ಬೆಂಗಳೂರು:
ಅತ್ಯಾಚಾರ ಆರೋಪದಡಿ ಬಂಧನಕ್ಕೀಡಾಗಿ, ಜಾಮೀನು ಪಡೆದು ಹೊರಗಿರುವ ಬಿಜೆಪಿ ಶಾಸಕ ಮುನಿರತ್ನ ಅವರ ಕುರಿತ ಅವಹೇಳನಕಾರಿ ಪೋಸ್ಟರ್‌ಗಳು ಬೆಂಗಳೂರಿನ ಆರ್‌ಆರ್ ನಗರದಲ್ಲಿ ಕಂಡುಬಂದಿವೆ. ಮುನಿರತ್ನ ಅವರು ಆರ್‌ಆರ್ ನಗರದ ಶಾಸಕರಾಗಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಕೆಲವು ಗೋಡೆಗಳಲ್ಲಿ ಪೋಸ್ಟರ್‌ಗಳು ಕಂಡುಬಂದಿವೆ. ಕಿಡಿಗೇಡಿಗಳು ರಾತ್ರೋರಾತ್ರಿ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಿ ಪರಾರಿಯಾಗಿದ್ದಾರೆ. “AIDS Trap and Rape ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ” ಎಂದು ಪೋಸ್ಟರ್‌ಗಳ ಮೇಲೆ ಮುನಿರತ್ನ ಚಿತ್ರದ ಸಹಿತ ಮುದ್ರಿಸಲಾಗಿದೆ.
ಕೆಲವು ಪೋಸ್ಟರ್‌ಗಳು ಆರ್.ಆರ್.ನಗರ ಪ್ರವೇಶ ದ್ವಾರದ ತಡೆಗೋಡೆಗಳಲ್ಲಿ ಕಂಡುಬಂದಿವೆ. ಆರ್‌ಆರ್ ನಗರದ ಕೆಲವು ಪ್ರಮುಖ ಭಾಗಗಳಲ್ಲಿ ಇವು ಕಂಡುಬಂದಿವೆ. ಅವಹೇಳಕಾರಿಯಾಗಿದ್ದ ಈ ಪೋಸ್ಟರ್‌ಗಳನ್ನು ಸದ್ಯ ತೆಗೆದುಹಾಕಲಾಗಿದೆ.ಇದು ಮುನಿರತ್ನ ಅವರ ವಿರುದ್ಧದ ಷಡ್ಯಂತ್ರದ ಒಂದು ಭಾಗ ಎಂದು ಮುನಿರತ್ನ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದಾರೆ. ಇದರ ಕುರಿತು ಪೊಲೀಸ್ ತನಿಖೆಗೆ ಆಗ್ರಹಿಸಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಇದನ್ನು ಆಧರಿಸಿ ಮುನಿರತ್ನ ಅವರನ್ನು ಬಂಧಿಸಲಾಗಿತ್ತು. ಎರಡು ವಾರಗಳ ಕಾಲ ಜೈಲಿನಲ್ಲಿದ್ದ ಮುನಿರತ್ನ, ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ವೈಯಾಲಿಕಾವಲ್ ಹಾಗೂ ಕಗ್ಗಲಿಪುರ ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ.