ಸುಗಮ ಜೀವನಕ್ಕಾಗಿ ಎಲ್ಲರನ್ನೊಳಗೊಂಡ ಡಿಜಿಟಲ್ ಮೂಲ ಸೌಕರ್ಯ ಅಗತ್ಯ : ನಂದನ್ ನೀಲೇಕಣಿ

ಬೆಂಗಳೂರು

    ಕಳೆದ ಎರಡೂವರೆ ದಶಕಗಳಲ್ಲಿ ದೇಶದಲ್ಲಿ ಡಿಜಿಟಲ್ ಮೂಲ ಸೌಕರ್ಯ ಅಗಾಧವಾಗಿ ಬೆಳವಣಿಗೆ ಕಂಡಿದ್ದು, ಇದೀಗ ಅಂತರ್ ಸಾಗಾಣೆ ವ್ಯವಸ್ಥೆಯಲ್ಲಿ ಹೆಚ್ಚು ಜನರ ಸಹಭಾಗಿತ್ವದಡಿ ಎಲ್ಲರನ್ನೊಳಗೊಂಡ ಸಮಾಜ ನಿರ್ಮಿಸುವ ಮೂಲಕ ಸುಗಮ ಜೀವನಕ್ಕೆ ನಾಂದಿ ಹಾಡಬೇಕು? ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಸಂಸ್ಥಾಪಕ ಅಧ್ಯಕ್ಷ ನಂದನ್ ನೀಲೇಕಣಿ ಕರೆ ನೀಡಿದ್ದಾರೆ.

    ಸುಗಮ ಸಂಚಾರದ ಉದ್ದೇಶದಿಂದ ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಆಟೋ ರಿಕ್ಷಾ ಆಪ್ ಮೂಲಕ ಆಟೋಗಳ ಚಲನವಲನಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವ, ಗ್ರಾಹಕರು, ಆಹಾರ ಪೂರೈಕೆದಾರರು ಹೀಗೆ ಪ್ರತಿಯೊಬ್ಬರ ಸುಗಮ ಜೀವನಕ್ಕೆ ಇದು ಪೂರಕವಾಗಿದೆ. ಸಾಗಾಣೆ ವ್ಯವಸ್ಥೆಯಲ್ಲಿನ ಹೊಸ ಬೆಳವಣಿಗೆಗಳ ಕುರಿತು ಬೆಳಕು ಚೆಲ್ಲುವ ಉದ್ದೇಶದಿಂದ ನಗರದ ಕಾನ್ರಾಡ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಈ ವರ್ಷದ ಭವಿಷ್ಯದ ಸುಸ್ಥಿರ ನಗರಗಳಿಗಾಗಿ ?ಐಸಿಟಿ ವೇದಿಕೆ? ಕುರಿತ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿದ ನಂದನ್ ನೀಲೇಕಣಿ, ಡಿಜಿಟಲ್ ವ್ಯವಸ್ಥೆ ನಮಗೆ ಪ್ರಮುಖವಾಗಿದ್ದು, ಈ ವಲಯ ವೇಗವಾಗಿ ಬೆಳವಣಿಯಾಗುತ್ತಿದೆ. ಇದೀಗ ಡಿಜಿಟಲ್ ಮೂಲ ಸೌಕರ್ಯ ವಾಸ್ತುಶಿಲ್ಪದ ಬಗ್ಗೆ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ ಎಂದರು.

    ಭಾರತದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯ ಉತ್ತಮವಾಗಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಂಡ ಎಲ್ಲರ ವಿವರಗಳು ಇದೀಗ ಲಭ್ಯವಿದೆ. ಫಾಸ್ಟ್ ಟ್ಯಾಗ್ ಕೂಡ ಮತ್ತೊಂದು ಮಹತ್ವದ ಉಪಕ್ರಮವಾಗಿದೆ. ವಿಮಾನಗಳಲ್ಲಿ ಪ್ರಯಾಣಿಸಲು ಪ್ರಯಾಣದ ಟಿಕೆಟ್ ಗಳನ್ನು ಅಪ್ ಲೊಡ್ ಮಾಡಿದರೆ ಹೆಚ್ಚಿನ ತಪಾಸಣೆ ಕಡಿಮೆಯಾಗಿ ಸುಗಮ ಪ್ರಯಾಣಕ್ಕೆ ರಹದಾರಿಯಾಗಲಿದೆ. ನಮ್ಮ ಯಾತ್ರಿ ಆಟೋ ರಿಕ್ಷಾ ಆಫ್ ಅನ್ನು ಹೆಚ್ಚಿನ ಪ್ರಯಾಣಿಕರು ಬಳಸುತ್ತಿದ್ದು, ಸುಲಲಿತವಾಗಿ ವಾಹನಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತಿದೆ. ಈ ಆಪ್ ನಲ್ಲಿ ಬೆಂಗಳೂರಿನಲ್ಲಿ ಎಷ್ಟು ಆಟೋಗಳಿವೆ, ಎಲ್ಲಿ ಕಡಿಮೆ ಆಟೋಗಳಿವೆ. ಎಲ್ಲಿ ಸಂಚರಿಸಿದರೆ ಪ್ರಯಾಣಿಕರು ದೊರೆಯಬಹುದು ಎನ್ನುವ ಮಾಹಿತಿಯನ್ನು ಆಟೋ ಚಾಲಕರು ನೋಡಬಹುದಾಗಿದೆ. ಮೆಟ್ರೋ ರೈಲು ಸಹ ಉತ್ತಮವಾಗಿದ್ದು, ಹೀಗೆ ಒಂದೊಕ್ಕೊAದು ಸಂಬAಧ ಹೊಂದಿರುವ ಸಾಗಣೆ ವಲಯ ವ್ಯವಸ್ಥೆಯಿಂದ ಶತಕೋಟಿ ಜನರ ಬದುಕಿಗೆ ನೆರವಾಗಲಿದೆ ಎಂದರು.

    ಬೆಂಗಳೂರಿನಲ್ಲಿನ ಫ್ರಾನ್ಸ್ ರಾಯಭಾರಿ ಥಿಯರ‍್ರಿ ಬೆರ್ಥೆಲೋಟ್ ಭಾರತ ? ಫ್ರಾನ್ಸ್ ಸಹಭಾಗಿತ್ವ ಕುರಿತು ಮಾತನಾಡಿ, ಉಭಯ ದೇಶಗಳ ನಡುವೆ ಡಿಟಿಟಲ್ ವಲಯದಲ್ಲಿ ಬಲಿಷ್ಠ ದ್ವಿಪಕ್ಷೀಯ ಬಾಂಧವ್ಯವಿದೆ? ಎಂದರು.

    ಉಪರಾಯಭಾರಿ  ಬಿರ್ಗೆಲಿನ್ ಮಾತನಾಡಿ ವಿಶೇಷವಾಗಿ ಭಾರತಕ್ಕೆ ಸುಸ್ಥಿರ ತಂತ್ರಜ್ಞಾನ ಪರಿಹಾರಗಳು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಉಭಯ ದೇಶಗಳು ಅವಶ್ಯಕತೆಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು? ಎಂದರು.

    ಪ್ರೊಟಿಯನ್ ಇ ಗೌ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಸೇಥಿ ಮಾತನಾಡಿ, ನಾವು ಇ ಆಡಳಿತ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮುಂದಾದರೆ ಅದರ ವಿನ್ಯಾಸಕ್ಕೆ ಒತ್ತು ನೀಡುವುದು ಅಗತ್ಯವಿದೆ? ಎಂದರು.

    ಕರ್ನಾಟಕ ಡಿಜಿಟಲ್ ಆರ್ಥಿಕ ಅಭಿಯಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ಕುಮಾರ್ ಗುಪ್ತಾ ಮಾತನಾಡಿ, ?2022 ರಲ್ಲಿ ಬೆಂಗಳೂರಿನ ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಡಿಜಿಟಲ್ ಆರ್ಥಿಕತೆ 64 ಶತಕೋಟಿ ಡಾಲರ್ ನಷಷ್ಟಿತ್ತು, ಇದೀಗ 100 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. 2030 ರ ವೇಳೆಗೆ ಕರ್ನಾಟಕ ತಂತ್ರಜ್ಞಾನ ನವೋದ್ಯಮ ವಲಯದಲ್ಲಿ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಹೇಳಿದರು.

     ಐಟಿ ಆಪರೇಷನ್ಸ್ ನ ಉಪಾಧ್ಯಕ್ಷರಾದ ಸ್ಮಿತಿ ನೇಗಿ ಮಾತನಾಡಿ, ?ನಾವು 7 ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಬೆಂಬಲ ನೀಡುತ್ತಿದ್ದೇವೆ. ನಮ್ಮ ನಾವೀನ್ಯತೆಯ ಉತ್ಪನ್ನಗಳನ್ನು ಬಳಸಿದರೆ ಪ್ರಮುಖ ಮತ್ತು ಜಾಗತಿಕ ಹಳೆಯ ಸಮಸ್ಯೆಗಳಿಂದ ಹೊರ ಬರಬಹುದಾಗಿದೆ ಎಂದರು.

 

Recent Articles

spot_img

Related Stories

Share via
Copy link
Powered by Social Snap