ದೇಶದಲ್ಲಿರುವ ಸಿಎಂಗಳ ಸಂಬಳ ಎಷ್ಟು ಗೊತ್ತಾ…?

ನವದೆಹಲಿ :

   ದೇಶದಲ್ಲಿ ಇತ್ತೀಚಿಗಷ್ಟೇ ಲೋಕಸಭೆ, ಕೆಲ ರಾಜ್ಯಗಳಲ್ಲಿ ರಾಜ್ಯಸಭೆ ಚುನಾವಣೆ ಮುಗಿದಿದೆ. ಅಂದ್ಹಾಗೆ, ಸಿಎಂ ಹುದ್ದೆಯಲ್ಲಿ ಇದ್ದವರು ಅನೇಕ ಸೌಲಭ್ಯಗಳನ್ನ ಮತ್ತು ಉತ್ತಮ ಸಂಬಳವನ್ನೂ ಪಡೆಯುತ್ತಾರೆ.

   ವರದಿಗಳ ಪ್ರಕಾರ, ಎಲ್ಲಾ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಿಗೆ ವಸತಿ, ವಾಹನ, ಭದ್ರತೆ ಮತ್ತು ದೇಶ ಮತ್ತು ವಿದೇಶದಲ್ಲಿ ಎಲ್ಲಿ ಬೇಕಾದರೂ ಹೋಗಲು ಸ್ವಾತಂತ್ರ್ಯವಿದೆ. ಇದಲ್ಲದೇ ಒಳ್ಳೆಯ ಸಂಬಳವನ್ನೂ ಪಡೆಯುತ್ತಾರೆ.

   ದೇಶದ ಹಲವು ರಾಜ್ಯಗಳು ತಮ್ಮದೇ ಆದ ಸರ್ಕಾರಿ ವಿಮಾನಗಳು ಮತ್ತು ಹೆಲಿಕಾಪ್ಟರ್‌’ಗಳನ್ನ ಹೊಂದಿವೆ. ರಾಜ್ಯದ ಮುಖ್ಯಮಂತ್ರಿ, ರಾಜ್ಯಪಾಲರಲ್ಲದೆ ಹಲವು ಸಚಿವರೂ ಇವನ್ನ ಬಳಸಿಕೊಳ್ಳುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಸಂಬಂಧಪಟ್ಟ ರಾಜ್ಯ ಸರ್ಕಾರವು ಅವುಗಳನ್ನ ಯಾರಾದರೂ ಬಳಸಬಹುದು. ಆದರೆ ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಸಮಯವನ್ನ ಉಳಿಸಲು ಮತ್ತು ರಸ್ತೆ-ರೈಲ್ವೆ ಸುರಕ್ಷತೆ ಸಮಸ್ಯೆಗಳನ್ನ ನಿವಾರಿಸಲು ಕಡಿಮೆ ದೂರದ ಪ್ರಯಾಣಕ್ಕಾಗಿ ಹೆಲಿಕಾಪ್ಟರ್‌’ಗಳನ್ನ ಬಳಸುತ್ತಾರೆ. ರಾಜ್ಯದ ಹೊರಗೆ ಪ್ರಯಾಣಿಸಲು ವಿಮಾನಗಳನ್ನ ಬಳಸಲಾಗುತ್ತದೆ. ಮುಖ್ಯಮಂತ್ರಿ ರಾಜ್ಯದ ಚುನಾಯಿತ ಮುಖ್ಯಸ್ಥರಾಗಿದ್ದಾರೆ ಮತ್ತು ಹಲವಾರು ವಿಶೇಷ ಅಧಿಕಾರಗಳನ್ನ ಹೊಂದಿದ್ದಾರೆ.

   ಪ್ರಸ್ತುತ ದೇಶದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿ ರಾಜ್ಯದ ಮುಖ್ಯಮಂತ್ರಿಗಳ ವೇತನವು ರಾಜ್ಯ ವಿಧಾನಸಭೆಯಿಂದ ನಿರ್ಧರಿಸಲ್ಪಟ್ಟಂತೆ ವಿಭಿನ್ನವಾಗಿರುತ್ತದೆ. ಮುಖ್ಯಮಂತ್ರಿಗಳ ಸಂಬಳಕ್ಕೂ ಕೇಂದ್ರ ಸರ್ಕಾರಕ್ಕೂ ಸಂಸತ್ತಿಗೂ ಸಂಬಂಧವಿಲ್ಲ. ಈ ವೇತನವನ್ನ ಹೆಚ್ಚಿಸುವ ನಿಬಂಧನೆಯೂ ಇದೆ. ಮುಖ್ಯಮಂತ್ರಿಯ ವೇತನವು ತುಟ್ಟಿಭತ್ಯೆ ಮತ್ತು ಇತರ ಭತ್ಯೆಗಳನ್ನ ಒಳಗೊಂಡಿರುತ್ತದೆ.

    ತೆಲಂಗಾಣ ಮುಖ್ಯಮಂತ್ರಿ – 4,10,000 ರೂಪಾಯಿ,ದೆಹಲಿ ಮುಖ್ಯಮಂತ್ರಿ – 3,90,000 ರೂಪಾಯಿ,
ಉತ್ತರ ಪ್ರದೇಶ ಮುಖ್ಯಮಂತ್ರಿ – 3,65,000 ರೂಪಾಯಿ,ಕರ್ನಾಟಕ ಮುಖ್ಯಮಂತ್ರಿ – 2,00,000 ರೂಪಾಯಿ, ಮಹಾರಾಷ್ಟ್ರ ಮುಖ್ಯಮಂತ್ರಿ – 3,40,000 ರೂಪಾಯಿ,ಆಂಧ್ರಪ್ರದೇಶದ ಮುಖ್ಯಮಂತ್ರಿ – 3,35,000 ರೂಪಾಯಿ,ಗುಜರಾತ್ ಮುಖ್ಯಮಂತ್ರಿ – 3,21,000 ರೂಪಾಯಿ,ಹಿಮಾಚಲ ಪ್ರದೇಶದ ಮುಖ್ಯಮಂತ್ರಿ – 3.10,000 ರೂಪಾಯಿ,ಹರಿಯಾಣ ಮುಖ್ಯಮಂತ್ರಿ – 2,88,000 ರೂಪಾಯಿ,ಜಾರ್ಖಂಡ್ ಮುಖ್ಯಮಂತ್ರಿ – 2,55,000 ರೂಪಾಯಿ,ಮಧ್ಯಪ್ರದೇಶದ ಮುಖ್ಯಮಂತ್ರಿ- 2,30,000 ರೂಪಾಯಿ,ಛತ್ತೀಸ್‌ಗಢದ ಮುಖ್ಯಮಂತ್ರಿ – 2,30,000 ರೂಪಾಯಿ,ಪಂಜಾಬ್ ಮುಖ್ಯಮಂತ್ರಿ- 2,30,000 ರೂಪಾಯಿ,ಗೋವಾ ಮುಖ್ಯಮಂತ್ರಿ – 2,20,000 ರೂಪಾಯಿ,ಬಿಹಾರದ ಮುಖ್ಯಮಂತ್ರಿ – 2,15,000 ರೂಪಾಯಿ,ಪಶ್ಚಿಮ ಬಂಗಾಳದ ಮುಖ್ಯಮಂತ್ರಿ – 2,10,000 ರೂಪಾಯಿ,ತಮಿಳುನಾಡು ಮುಖ್ಯಮಂತ್ರಿ – 2,05,000 ರೂಪಾಯಿ,ಸಿಕ್ಕಿಂ ಮುಖ್ಯಮಂತ್ರಿ – 1,90,000 ರೂಪಾಯಿ,ಒಡಿಶಾ ಮುಖ್ಯಮಂತ್ರಿ – 1,60,000 ರೂಪಾಯಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap