ಸಕಾಲಕ್ಕೆ ಸಾರ್ವಜನಿಕರ ಕೆಲಸ ಮಾಡಿಕೊಡಿ

ಪಾವಗಡ:


ತಾಲ್ಲೂಕು ಮಟ್ಟದ ಅಧಿಕಾರಿಗಳಾಗಿ ಸಾರ್ವಜನಿಕ ಜೀವನದಲ್ಲಿ ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ನೀವು ಜನ ಸಾಮಾನ್ಯರಿಗೆ, ರೈತರಿಗೆ ಅಶಕ್ತರಿಗೆ ಸಕಾಲದಲ್ಲಿ ಅವರ ಕೆಲಸಗಳನ್ನು ಜವಬ್ದಾರಿಯಿಂದ ಮಾಡಿಕೊಡಬೇಕು ಎಂದು ಜಿಲ್ಲಾ ಲೋಕಾಯುಕ್ತ ಎಸ್‍ಪಿ ವಲೀಪಾಷ ತಿಳಿಸಿದರು.

ಪಾವಗಡ ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸರ್ಕಾರಿ ನೌಕರರು ಸ್ವಯಂ ಪ್ರೇರಿತವಾಗಿ ಜನತೆಯ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಗಮನ ಹರಿಸಬೇಕು. ಜನತೆಗೆ ನ್ಯಾಯ ದೊರಕಿಸಿ ಕೊಡುವ ಪ್ರಯತ್ನ ಅಧಿಕಾರಿ ವರ್ಗದವರಿಂದ ಆಗಬೇಕು ಎಂದರು.

ತಾಲ್ಲೂಕಿನ ವಿವಿಧ ಇಲಾಖೆಗಳ ಬಳಿ ರೈತರು, ಜನ ಸಾಮ್ಯಾನರು ಬಂದಾಗ ಎಲ್ಲಾ ಕೆಲಸಗಳು ಶೀಘ್ರ ಆಗಬೇಕು. ಜನ ಸಾಮಾನ್ಯರನ್ನು ಪ್ರತಿದಿನ ಕಚೇರಿ ತಿರುಗಿಸುವುದು ನಿಲ್ಲುವಂತಾಗಬೇಕು. ಯಾವುದೆ ಕೆಲಸ ಆಗುತ್ತದೆ ಎಂಬ ನಂಬಿಕೆ ಜನರಿಗೆ ಬರುವಂತೆ ಪ್ರಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಸಾರ್ವಜನಿಕರು ನಮಗೆ ದೂರು ಕೊಡುವುದನ್ನು ನಿಲ್ಲಿಸುತ್ತಾರೆ. ತಹಶೀಲ್ದಾರ್ ಅವರಿಂದಲೂ ಸಹ ಸಾರ್ವಜನಿಕರ ಕೆಲಸಗಳಿಗೆ ಆಡ್ಡಿ ಆಗುತ್ತಿರುವ ಬಗ್ಗೆ ಅವರು ಬೇಸರ ವ್ಯಕ್ತ ಪಡಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಕೆ.ಆರ್.ನಾಗರಾಜು, ಪುರಸಭಾ ಮುಖ್ಯಾಧಿಕಾರಿ ಆರ್ಚನಾ, ಸಿಪಿಐಗಳಾದ ಲಕ್ಷ್ಮಿಕಾಂತ್, ಕಾಂತರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ, ಪಿಡಬ್ಯೂಡಿ ಅನಿಲ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸನಾಯ್ಕ್, ಎಸ್‍ಟಿ ಇಲಾಖೆಯ ಸಿದ್ಧರಾಜು ಹಾಗೂ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಸರ್ಕಾರಿ ಅಧಿಕಾರಿಗಳು ದರ್ಪ ಬಿಡಬೇಕು, ನಾಲ್ಕು ಜನರಿಗೆ ಸಹಾಯ ಮಾಡುವ ಗುಣ ಅಧಿಕಾರಿಗಳಲ್ಲಿರಬೇಕು. ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದು ಸಾರ್ವಜನಿಕರಿಗೆ ಸಕಾಲದಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡದ ಪರಿಣಾಮ ಸಾರ್ವಜನಿಕರು ನಮ್ಮಲ್ಲಿ ಬಂದು ದೂರು ಕೊಡುತ್ತಾರೆ. ಸರ್ಕಾರಿ ನೌಕರರ ಕರ್ತವ್ಯ ಲೋಪ ಸರಿ ಹೋಗದಿದ್ದಲ್ಲಿ ನಮ್ಮ ಕೆಲಸವನ್ನ ನಾವು ಮಾಡಬೇಕಾಗುತ್ತದೆ.

-ಸಿ.ಆರ್.ರವೀಶ್, ಲೋಕಾಯುಕ್ತ, ಡಿವೈಎಸ್‍ಪಿ

ಗ್ರಾಪಂ ಖಾತೆ ಪಡೆದು ಮನೆ ಕಟ್ಟಿದ್ದ ಬಡವನಿಗೆ ತಹಶೀಲ್ದಾರ್ ಕೆ.ಆರ್.ನಾಗರಾಜು ಅವರು ವಿನಕಾರಣ ತೊಂದರೆ ನೀಡುತ್ತಿರುವ ಬಗ್ಗೆ ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪ ಅವರು ದೂರು ನೀಡಿದರು. ಸಾಸಲಕುಂಟೆ ಗ್ರಾಮದ ನಾಗೇಂದ್ರ, ಪ್ರತಾಪ್‍ನಾಯಕ ಅವರುಗಳು ಕೃಷಿ ಇಲಾಖೆಯಲ್ಲಿ ನಾಲ್ಕು ವರ್ಷ ಕಳೆದರೂ ಮಿನಿ ಟ್ರ್ಯಾಕ್ಟರ್ ವಿತರಣೆ ಮಾಡುತ್ತಿಲ್ಲ. ಇಂಜಿನಿಯರ್ ರಮೇಶ್ ಅವರು ಸಕಾಲದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಎಸ್ಟಿಮೆಟ್, ಸ್ಕೇಚ್‍ಕಾಪಿ ನೀಡದ ಬಗ್ಗೆ ಹಾಗೂ ಬಿಎಫ್‍ಟಿ ಆರ್ಯೇಂದ್ರ ಅವರು ಲಂಚ ಪಡೆದಿರುವ ಬಗ್ಗೆ ಕೂಡ ದೂರು ಸಲ್ಲಿಕೆಯಾದವು. ತಾಪಂ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಒಟ್ಟು 8 ದೂರುಗಳು ಸಲ್ಲಿಕೆಯಾದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link