ಡಿಕೆಶಿ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ…!

ಬೆಂಗಳೂರು:

      ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್‌  ಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ಹದ್ದು ಡಿಕ್ಕಿ ಹೊಡೆದ ಪರಿಣಾಮ ತುರ್ತು ಭೂಸ್ಪರ್ಶ ಮಾಡಲಾಗಿದೆ.

    ಮುಳಬಾಗಿಲಿನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಶಿವಕುಮಾರ್ ಬೆಂಗಳೂರಿನಿಂದ ಕೋಲಾರಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಮಾರ್ಗ ಮಧ್ಯೆ ಹದ್ದು ಬಂದು ಹೆಲಿಕಾಪ್ಟರ್ ಗೆ ಡಿಕ್ಕಿ ಹೊಡೆದಿದೆ. ಹದ್ದು ಡಿಕ್ಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್​ನ ಗಾಜು ಪುಡಿಪುಡಿಯಾಗಿದೆ. ಇದರಿಂದಾಗಿ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿದೆ.

     ಜಕ್ಕೂರು ಹೆಲಿಪ್ಯಾಡ್‌ನಿಂದ ಮುಳಬಾಗಿಲಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಪೈಲೆಟ್ ಹರಸಾಹಸದಿಂದ ಭಾರಿ ಅನುಹುತ ತಪ್ಪಿದ್ದು ಕೂದಲೆಳೆ ಅಂತರದಲ್ಲಿ ಶಿವಕುಮಾರ್ ಅಪಾಯದಿಂದ ಪಾರಾಗಿದ್ದಾರೆ. ಹದ್ದು ಡಿಕ್ಕಿಯಾದ ರಭಸಕ್ಕೆ ಹೆಲಿಕಾಪ್ಟರ್ ಗಾಜು ಪುಡಿ ಪುಡಿಯಾಗಿದೆ. ಡಿಕೆ ಶಿವಕುಮಾರ್ ಜೊತೆಗಿದ್ದ ಇತರ ಕೆಲವರಿಗೆ ಗಾಯಗಳಾಗಿದೆ.  ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap