ಮಾರು ವೇಷದಲ್ಲಿ ಗಾಂಧಿಬಜಾರ್​​​ನಲ್ಲಿ ಅಡ್ಡಾಡಿದ ಡಿಂಪಲ್ ಕ್ವೀನ್

ಬೆಂಗಳೂರು:
ಮಾರು ವೇಷದಲ್ಲಿ ಗಾಂಧಿಬಜಾರ್​​​ನಲ್ಲಿ ಅಡ್ಡಾಡಿದ ಡಿಂಪಲ್ ಕ್ವೀನ್: ಕಾರಣ?

     ಬೆಂಗಳೂರಿನ ಫೇಮಸ್ ಹೋಟೆಲ್ ಆದ ವಿದ್ಯಾರ್ಥಿ ಭವನದಲ್ಲಿ ಸ್ನೇಹಿತನ ಜೊತೆ ಕೂತು ಮಸಾಲಾ ದೋಸೆ ಕೂಡ ಸವಿದಿದ್ದಾರೆ. ವಿದ್ಯಾರ್ಥಿ ಭವನ ಹೊಟೇಲ್ ಮುಖ್ಯಸ್ಥರು ರಚಿತಾ ರಾಮ್​ಗೆ ನೆನಪಿನ ಕಾಣಿಕೆ ಕೊಟ್ಟು ಈ ವೇಳೆ ಗೌರವಿಸಿದ್ದಾರೆ.

ಸಿನಿಮಾದ ಕೆಲವು ಸೆಲೆಬ್ರಿಟಿಗಳು ಜನರ ಮಧ್ಯೆ ಸಾಮಾನ್ಯರಂತೆ ಇರಲು ಸಿಕ್ಕಾಪಟ್ಟೆ ಇಷ್ಟ ಪಡ್ತಾರೆ.ಆದರೆ, ಆ ವೇಳೆ ಅಭಿಮಾನಿಗಳು ಮುಗಿ ಬಿದ್ದು ನೆಚ್ಚಿನ ನಟ ಅಥವಾ ನಟಿಯ ಜೊತೆ ಫೋಟೋಗೆ ಮುಗಿ ಬಿಳ್ತಾರೆ.

  ಈ ಕಿರಿ ಕಿರಿಯನ್ನ ತಪ್ಪಿಸಿಕೊಳ್ಳಲು ಸಿನಿಮಾ ನಟರು ತಮ್ಮದೇ ಹಾದಿ ಕಂಡುಕೊಂಡಿದ್ದಾರೆ.

ಸ್ಯಾಂಡಲ್​ವುಡ್ ಹೀರೋಯಿನ್ ರಚಿತಾ ರಾಮ್ ಸದಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ. ಈಗ ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಗಾಂಧಿ ಬಜಾರ್ ಸೇರಿದಂತೆ ಹಲವು ಕಡೆ ಮಾರುವೇಷದಲ್ಲಿ ಓಡಾಡಿದ್ದಾರೆ. ರಚಿತಾ ರಾಮ್ ಮೂಲತಃ ಆಂಜನೇಯ ಸ್ವಾಮಿಯ ಭಕ್ತೆ.

ಹೀಗಾಗಿ ಸ್ನೇಹಿತ ಹಾಗು ನಿರ್ದೇಶಕರಾದ ಮಯೂರ್ ರಾಘವೇಂದ್ರ ಜೊತೆಗೆ ಬೆಂಗಳೂರಿನಲ್ಲಿನ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ‌. ಈ ಹಿಂದೆ ಸಿನಿಮಾ ಒಂದಕ್ಕೆ ಕಾಸ್ಟೂಮ್ ಖರೀದಿಸಲು ಇದೇ ರೀತಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್​​​ನಲ್ಲಿ ನಲ್ಲಿ ಓಡಾಡಿದ್ದರು.

 ಗಾಂಧಿಬಜಾರ್​​​ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್​

ಇನ್ನು ಬೆಂಗಳೂರಿನ ಫೇಮಸ್ ಹೋಟೆಲ್ ಆದ ವಿದ್ಯಾರ್ಥಿ ಭವನದಲ್ಲಿ ಸ್ನೇಹಿತನ ಜೊತೆ ಕೂತು ಮಸಾಲಾ ದೋಸೆ ಕೂಡ ಸವಿದಿದ್ದಾರೆ. ವಿದ್ಯಾರ್ಥಿ ಭವನ ಹೊಟೇಲ್ ಮುಖ್ಯಸ್ಥರು ರಚಿತಾ ರಾಮ್​ಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದ್ದಾರೆ.

ರಚಿತಾ ರಾಮ್ ವಿದ್ಯಾರ್ಥಿ ಭವನ್‌ ಹೊಟೇಲ್​​​ನಲ್ಲಿ ದೋಸೆ ತಿನ್ನುವ ಫೋಟೋಗಳು ಸಖತ್ ವೈರಲ್ ಆಗಿವೆ. ಸದ್ಯ ರಚಿತಾ ರಾಮ್ ಏಕ್ ಲವ್ ಯಾ, ಮ್ಯಾಟ್ನಿ, ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ‌.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link