ಬೆಂಗಳೂರು:
ಸಚಿವ ಜಮೀರ್ ಅಹ್ಮದ್ ಅವರು ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆ ಇದೀಗ ಭಾರೀ ಚರ್ಚಗೆ ಕಾರಣವಾಗಿದೆ. ಸಾಮಾನ್ಯವಾಗಿ ಸಚಿವ ಜಮೀರ್ ಅಹ್ಮದ್ ನೀಡುವ ಹೇಳಿಕೆಗಳು ಬಿಜೆಪಿಯಲ್ಲಿ ಚರ್ಚಗೆ ಗುರಿಯಾಗುತ್ತದೆ. ಆದರೆ ಈ ಬಾರಿ ಅವರ ಹೇಳಿಕೆ ಪಕ್ಷದೊಳಗೆ ವಿವಾದ ತಂದೊಡ್ಡಿದೆ.
ಅಂದಹಾಗೆ ಬೀದರ್‌ನಲ್ಲಿ ನಡೆದ ವಕ್ಫ್ ಅದಾಲತ್‌ನಲ್ಲಿ ಸಚಿವ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ಈಶ್ವರ ಖಂಡ್ರೆ ಮಗ ಮುಸ್ಲಿಂ ಮತಗಳಿಂದ ಗೆದಿದ್ದು, ಹೀಗಾಗಿ ನಮ್ಮ ಕೆಲಸ ಅವರು ಮಾಡಿ ಕೊಡಲೇಬೇಕು. ಹಮಾರ್ ಕಾಮ್ ಓ ಝಕ್ ಮಾರ್ಕೆ ಕರ್ನಾ..! ಎಂದು ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಮುಸ್ಲಿಂ ಮತಗಳಿಂದಲೇ ಗೆದ್ದಿದ್ದು, ಸಿರ್ಪ್ ಔರ್ ಸಿರ್ಪ್ ಮುಸ್ಲಿಂ ಓಟ್‌ಸೆ ಸಾಗರ್ ಖಂಡ್ರೆ ಜೀತೆ ಸೋ ಹೈ. ಹಮಾರಾ ಕಾಮ್ ಝಕ್ ಮಾರ್ಕೆ ಕರ್ನಾ ಪಡ್ತಾ ಹೈ. ಎಂದು ಜಮೀರ್ ಹೇಳಿಕೆ ನೀಡಿದ್ದಾರೆ.
ಅಂದ ಹಾಗೆ ಈ ಕಾರ್ಯಕ್ರಮದಲ್ಲಿ, ಮೃತರ ಅಂತ್ಯಸಂಸ್ಕಾರಕ್ಕೆ ಖಬರಸ್ತಾನ ಇಲ್ಲ, ಈ ಹಿಂದಿನಿಂದಲೂ ಅರಣ್ಯ ಜಮೀನಿನಲ್ಲಿ ಮಾಡಲಾಗುತ್ತಿದೆ, ಈಗ ಅವಕಾಶ ಕಲ್ಪಿಸುತ್ತಿಲ್ಲ ಎಂದು ವ್ಯಕ್ತಿಯೊಬ್ಬ ಜಮೀರ್ ಮುಂದೆ ಅಳಲು ತೊಡಿಕೊಂಡಿದ್ದ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಜಮೀರ್, ನಾನು ಈಶ್ವರ ಖಂಡ್ರೆ ಜೊತೆ ಮಾತನಾಡ್ತಿನಿ, ನಾನು ಮಾಡಿಸ್ತಿನಿ ಬಿಡು ಎಂದು ಹೇಳಿದ್ದಾರೆ. ಸದ್ಯ ಜಮೀರ್ ಅಹ್ಮದ್ ಖಾನ್ ನೀಡಿರುವ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಎಂದು ಸರ್ವೆ ನಂಬರ್ 93 ಖಬರ್‌ಸ್ತಾನ ಜಾಗದ ವಿಚಾರವಾಗಿ ಅವನಲ್ಲಿ ಮಾತನಾಡಿ ಅಕ್ಕ ಪಕ್ಕದಲ್ಲಿ ಎಲ್ಲೂ ಜಾಗ ಇಲ್ವಾ ಎಂದು ಸಚಿವ ಜಮೀರ್ ಅಹ್ಮದ್ ವ್ಯಕ್ತಿ ಬಳಿ ಕೇಳಿದ್ದಾರೆ.








