ಹೈದರಾಬಾದ್:
ಟಾಲಿವುಡ್ ನ ಪವರ್ ಸ್ಟಾರ್ ಎಂದೇ ಖ್ಯಾತರಾಗಿರುವ ಮೆಗಾಸ್ಟಾರ್ ಚಿರಂಜೀವಿರವರ ತಮ್ಮ ಪವನ್ ಕಲ್ಯಾಣ್ ತಮ್ಮ ಚಿತ್ರವೊಂದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದನ್ನು ಅವರೆ ಬಹಿರಂಗಪಡಿಸಿದ್ದಾರೆ .
ಪವನ್ ಕಲ್ಯಾಣ್ ಜನಸೇನಾ ಪಕ್ಷ ಕಟ್ಟಿದಾಗಿನಿಂದ ಅವರ ಸಂಭಾವನೆ ವಿಚಾರವಾಗಿ ವಿರೋಧಿಗಳು ಮಾತನಾಡುತ್ತಲೇ ಇದ್ದರು. ಅಭಿಮಾನಿಗಳನ್ನು ದುರುಪಯೋಗ ಪಡಿಸಿಕೊಂಡು ಪಕ್ಷ ಕಟ್ಟುತ್ತಿದ್ದಾರೆ. ಆ ಪಕ್ಷದ ಹಿಂದೆ ಹಣ ಮಾಡುವ ಉದ್ದೇಶವಿದೆ ಎಂದು ಟೀಕೆ ಮಾಡಿದ್ದೂ ಇದೆ. ಅದೆಲ್ಲದಕ್ಕೂ ಉತ್ತರ ನೀಡಿರುವ ಪವನ್ ಕಲ್ಯಾಣ್, ‘ನನಗೆ ದುಡ್ಡಿನ ಚಿಂತೆ ಇಲ್ಲ.
ನಾನು ದುಡ್ಡು ಮಾಡುವುದಕ್ಕೆ ಇಂಡಸ್ಟ್ರಿಗೆ ಬಂದಿಲ್ಲ. ಆದರೆ ಒಂದು ಸಿನಿಮಾ ಒಪ್ಪಿಕೊಂಡರೆ ದಿನಕ್ಕೆ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತೇನೆ. ಒಂದು ಚಿತ್ರಕ್ಕೆ 22 ದಿನಗಳ ಕಾಲ್ ಶೀಟ್ ಕೊಡುವೆ. 44 ಕೋಟಿ ರೂಪಾಯಿ ಬರುತ್ತದೆ. ಊಟ ಮಾಡುವುದೇ ದಿನಕ್ಕೆ ಒಂದೇ ಸಲ’ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ