ಪಾರ್ಟಿಗೆ ಹೋದಾಗ ನಟಿ ಸುಚಿತ್ರಾಗೆ ಅಲ್ಲಿ ಆದ ಅನುಭವ ಏನು ಗೊತ್ತಾ….!

ಮುಂಬೈ: 

   ಜರ್ಮನಿಯ ರಾಜಧಾನಿ ಬರ್ಲಿನ್ ನಲ್ಲಿ ಪಾರ್ಟಿಗೆ ಹೋದಾಗ ಸುಚಿತ್ರಾ ಕೃಷ್ಣಮೂರ್ತಿ ಅವರಿಗೆ ಕಹಿ ಅನುಭವವಾಗಿದೆ. ತನ್ನ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.90ರ ದಶಕದಲ್ಲಿ ಮಿಂಚಿದ ನಟಿ ಇವರು. 1994ರಲ್ಲಿ ಬಿಡುಗಡೆಯಾದ ‘ಕಭಿ ಹಾನ್ ಕಭಿ ನಾ’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಸುಚಿತ್ರಾ ಕೃಷ್ಣಮೂರ್ತಿ ನಟಿಸಿದರು.ಈ ಚಿತ್ರ ಅವರಿಗೆ ಜನಪ್ರಿಯತೆ ನೀಡಿತ್ತು. ಬಳಿಕ ನಟನೆ ಜೊತೆ ಗಾಯಕಿಯೂ ಗುರುತಿಸಿಕೊಂಡಿದ್ದಾರೆ.

   ಬರ್ಲಿನ್‌ನಲ್ಲಿ ದೇಹದ ಸಕಾರಾತ್ಮಕತೆ, ನೇಕೆಡ್ ಪಾರ್ಟಿಗೆ ಬಂದಿದ್ದೇನೆ. ನಾನು ಯಾವಾಗಲೂ ದೇಸಿ ಹುಡುಗಿ. ಆ ಪಾರ್ಟಿಗೆ ಹೋದ ನಂತರ ಸ್ನಾನ ಮಾಡಿ ಗಾಯತ್ರಿ ಮಂತ್ರವನ್ನು ಪಠಿಸಬೇಕೆಂದು ಅನಿಸುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.ಶಾರುಖ್ ಸಹ ನಟಿಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ದಯವಿಟ್ಟು ಹುಷಾರಾಗಿರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

   ಈ ಬಗ್ಗೆ ಬಾಲಿವುಡ್ ಹಂಗಾಮಾ ಜೊತೆ ಮಾತನಾಡಿರುವ ನಟಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕಾಮನ್ ಫ್ರೆಂಡ್ ಮೂಲಕ ಬೆತ್ತಲೆ ಪಾರ್ಟಿ ಹೋಗಿದ್ದೆ. ಇಲ್ಲಿಗೆ ತಲುಪಲು ಕೆಲ ಸರ್ಕಸ್ ಕೂಡ ಮಾಡಿದ್ದೆ. ಅಲ್ಲಿನ ಜನ ದೇಹದ ಧನಾತ್ಮಕತೆಯನ್ನು ಉತ್ತೇಜಿಸಲು ಮತ್ತು ದೇಹದ ಆತಂಕವನ್ನು ತೊಡೆದುಹಾಕಲು ನಗ್ನ ಪಾರ್ಟಿ ಮಾಡ್ತಾರೆ. ತಾನು ದೇಸಿ ಹುಡುಗಿ, ಪಾರ್ಟಿ ಒಳ ಹೊಕ್ಕಾಗ ನನಗೆ ಅಷ್ಟೇ ವೇಗದಲ್ಲಿ ವಾಪಸ್ ಬರುವ ಮನಸ್ಸಾಗಿದೆ. ನನಗೆ ಇತರರ ಖಾಸಗಿ ಅಂಗ ನೋಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap