ಡಿಜಿಟಲ್ ಆರೆಸ್ಟ್ ಮೂಲಕ ಮಾಜಿ ಶಾಸಕರಿಗೇ 30 ಲಕ್ಷ ರೂ. ವಂಚನೆ!

ಬೆಂಗಳೂರು:

    ಸೈಬರ್ ಕ್ರೈಂ ವಂಚನೆ ಜಾಲಕ್ಕೆ ಸಿಲುಕುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳನ್ನೂ ಈ ವಂಚಕರು ಟಾರ್ಗೆಟ್​ ಮಾಡುತ್ತಿದ್ದಾರೆ. ಅಂತಹದ್ದೇ ಒಂದು ಘಟನೆಯಲ್ಲಿ, ಮಾಜಿ ಶಾಸಕರೊಬ್ಬರಿಗೆ ಡಿಜಿಟಲ್ ಆರೆಸ್ಟ್  ಮಾಡುವ ಮೂಲಕ ಕಿಡಿಗೇಡಿಗಳು ಬರೋಬ್ಬರಿ 30 ಲಕ್ಷ ರೂ. ವಂಚಿಸಿದ್ದಾರೆ.

   ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಔರಾದ್​​ನ ಮಾಜಿ ಶಾಸಕ ಗುಂಡಪ್ಪ ವಕೀಲ್​ಗೆ ವಂಚನೆ ಮಾಡಲಾಗಿದೆ. ಆಗಸ್ಟ್ 12ರಂದು ಸಿಬಿಐ ಅಧಿಕಾರಿಗಳು ಅಂತ ಹೇಳಿ ಕರೆ ಮಾಡಿದ್ದ ವಂಚಕರು, ನೀವು ನರೇಶ್ ಗೋಯಲ್ ಮನಿ ಲಾಡರಿಂಗ್ ಕೇಸ್‌​ನಲ್ಲಿ ಭಾಗಿಯಾಗಿದ್ದೀರಿ. ನಿಮ್ಮ ಎಟಿಎಂ ಕಾರ್ಡ್‍ಗಳು ಸಿಕ್ಕಿದ್ದು, ಸಾಕಷ್ಟು ವ್ಯವಹಾರ ನಡೆದಿದೆ ಎಂದು ಡಿಜಿಟಲ್ ಆರೆಸ್ಟ್ ನಾಟಕವಾಡಿದ್ದಾರೆ.

    ಬಳಿಕ ನಿಮ್ಮದು ತಪ್ಪಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಿ. ಪ್ರಾಪರ್ಟಿ ತನಿಖೆ ಮಾಡಬೇಕೆಂದು 30 ಲಕ್ಷ ರೂ. ಡೆಪಾಸಿಟ್ ಮಾಡಿಸಿಕೊಂಡಿದ್ದಾರೆ. ಆನ್‍ಲೈನ್​ನಲ್ಲಿ ಜಡ್ಜ್ ಮುಂದೆ ಹಾಜರುಪಡಿಸಲಾಗುವುದು. ತನಿಖೆಯ ನಂತರ ಆ ಹಣವನ್ನು ಹಿಂದಿರುಗಿಸುವುದಾಗಿ ನಂಬಿಸಿದ್ದಾರೆ. ಹೀಗೆ ಸತತ ತಮ್ಮನ್ನು ಸಂಪರ್ಕಿಸುತ್ತಾ ಡಿಜಿಟಲ್ ಬಂಧನದಲ್ಲಿರಿಸಿ ಹಣದ ವ್ಯವಹಾರ ಮಾಡುತ್ತಿದ್ದ ವಂಚಕರ ಈ ವಂಚನೆ ಜಾಲ ಅರಿತ ಶಾಸಕ ಸದ್ಯ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಕೇಸ್ ದಾಖಲಿಸಿಕೊಂಡಿರುವ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

Recent Articles

spot_img

Related Stories

Share via
Copy link