ಬೆಂಗಳೂರು:
ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ, ನಿರ್ದೇಶಕ ಎ.ಆರ್. ಬಾಬು ಅವರು ಇಂದು ಬೆಳಗ್ಗೆ 8.55ಕ್ಕೆ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಎ.ಆರ್ ಬಾಬು ಅವರಿಗೆ 56 ವರ್ಷ ವಯಸ್ಸಾಗಿತ್ತು. ಹಲೋ ಯಮ, ಸಪ್ನೊಂಕಿ ರಾಣಿ, ಕೂಲಿ ರಾಜ, ಖಳನಾಯಕ, ಮರುಜನ್ಮ, ಯಾರ್ದೋ ದುಡ್ಡು ಯಲ್ಲಮನ ಜಾತ್ರೆ, ಚಮ್ಕಾಯಿಸಿ ಚಿಂದಿ ಉಡಾಯಿಸಿ ಸಿನಿಮಾಗಳನ್ನ ಎ.ಆರ್ ಬಾಬು ನಿರ್ದೇಶನ ಮಾಡಿದ್ದಾರೆ.
ನಿರ್ದೇಶನದ ಜೊತೆಗೆ ತೆರೆಮೇಲೆ ಕೂಡ ಎ.ಆರ್. ಬಾಬು ಅವರು ಅಭಿನಯಿಸಿದ್ದರು, ಜೋಗಿ ಪ್ರೇಮ್ ಅವರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ್ದು ಕೂಡ ಇದೇ ಎ.ಆರ್. ಬಾಬು ನಿಧನಕ್ಕೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಸಂತಾಪ ಸೂಚಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ