ಕಾರ್ಯಕರ್ತರಿಗೆ ಭರ್ಜರಿ ಗಿಫ್ಟ್‌ ಘೋಷಿಸಿದ ಡಿಕೆಶಿ..!

ಬೆಂಗಳೂರು:

    ಮುಂಬರುವ ಚುನಾವಣೆಯಲ್ಲಿ ಗೆದ್ದು ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌, ಮಹಿಳಾ ಯಜಮಾನಿಗೆ ತಿಂಗಳಿಗೆ 2 ಸಾವಿರ ನೀಡುವ ಗ್ಯಾರೆಂಟಿ ಕಾರ್ಡ್‌ ಅನ್ನು ಹೆಚ್ಚು ಮನೆಗಳಿಗೆ ತಲುಪಿಸುವ ಪ್ರತಿ ಹಳ್ಳಿಯ 10 ಕಾರ್ಯಕರ್ತರಿಗೆ ಟಿವಿಯನ್ನು ಉಡುಗೊರೆಯಾಗಿ ಕೊಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

      ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾವು ಘೋಷಿಸಿರುವ ಯೋಜನೆಗಳ ವಿವರಗಳನ್ನು ಹೊಂದಿರುವ ಕಾರ್ಡ್‌ ಅನ್ನು ಪ್ರತಿ ಮನೆ ಮನೆಗೂ ನೀಡಬೇಕು. ಮನೆಯವರಿಂದ ಸಹಿ ಹಾಕಿಸಬೇಕು. ಹೆಚ್ಚು ಮಂದಿಯನ್ನು ನೋಂದಣಿ ಮಾಡಿದ 10 ಕಾರ್ಯಕರ್ತರ ಮನೆಗೆ ಟಿವಿ ಉಡುಗೊರೆ ಕೊಡುತ್ತೇವೆ. ಬ್ಲಾಕ್‌ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು ಇದನ್ನು ಗಮನಿಸಬೇಕು’ ಎಂದಿದ್ದಾರೆ.

       ನೀವಿಬ್ಬರೂ ಸೇರಿ ಒಂದು ಚೆಕ್‌ಗೆ ಸಹಿ ಹಾಕಬೇಕು ಎಂದು ಪ್ರಿಯಾಂಕಾ ಗಾಂಧಿ ಅವರು ನನ್ನ ಮತ್ತು ಸಿದ್ದರಾಮಯ್ಯ ಅವರ ಸಹಿಯನ್ನು ಚೆಕ್‌ಗೆ ಹಾಕಿಸಿದರು. ಇದು ಗ್ಯಾರಂಟಿ ಕಾರ್ಡ್‌, 200 ಯೂನಿಟ್‌ ವಿದ್ಯುತ್‌ ಉಚಿತ, 2000 ರೂ. ಖಚಿತ. ಇದನ್ನು ಯಾರೂ ಹೆಚ್ಚು ಜನರಿಗೆ ತಲುಪಿಸುತ್ತಾರೋ ಅವರಿಗೆ ಟಿವಿಯನ್ನು ಬಹುಮಾನವಾಗಿ ಕೊಡಿ ಎಂದರು. ನೀವು ಭೇಟಿ ನೀಡಿರುವ ಮನೆಯವರು ಯಾವುದೇ ಪಕ್ಷದ ಬೆಂಗಲಿಗರಾಗಿರಲಿ, ಕಾಂಗ್ರೆಸ್‌ ಪ್ರಣಾಳಿಕೆಯನ್ನು ಅವರಿಗೆ ತಿಳಿಸಬೇಕು’ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap