ದಿವಾಳಿ ಅಂಚಿನಲ್ಲಿ ರಾಜ್ಯದ 125 ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು

ನವದೆಹಲಿ:

ವಿಶೇಷ ವರದಿ : ಪ್ರಥ್ವಿರಾಜ ನ್ಯೂಸ್

     ಕರ್ನಾಟಕದಲ್ಲಿ 6,291 ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘಗಳ (Agricultural Credit Associations) ಪೈಕಿ 125 ಸಂಘಗಳು ದಿವಾಳಿಯ ಅಂಚಿನಲ್ಲಿವೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಆಗಸ್ಟ್ 5, 2025ರಂದು ಲೋಕಸಭೆಯಲ್ಲಿ ತಿಳಿಸಿದ್ದಾರೆ. ರಾಯಚೂರು ಸಂಸದ ಜಿ. ಕುಮಾರ ನಾಯಕ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ 125 ಸಂಘಗಳಲ್ಲಿ ಚಿಕ್ಕಬಳ್ಳಾಪುರದ 28, ಹಾಸನದ 13, ಮತ್ತು ಬೆಳಗಾವಿಯ 12 ಸಂಘಗಳು ಸೇರಿವೆ ಎಂದು ವಿವರಿಸಿದರು.

    ಇದರ ಜೊತೆಗೆ, 64 ಸಂಘಗಳು ಪ್ರಸ್ತುತ ಕಾರ್ಯನಿರ್ವಹಿಸದೆ/ನಿಷ್ಕ್ರಿಯವಾಗಿವೆ ಎಂದೂ ಅವರು ಹೇಳಿದರು.ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 428 ಸಹಕಾರ ಸಂಘಗಳು ನೋಂದಾಯಿಸಲ್ಪಟ್ಟಿವೆ, ಅದರಲ್ಲಿ ಬೆಳಗಾವಿಯಲ್ಲಿ 187 ಸಂಘಗಳು ಸೇರಿವೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) ಕರ್ನಾಟಕದ ಸಹಕಾರ ಸಂಘಗಳಿಗೆ 25.56 ಕೋಟಿ ರೂಪಾಯಿ ಧನ ಸಹಾಯವನ್ನು ವಿತರಿಸಿದೆ ಎಂದು ಶಾ ತಿಳಿಸಿದರು.ಕೇಂದ್ರ ಸಹಕಾರಿ ಸಚಿವರು ನೀಡಿರುವ ಈ ಅಂಕಿ- ಅಂಶ ಕರ್ನಾಟಕದ ಸಹಕಾರಿ ಸಂಘಗಳ ಆರ್ಥಿಕ ಸ್ಥಿತಿಯ ಕುರಿತು ಗಮನಾರ್ಹ ಚರ್ಚೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.ಈ ಸಂಘಗಳ ದಿವಾಳಿತನದ ನಿಖರ ಕಾರಣಗಳ ಬಗ್ಗೆ ಹೆಚ್ಚಿನ ವಿವರಗಳು ತನಿಖೆಯಿಂದ ಹೊರಬರಬೇಕಾಗಿದೆ.

Recent Articles

spot_img

Related Stories

Share via
Copy link