ರಾಮನಗರ
ನಾವು ರಾಜ್ಯಕ್ಕೆ ಸೇವೆ ಮಾಡಬೇಕೆಂದು ಹೋರಾಡುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆ ಮೂಲಕ ಮತ್ತೆ ಪರೋಕ್ಷವಾಗಿ ಸಿಎಂ ಆಗೋ ಆಸೆ ವ್ಯಕ್ತಪಡಿಸಿದರಾ? ಎಂಬ ಅನುಮಾನಗಳು ಮೂಡಿಸಿದೆ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮೇಲೆ ಎಫ್ಐಆರ್ ದಾಖಲಾದ ಬೆನ್ನಲ್ಲೇ ಡಿಕೆ ಶಿವಕುಮಾರ್ ಈ ಹೇಳಿಕೆ ಸದ್ಯ ಕುತೂಹಲ ಮೂಡಿಸಿದೆ.
ಜಿಲ್ಲೆಯ ಕನಕಪುರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕನಕಪುರ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ನಾನು ರಾಜ್ಯ ಸೇವೆ ಮಾಡಬೇಕು ಅಂತಾ ದೊಡ್ಡ ಪ್ರಯತ್ನ ನಡೆದಿದೆ. ಜೊತೆಗೆ ದೊಡ್ಡ ಹೋರಾಟವೂ ಕೂಡ ನಡೆಯುತ್ತಿದೆ. ಈಗ ಮಾತನಾಡಿದರೆ ವಿವಿಧ ರೀತಿಯಲ್ಲಿ ಬಿಂಬಿಸುತ್ತಾರೆ ಎಂದು ಹೇಳಿದ್ದಾರೆ.
ಸದ್ಯ ನಾನು ಇಲ್ಲಿಗೆ ಡಿಸಿಎಂ ಆಗಿ ಬಂದಿಲ್ಲ, ಶಾಸಕನಾಗಿ ಬಂದಿದ್ದೇನೆ. ಡಿಸಿಎಂ ಏನಿದ್ರೂ ವಿಧಾನಸೌಧದಲ್ಲಿ, ನೀವೆಲ್ಲ ನಮ್ಮ ಮನೆಯ ಮಕ್ಕಳು ಎಂದಿದ್ದಾರೆ. ಪ್ರತಿ ಶನಿವಾರ ರಜೆ ಇದ್ದಾಗ ಕನಕಪುರಕ್ಕೆ ಕಾರ್ಯಕ್ರಮ ರೂಪಿಸಿದ್ದೆ. ಅದೇ ಥರ ಕನಕಪುರಕ್ಕೆ ಬಂದಿದ್ದೇನೆ. ತಮಗೆ ಕಾಲೇಜು ಎಲ್ಲಿತ್ತು ಅಂತ ತಮಗೆ ಗೊತ್ತಿಲ್ಲ. ನಿಮ್ಮ ಕಾಲೇಜು ನಗರಸಭೆ ಜಾಗದಲ್ಲಿತ್ತು. ಇದನ್ನು ನಾವಿಲ್ಲಿ ಹೊಸ ಕಾಲೇಜು ಕಟ್ಟಿ. ನಾನು ಕನಕಪುರದ ಚಿತ್ರ ತಯಾರು ಮಾಡಿದ್ದೇನೆ. ನಾನು ಎಂಎಲ್ಎ ಆಗುವುದಕ್ಕಿಂತ ಮುಂಚೆ ಕನಕಪುರ ಹೇಗಿತ್ತು. ಈಗ ಹೇಗಿದೆ ಅಂತ ಚಿತ್ರ ಮಾಡಿಸಿದ್ದೇನೆ. ರಸ್ತೆ, ಕಟ್ಟಡಗಳು ಹೇಗಿತ್ತು, ಈಗ ಹೇಗಿದೆ ಅನ್ನೋದನ್ನು ತೋರಿಸುತ್ತೇನೆ ಎಂದಿದ್ದಾರೆ.
ಬೆಂಗಳೂರು-ಕನಕಪುರ ರಸ್ತೆ ಎಜುಕೇಶನ್ ಕಾರಿಡಾರ್ ಆಗಿ ಹೊರ ಹೊಮ್ಮಿದೆ. ಸುರೇಶ್ವರರು ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಕನಕೋತ್ಸವ ಪ್ರಾರಂಭ ಮಾಡಿ, ವಿದ್ಯಾರ್ಥಿಗಳಿಗೆ ನಮ್ಮ ಕಲೆ, ನಮ್ಮ ಸಂಸ್ಕೃತಿ ಶುಭವನ್ನು ಹಾರೈಸಲಿಕ್ಕೆ ಇಲ್ಲಿ ಬಂದಿದ್ದೇನೆ ಎಂದು ಹೇಳಿದ್ದಾರೆ.