ನವದೆಹಲಿ:
ದೇಶದ ಸುಪ್ರೀಂ ಕೋರ್ಟ್ ನಲ್ಲಿ ಸುಮಾರು 69,000 ಕೇಸ್ ಗಳು ಬಾಕಿ ಇವೆ ಮತ್ತು 25 ಹೈಕೋರ್ಟ್ ಗಳಲ್ಲಿ 60 ಲಕ್ಷ ಪ್ರಕರಣಗಳು ಇತ್ಯರ್ಥವಾಗಬೇಕಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ಸುಪ್ರೀಂಕೋರ್ಟ್ ವೆಬ್ ಸೈಟ್ ನಲ್ಲಿನ ವಿವರಗಳನ್ನು ಉಲ್ಲೇಖಿಸಿ, ಫೆಬ್ರವರಿ 1ರವರೆಗೂ ಸುಪ್ರೀಂಕೋರ್ಟ್ ನಲ್ಲಿ ಸುಮಾರು 69, 511 ಕೇಸ್ ಗಳು ಬಾಕಿ ಇರುವುದಾಗಿ ಕಾನೂನು ಸಚಿವ ಕಿರಣ್ ರಿಜಿಜು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
ಫೆಬ್ರವರಿ 1, 2023 ರಂದು ರಾಷ್ಟ್ರೀಯ ನ್ಯಾಯಾಂಗ ಮಾಹಿತಿ ಗ್ರೀಡ್ (ಎನ್ ಜೆಡಿಸಿ)ಯಲ್ಲಿ ಲಭ್ಯವಾದ ಮಾಹಿತಿ ಪ್ರಕಾರ, ದೇಶಾದ್ಯಂತ ಹೈಕೋರ್ಟ್ ಗಳಲ್ಲಿ 59, 87,477 ಕೇಸ್ ಗಳು ಬಾಕಿಯಿವೆ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ