ಮದುವೆಯಾಗಲು ಶಿಕ್ಷಕಿ ವಿಧಿಸಿದ ಷರತ್ತುಗಳೆನು ಗೊತ್ತಾ….?

ಮುಂಬೈ :

    ಕಾಲ ಬದಲಾಗಿದೆ ಮತ್ತು ಇಂದು ಮದುವೆಗಳನ್ನು ಯಾವುದೇ ಮಧ್ಯವರ್ತಿಗಳ ಸಹಾಯಗಳಿಲ್ಲದೆಯೂ ಆಗಬಹುದು. ಇದಕ್ಕಂತನೇ ಮ್ಯಾಟ್ರಿಮೋನಿಯಲ್ ಸೈಟ್‌ಗಳಂತಹ (Matrimonial Site) ಅನೇಕ ವೇದಿಕೆಗಳಿವೆ. ಇಲ್ಲಿ ಹುಡುಗ ಮತ್ತು ಹುಡುಗಿ ಪರಸ್ಪರ ನೇರವಾಗಿ ಮಾತನಾಡುತ್ತಾರೆ ಮತ್ತು ಪರಸ್ಪರರ ಇಷ್ಟ-ಅನಿಷ್ಟಗಳನ್ನು ಅರ್ಥಮಾಡಿಕೊಳ್ಳುತ್ತಾರೆ.ಇಷ್ಟ ಆದ್ರೆ ಮುಂದುವರಿಯುತ್ತಾರೆ, ಇಲ್ಲವೆಂದರೆ ಮಾತುಕತೆ ಸ್ಥಗಿತಗೊಳಿಸುತ್ತಾರೆ.

    ಇದಕ್ಕಂತನೇ ಮ್ಯಾಟ್ರಿಮೋನಿಯಲ್ ಬಳಸುವ ಮೊದಲೇ ಪುರುಷರು ಮತ್ತು ಮಹಿಳೆಯರು ಭವಿಷ್ಯದ ಸಂಗಾತಿಯ ಬಗ್ಗೆ ತಮ್ಮ ಆದ್ಯತೆಗಳನ್ನು ವೆಬ್‌ಸೈಟ್‌ನಲ್ಲಿ ಸ್ಪಷ್ಟವಾಗಿ ಬರೆಯುತ್ತಾರೆ. ಆದರೆ, ಕೆಲವರು ಜೀರ್ಣಿಸಿಕೊಳ್ಳಲಾಗದಷ್ಟು ಖಡಕ್ ಆಗಿಯೂ ಬರೆಯುತ್ತಾರೆ. ಇತ್ತೀಚೆಗೆ ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ.

   ಇದರಲ್ಲಿ, ಒಬ್ಬ ಮಹಿಳೆ ತನ್ನ ಭಾವಿ ಪತಿ ಆಗುವವನಿಗಾಗಿ ಬರೆದ ಬೇಡಿಕೆಗಳನ್ನು ನೋಡಿ ಜನರು ಆಶ್ಚರ್ಯ ಗೊಂಡಿದ್ದಾರೆ. ಇಲ್ಲಿ ಮೊದಲು ಆ ಮಹಿಳೆಯ ಬಗ್ಗೆ ತಿಳಿಯೋಣ, ಅಂದಹಾಗೆ ಆ ಮಹಿಳೆ ತನ್ನನ್ನು 39 ವರ್ಷದ ವಿಚ್ಛೇದಿತ ಖಾಸಗಿ ಶಾಲಾ ಶಿಕ್ಷಕಿ ಎಂದು ಹೇಳಿಕೊಂಡಿದ್ದಾರೆ. ಆಕೆಗೆ ಅಡುಗೆ ಮಾಡಲು ಬರುವುದಿಲ್ಲ ಆದರೆ ಆಕೆ 5 ಸ್ಟಾರ್ ಹೋಟೆಲ್‌ಗಳಲ್ಲಿ ತಿನ್ನಲು ಇಷ್ಟ ಪಡುತ್ತಾಳಂತೆ. ಆಕೆಗೆ ವಾರ್ಷಿಕ ಸಂಬಳ ರೂ 1.32 ಲಕ್ಷ (ತಿಂಗಳಿಗೆ ಸುಮಾರು ರೂ 11,000) ಮತ್ತು ಲೂಯಿ ವಿಟಾನ್ ಡ್ರೆಸ್‌ಗಳನ್ನು ಧರಿಸಲು ಇಷ್ಟಪಡುತ್ತಾಳೆ. ಇದಲ್ಲದೇ ತಂದೆ-ತಾಯಿ ತನ್ನ ಮೇಲೆ ಅವಲಂಬಿತರಾಗಿದ್ದು, ಮದುವೆಯ ನಂತರವೂ ಅವರನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾಳೆ.

ಆ ಶಿಕ್ಷಕಿಗೆ ಯಾವ ರೀತಿಯ ಗಂಡ ಬೇಕು ಗೊತ್ತಾ?

ತನ್ನನ್ನು ಮದುವೆ ಆಗುವ ಪುರುಷನಿಗೆ ಇರಬೇಕಾದ ಗುಣಗಳು ಅಥವಾ ಆಕೆಯ ಬೇಡಿಕೆಗಳು ಏನೆಂದರೆ, ಮೊದಲನೆಯದಾಗಿ, ತನ್ನ ಭಾವಿ ಪತಿ 34 ರಿಂದ 39 ವರ್ಷದೊಳಗಿನ ಅವಿವಾಹಿತರಾಗಿರಬೇಕು. ಅವರು ಮೇಲಾಗಿ ಅಮೆರಿಕದಿಂದ MBA ಅಥವಾ MS ಮಾಡಿರಬೇಕು.

   ಅಲ್ಲದೇ, ಅವನು ಸ್ವಂತ 3 BHK ಮನೆಯನ್ನು ಹೊಂದಿರಬೇಕು. ಮುಖ್ಯವಾಗಿ ಅವನ ಹೆತ್ತವರು ಅವನೊಂದಿಗೆ ವಾಸಿಸಬಾರದು. ಅವನ ಸಂಬಳ ವರ್ಷಕ್ಕೆ ಕನಿಷ್ಠ 30 ಲಕ್ಷ ರೂಪಾಯಿಗಳಾಗಿರಬೇಕು ಮತ್ತು ಆತ ಎನ್‌ಆರ್‌ಐ ಆಗಿದ್ದರೆ, ವರ್ಷಕ್ಕೆ ಕನಿಷ್ಠ US $ 96,000 ಗಳಿಸುತ್ತಿರಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ.

ಮ್ಯಾಟ್ರಿಮೋನಿಯಲ್ ಸೈಟ್‌ನ ಈ ಸ್ಕ್ರೀನ್‌ಶಾಟ್ ಅನ್ನು @ShoneeKapoor ಹೆಸರಿನ Twitter ID ಯೊಂದಿಗೆ ಹಂಚಿಕೊಳ್ಳಲಾಗಿದೆ. ಅದರ ಶೀರ್ಷಿಕೆಯನ್ನು ಹಾಸ್ಯಮಯವಾಗಿ ಬರೆಯಲಾಗಿದೆ, ‘ಆಕೆಯ ಕ್ವಾಲಿಟಿ ಮತ್ತು ಸಂಬಳವನ್ನು ನೋಡಿ ಮತ್ತು ಆಕೆ ಬಯಸುವ ಗಂಡನ ಕ್ವಾಲಿಟಿ ಮತ್ತು ಸಂಬಳವನ್ನು ನೋಡಿ’ ಎಂದು ಬರೆಯಲಾಗಿದೆ.

Recent Articles

spot_img

Related Stories

Share via
Copy link
Powered by Social Snap