ದಿಲೀಪ್‌ ಕುಮಾರ್‌ ಎ‌.ಆರ್. ರೆಹಮಾನ್ ಆಗಿದ್ದು ಹೇಗೆ ಗೊತ್ತಾ……?

ನವದೆಹಲಿ:

    ಭಾರತೀಯ ಸಂಗೀತ ಕ್ಷೇತ್ರದಲ್ಲಿ ನಿರ್ದೇಶಕ, ಗಾಯಕ ಎ. ಆರ್. ರೆಹಮಾನ್ ಅವರು ಅಗ್ರಗಣ್ಯ ಸಾಧನೆ ಮಾಡಿದ್ದಾರೆ. ಬಾಲಿವುಡ್ ನ ಅನೇಕ ಸಿನಿಮಾದಲ್ಲಿ ಹಾಡಿ ಜನಪ್ರಿಯರಾಗಿದ್ದ ಇವರು ಹಿಂದೂ ಕುಟುಂಬದಲ್ಲಿ ಜನಿಸಿದ್ದರೂ ಕೂಡ ತಮ್ಮ 23ನೇ ವಯಸ್ಸಿ ನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ರೆಹಮಾನ್ ಅವರ ತಂದೆಯ ಮರಣದ ನಂತರ ಅವರ ತಂಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆಗಲೇ ಅವರಿಗೆ ಇಸ್ಲಾಂ ಧರ್ಮದ ಕೆಲವು ಅಂಶಗಳು ಪ್ರೇರೇಪಿಸಲ್ಪಟ್ಟಿತ್ತು. ಹೀಗಾಗಿ ತಮ್ಮ ಹೆಸರನ್ನು ದಿಲೀಪ್ ಕುಮಾರ್‌  ಎಂದು ಇದ್ದದ್ದನ್ನು ಅಲ್ಲಾ ರಖಾ ರೆಹಮಾನ್ ಎಂದು ಬದಲಾಯಿಸಿಕೊಂಡಿದ್ದಾರೆ. ಇದುವೆ ಮುಂದೆ ಎ. ಆರ್. ರೆಹಮಾನ್ ಆಗಿ ಬದಲಾಯಿತು. ಆದರೆ ಅಚ್ಚರಿ ಏನೆಂದರೆ ಅವರಿಗೆ ಈ ಮುಸ್ಲಿಂ ಹೆಸರನ್ನು ಹಿಂದೂ ಜ್ಯೋತಿಷಿಯೊಬ್ಬರು ಸೂಚಿಸಿದ್ದರು ಅಂತ ಹೇಳಲಾಗಿದೆ.

    ಗಾಯಕ ಎ.ಆರ್‌. ರೆಹಮಾನ್‌ ಅವರ ಮೂಲ ಹೆಸರು ದಿಲೀಪ್‌ ಕುಮಾರ್‌ ಎಂದಾಗಿದ್ದು ಆ ಹೆಸರು ಅವರಿಗೆ ಮೊದಲಿನಿಂದಲೂ ಇಷ್ಟವಿರಲಿಲ್ಲ ಎಂದು ಸ್ವತಃ ರೆಹಮಾನ್ ಅವರೇ ಇತ್ತೀಚಿನ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ. ಅವರ ತಂದೆ ಆರ್‌.ಕೆ. ಶೇಖರ್‌.  ಅವರ ಕುಟುಂಬವು ಹಿಂದೂ ಧರ್ಮದ ಸಂಪ್ರದಾಯ, ಆಚಾರ ಪರಂಪರೆ ಪಾಲಿಸುತ್ತಿದ್ದು ಅವರೇ ಈ ಹೆಸರನ್ನು ಇಟ್ಟಿದ್ದರಂತೆ.. ಆದರೆ ತಂದೆಗೆ ತೀವ್ರ ಆರೋಗ್ಯ ಸಮಸ್ಯೆ ಬಂದಿದ್ದಾಗ ಅವರ ತಾಯಿ ಚಿಕಿತ್ಸೆಯ ಮೊರೆ ಹೋಗುವ ಜೊತೆಗೆ ದೇವರ ಪ್ರಾರ್ಥನೆಯ ಮೊರೆಹೋಗಿದ್ದಾರೆ. ರೆಹಮಾನ್‌ ತಾಯಿ ಅನೇಕ ದೇವಸ್ಥಾನ, ಚರ್ಚ್‌ ಮತ್ತು ಮಸೀದಿ, ಬಸದಿಗಳಿಗೂ ಭೇಟಿ ನೀಡಿದ್ದು ಅದೇ ವೇಳೆ ಸೂಫಿ ಪ್ರತಿಪಾದಕರೊಬ್ಬರು ಇವರ ಕುಟುಂಬಕ್ಕೆ ಪರಿಚಯವಾಗಿದ್ದಾರೆ.

    ಅವರ ತಂದೆ ಮರಣದ ಬಳಿಕ ತನ್ನ ತಂಗಿಗೆ ಮದುವೆ ಮಾಡಿಸಲು ನಿರ್ಧಾರ ಕೈಗೊಂಡಿದ್ದರಂತೆ. ಆಗ ಅವರ ಜಾತಕ ತೋರಿಸಲು ಜ್ಯೋತಿಷಿಯೊಬ್ಬರನ್ನು ಎ. ಆರ್‌ . ರೆಹಮಾನ್ ಅವರು ತಮ್ಮ ತಾಯಿಯ ಜೊತೆಗೆ ಭೇಟಿಯಾಗಿದ್ದಾರೆ. ಆಗ ಅದೇ ವೇಳೆಯಲ್ಲಿ ತಮ್ಮ ಇಡೀ ಕುಟುಂಬ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ಬಯಸಿದ್ದನ್ನು ಅವರು ಜ್ಯೋತಿಷಿ ಬಳಿಯಲ್ಲಿ ಹೇಳಿದ್ದಾರೆ. ಆಗ ಅವರು ಈ ವಿಚಾರ ಕೇಳಿ ಅಚ್ಚರಿಗೊಂಡರು. ಆ ಬಳಿಕ ಅವರು ರೆಹಮಾನ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ. 

    ಸಂದರ್ಶನ ವೇಳೆಯಲ್ಲಿ ಮಾತನಾಡಿದ್ದ ಅವರು, ನನಗೆ ರೆಹಮಾನ್ ಎಂಬ ಹೆಸರನ್ನು ಜ್ಯೋತಿಷಿ ಅವರು ತಿಳಿಸಿದ್ದ ತತ್ ಕ್ಷಣವೇ ತುಂಬಾ ಇಷ್ಟವಾಯಿತು. ನನ್ನ ತಾಯಿಗೆ ನನ್ನ ಹೆಸರಿನ ಜೊತೆಗೆ ಅಲ್ಲಾರಖಾ [ದೇವರಿಂದ ರಕ್ಷಿಸಲ್ಪಟ್ಟ] ಎಂದು ಸೇರಿಸಬೇಕೆಂಬ ಆಸೆ ಇತ್ತು. ಹೀಗಾಗಿ ನನ್ನ ಹೆಸರು ಒಬ್ಬ ಹಿಂದೂ ಜ್ಯೋತಿಷಿ ಸಲಹೆ ಹಾಗೂ ನನ್ನ ತಾಯಿಯ ಆಸೆಯಂತೆ ಎ.ಆರ್. ರೆಹಮಾನ್ ಎಂದು ಬದಲಾಯಿತು. ನಾನು ಇಸ್ಲಾಂ ಧರ್ಮವನ್ನು ನನ್ನ ಇಚ್ಛೆಯಂತೆ ಸ್ವೀಕಾರ ಮಾಡಿದ್ದೇನೆ ಹಾಗೆಂದು ಇತರರ ಮೇಲೆ ನಾನು ಧರ್ಮ ಹೇರಿಕೆ ಮಾಡಲಾರೆ ಎಂದು ಅವರು ಹೇಳಿದ್ದಾರೆ.

    ಎ. ಆರ್. ರೆಹಮಾನ್ ಅವರು ಕರ್ನಾಟಕ ಸಂಗೀತ , ಪಾಶ್ಚಿಮಾತ್ಯ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ, ಕವ್ವಾಲಿ ಶೈಲಿಯ ಹಾಡನ್ನು ಹಾಡುವ ಕಲೆಯನ್ನು ಹೊಂದಿದ್ದಾರೆ. ಆರು ಬಾರಿ ತಮಿ ಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಹದಿ ನೈದು ಫಿಲ್ಮ್‌ಫೇರ್ ಪ್ರಶಸ್ತಿಗಳು, ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುವ ಜೊತೆಗೆ ಆಸ್ಕರ್ ಪ್ರಶಸ್ತಿ ಸ್ಚೀಕಾರ ಮಾಡುವ ಮೂಲಕ ಇಡೀ ಜಗತ್ತಿನಾದ್ಯಂತ ಶ್ರೇಷ್ಠ ಸಾಧಕರಲ್ಲಿ ಇವರು ಒಬ್ಬರಾಗಿ ಖ್ಯಾತಿ ಪಡೆದಿದ್ದಾರೆ.

Recent Articles

spot_img

Related Stories

Share via
Copy link