್ಥಾನಗಳನ್ನು ಗೆಲ್ಲುವುದೇ ಇವರ ಗುರಿಯಾಗಿದೆ ಎಂದರು.

     ಜೆಡಿಎಸ್ ನ ಪುಟ್ಟೇಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಜೆಡಿಎಸ್ ನಿಂದ. ಇದನ್ನು ಮರೆತು ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link