ಚಿನ್ನದ ದರ ಇಳಿಕೆ : ಎಷ್ಟಿದೆ ಗೊತ್ತಾ….?

ಮುಂಬೈ : 

   ಚಿನ್ನದ ಬೆಲೆ ಮತ್ತೊಮ್ಮೆ ಕುಸಿದು ಕುಸಿದು ಬೀಳುತ್ತಿದ್ದು, ಚಿನ್ನ ಖರೀದಿ ಮಾಡಲು ಕಾಯುತ್ತಿದ್ದ ಮಹಿಳೆಯರು ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡಲು ಕಾಯುತ್ತಿದ್ದ ಹುಡುಗರಿಗೆ ಈ ಮೂಲಕ ಭರ್ಜರಿ ಸುದ್ದಿ ಸಿಕ್ಕಿದೆ. ಒಂದೇ ದಿನ ಚಿನ್ನದ ಬೆಲೆಯು ಬರೋಬ್ಬರಿ 6,300 ರೂಪಾಯಿ ಕುಸಿತ ಕಾಣುವ ಮೂಲಕ ಚಿನ್ನ ಕೊಳ್ಳಲು ಒಳ್ಳೆಯ ವೇದಿಕೆ ಒದಗಿಸಿದೆ.

   ಚಿನ್ನದ ಬೆಲೆ ಭಾರಿ ಏರಿಕೆ ಕಾಣ್ತಾ ಇದೆ ಅಂತಾ ಚಿಂತೆ ಮಾಡುತ್ತಿದ್ದ ಜನರಿಗೆ ಭರ್ಜರಿ ಸುದ್ದಿ ಸಿಕ್ಕಿದ್ದು ಚಿನ್ನದ ಬೆಲೆ ಇದೀಗ ಭಾರಿ ಇಳಿಕೆ ಕಂಡಿದೆ. ಅದು ಎಷ್ಟು ಅಂದ್ರೆ, ಒಂದೇ ದಿನ ಬರೋಬ್ಬರಿ 6,300 ರೂಪಾಯಿ ಚಿನ್ನದ ಬೆಲೆ ಕುಸಿತ ಕಂಡಿದೆ. ಏಪ್ರಿಲ್ & ಮೇ ತಿಂಗಳಲ್ಲಿ ಚಿನ್ನದ ಬೆಲೆ ಏರಿಳಿತವನ್ನ ಕಂಡಿತ್ತು. ಆದರೆ ಈಗ ಅಂದರೆ ಜೂನ್ ತಿಂಗಳಲ್ಲಿ ಚಿನ್ನದ ಬೆಲೆ ಭಾರಿ ಕುಸಿತ ಕಾಣುತ್ತಿದ್ದು, ಕಳೆದ ಹಲವು ದಿನಗಳಿಂದ ನಿರಂತರವಾಗಿ ಇಳಿಕೆ ಕಂಡಿದೆ. ಹಾಗಾದ್ರೆ ಇದೀಗ ಚಿನ್ನದ ಬೆಲೆ, ಬೆಂಗಳೂರು ಸೇರಿದಂತೆ ಯಾವ ಯಾವ ಜಾಗದಲ್ಲಿ ಎಷ್ಟಿದೆ? ಮುಂದೆ ಓದಿ.

    22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತವನ್ನು ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 5,780 ರೂಪಾಯಿ ಕುಸಿತ ಕಂಡಿದೆ. ಇನ್ನುಳಿದಂತೆ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 578 ರೂಪಾಯಿ ಕಡಿತವಾಗಿದ್ದು. ಆಭರಣ ಚಿನ್ನದ ಬೆಲೆ ಕುಸಿತದ ನಂತರ 10 ಗ್ರಾಂಗೆ 65,358 ರೂಪಾಯಿ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದೆ, ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 6,300 ರೂಪಾಯಿ ಕುಸಿತ ಕಂಡಿದೆ. 

   ಈ ಮೂಲಕ ಈಗ 24 ಕ್ಯಾರೆಟ್ ಚಿನ್ನದ ಬೆಲೆ ಕೂಡ 7,13,000 ರೂಪಾಯಿ ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿತ ಕಂಡು ಹಳದಿ ಲೋಹದ ಬೆಲೆ ಕುಸಿತದ ಹಾದಿ ಹಿಡಿದಿದೆ. ಇದರ ಜೊತೆ ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆ ಕಂಡಬರುತ್ತಿದ್ದು ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ಚಿನ್ನದ ಬೆಲೆ ಇಳಿಕೆ ಕಾಣುವ ನಿರೀಕ್ಷೆ ಇದೆ. ಅದರಲ್ಲೂ ಚಿನ್ನ ಖರೀದಿ ಮಾಡುವುದಕ್ಕೆ ಇಷ್ಟು ದಿನಗಳ ಕಾಲ ಕಾದು ಕುಳಿತಿದ್ದ ಆಭರಣ ಪ್ರಿಯ ಮಹಿಳೆಯರಿಗೆ ಇದೀಗ ಭರ್ಜರಿ ಸುದ್ದಿ ಸಿಕ್ಕಂತಾಗಿದೆ. 

   ಪ್ರಪಂಚದ ಮಟ್ಟದಲ್ಲಿ ಈಗ ಚಿನ್ನಕ್ಕೆ ಯಾಕೆ ಇಷ್ಟು ಬೆಲೆ ಬಂದಿದೆ ಎಂದರೆ, ಯುದ್ಧಗಳು ಶುರುವಾದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ಕರೆನ್ಸಿ ಇಲ್ಲವಾಗಿದ್ದು. ಈ ಕಾರಣಕ್ಕೆ ಈಗ ಚಿನ್ನದ ಮೇಲೆ ಜನರಿಗೆ ತುಂಬಾ ನಂಬಿಕೆ ಬಂದಿದೆ. ಹೀಗಾಗಿ ಜನರು ಕೂಡ ಚಿನ್ನ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಚಿನ್ನ ಸಾಕಷ್ಟು ಏರಿಕೆ ಕಂಡಿತ್ತು. ಆದರೆ, ಇದೀಗ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಇಸ್ರೇಲ್ & ಇರಾನ್ ಯುದ್ಧ ನಡೆಯಲ್ಲ ಎಂಬ ನಂಬಿಕೆ ಸಿಕ್ಕ ನಂತರ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಕೂಡ ಚಿನ್ನ ಖರೀದಿಯನ್ನು ಆರಾಮವಾಗಿ ಮಾಡಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link