ಹೈದರಾಬಾದ್
ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಹೈದರಾಬಾದ್ ಸಹ ಒಂದು. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಪ್ರತಿನಿಧಿಸುವ ಕ್ಷೇತ್ರವಿದು. ಬಿಜೆಪಿ ಒವೈಸಿಗೆ ಎದುರಾಳಿಯಾಗಿ ಮಹಿಳೆಯನ್ನು ಕಣಕ್ಕಿಳಿಸಿದೆ.
ಹೈದರಾಬಾದ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿರುವ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಅವರು 221 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವಾಗಿ ಘೋಷಣೆ ಮಾಡಿದ್ದಾರೆ. ಮೇ 13ರಂದು ದೇಶದ 3ನೇ ಹಂತದ ಮತದಾನ ನಡೆಯುವಾಗ ಹೈದರಾಬಾದ್ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.
ಮಾಧವಿ ಲತಾ ಆಸ್ತಿ ವಿವರ: ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಅವರು 221 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹೊಂದಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಮಾಧವಿ ಅವರ ಕುಟುಂಬ ವಿರಿಂಚಿ ಕಂಪನಿಯಲ್ಲಿ 94.44 ಕೋಟಿ ಮೌಲ್ಯದ 2.94 ಕೋಟಿ ಷೇರುಗಳನ್ನು ಹೊಂದಿದೆ.
ಕೆ. ಮಾಧವಿ ಲತಾ ಅವರ ಪತಿ ವಿಶ್ವನಾಥ ಕಂಪಲ್ಲೆ ಮದ್ರಾಸ್ ಐಐಟಿಯಿಂದ ಪದವಿ ಪಡೆದವರು. ಫಿನ್‌ಟೆಕ್ ಅಂಡ್ ಹೆಲ್ತ್ ಕೇರ್ ಕಂಪನಿ ಸಂಸ್ಥಾಪಕರೂ ಸಹ ಹೌದು. ಮಾಧವಿ ಅವರ ಬಳಿ 165.46 ಕೋಟಿ ಚರಾಸ್ತಿ ಮತ್ತು 55.92 ಕೋಟಿಯಷ್ಟು ಸ್ತಿರಾಸ್ತಿ ಇದೆ ಎಂದು ನಾಮಪತ್ರದೊಂದಿಗೆ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.