ನವದೆಹಲಿ :
ಸುಮಾರು 7.30 ಲಕ್ಷ ಕಾರುಗಳ ಮಾರಾಟ ವಾಗದೇ ಡೀಲರ್‌ಗಳ ಬಳಿ ಉಳಿದಿವೆ. ಇವುಗಳ ಒಟ್ಟು ಮೌಲ್ಯ 73 ಸಾವಿರ ಕೋಟಿ ರೂ. ಆಗುತ್ತದೆ ಎಂದು ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ಸ್ ತಿಳಿಸಿದೆ. ಹಬ್ಬದ ಋತುವಲ್ಲೂ ಮಾರಾಟ ಕುಸಿತದಿಂದ ಮಾರಾಟವಾ ಗದೇ ಉಳಿದ ಕಾರುಗಳ ಸಂಖ್ಯೆ ಹೆಚ್ಚಳವಾಗಿದೆ.
ಲೋಕಸಭೆ ಚುನಾವಣೆ, ತೀವ್ರತರ ಹವಾಮಾನ ಪರಿಸ್ಥಿತಿ ಮತ್ತು ವಿಪರೀತ ಮಳೆಯಿಂದಾಗಿ ಜನರು ವಾಹನಗಳನ್ನು ಖರೀದಿ ಸಲು ಮುಂದಾಗುತ್ತಿಲ್ಲ ಎಂದು ಸಂಘಟನೆ ಅಂದಾಜಿಸಿದೆ.
