ಅರುಂಧತಿ ರಾಯ್‌ ವಿರುದ್ಧ ಯಾವ ಕಾಯ್ದೆಯಡಿ ವಿಚಾರಣೆ ಆಗ್ತಿದೆ ಗೊತ್ತಾ….!?

ನವದೆಹಲಿ:

     2010ರ ಪ್ರಚೋದನಕಾರಿ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಲೇಖಕಿ ಅರುಂಧತಿ ರಾಯ್ ವಿರುದ್ಧ ಭಯೋತ್ಪಾದನಾ-ವಿರೋಧಿ ಕಾನೂನಿನ ಅಡಿ ತನಿಖೆ ನಡೆಸಲಾಗುತ್ತಿದೆ.

     ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ಮೇರೆಗೆ ಅರುಂಧತಿ ರಾಯ್ ವಿರುದ್ಧ ಭಯೋತ್ಪಾದನಾ-ವಿರೋಧಿ ಕಾನೂನಿನ ಅಡಿ ತನಿಖೆ ನಡೆಸಲು ದೆಹಲಿ ಪೊಲೀಸರು ಮುಂದಾಗಿದ್ದಾರೆ.

    2010ರಲ್ಲಿ ‘ಆಜಾದಿ-ದಿ ಓನ್ಲಿ ವೇ’ ಬ್ಯಾನರ್ ಅಡಿಯಲ್ಲಿ ಆಯೋಜಿಸಲಾದ ಸಮ್ಮೇಳನದಲ್ಲಿ ಅರುಂಧತಿ ರಾಯ್ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

    ರಾಜಧಾನಿ ದೆಹಲಿಯ ಎಲ್‌ಟಿಜಿ ಸಭಾಂಗಣದಲ್ಲಿ ಅಕ್ಟೋಬರ್‌ 21, 2010ರಂದು ‘ಕಮಿಟಿ ಫಾರ್‌ ದಿ ರಿಲೀಸ್‌ ಆಫ್‌ ಪೊಲಿಟಿಕಲ್‌ ಪ್ರಿಸನರ್ಸ್‌’ ಎಂಬ ಸಂಘಟನೆ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಚೋದನಕಾರಿ ಭಾಷಣ ನೀಡಿದ್ದರೆಂದು ಆರೋಪಿಸಲಾಗಿತ್ತು. ಕಾಶ್ಮೀರದ ಸಾಮಾಜಿಕ ಹೋರಾಟಗಾರ ಸುಶೀಲ್‌ ಪಂಡಿತ್‌ ಅವರು ಈ ಸಂಬಂಧ ದೂರು ದಾಖಲಿಸಿದ್ದರು. ಈ ಪ್ರಕರಣದ ಎಫ್‌ಐಆರ್‌ಗಳನ್ನು ಹೊಸದಿಲ್ಲಿಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ನವೆಂಬರ್‌ 27, 2010ರಂದು ದಾಖಲಾಗಿತ್ತು.

    ಪ್ರಕರಣದಲ್ಲಿ ಖ್ಯಾತ ಲೇಖಕಿ ಅರುಂಧತಿ ರಾಯ್‌ ಮತ್ತು ಕಾಶ್ಮೀರದ ಕೇಂದ್ರೀಯ ವಿವಿಯಲ್ಲಿ ಅಂತರರಾಷ್ಟ್ರೀಯ ಕಾನೂನು ವಿಷಯದ ಮಾಜಿ ಪ್ರೊಫೆಸರ್‌ ಶೇಖ್‌ ಶೌಕತ್‌ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಂದಿನ ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ವಿ ಕೆ ಸಕ್ಸೇನಾ ಅನುಮತಿ ನೀಡಿದ್ದರು. ಐಪಿಸಿಯ ಸೆಕ್ಷನ್‌ 153ಎ, 153ಬಿ ಮತ್ತು 505 ಅನ್ವಯ ಪ್ರಕರಣ ದಾಖಲಾಗಿತ್ತು.

    ದೇಶದ್ರೋಹದ ಪ್ರಕರಣ ದಾಖಲಾಗಿದ್ದರೂ ಮೇ 5, 2022ರ ಸುಪ್ರೀಂ ಕೋರ್ಟ್‌ ಆದೇಶಾನುಸಾರ ಸೆಕ್ಷನ್‌ 124ಎ ಅನ್ವಯ ಕಾನೂನು ಕ್ರಮಕೈಗೊಳ್ಳಲು ಅನುಮತಿಸಲಾಗಿಲ್ಲ. ಆದರೆ ಉಳಿದ ಸೆಕ್ಷನ್‌ಗಳನ್ವಯ ಪ್ರಕರಣಗಳನ್ನು ಸಿಜೆಐ ನೇತೃತ್ವದ ತಿಸದಸ್ಯ ಪೀಠ ಸಂವಿಧಾನಿಕ ಪೀಠದ ಮುಂದೆ ಸೆಪ್ಟೆಂಬರ್‌ 12, 2023ರಂದು ಇರಿಸಿತ್ತು ಎಂದು ಎಲ್‌ಜಿ ಕಚೇರಿ ತಿಳಿಸಿದೆ. 

    2010 ರಲ್ಲಿ ‘ಪ್ರಚೋದನಕಾರಿ’ ಭಾಷಣಕ್ಕಾಗಿ ದೆಹಲಿ ಎಲ್‌ಜಿ ಶುಕ್ರವಾರ ಅರುಂಧತಿ ರಾಯ್ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರಿಂದ, ರಾಯ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

   ವರದಿಗಳ ಪ್ರಕಾರ, ಸಮಾರಂಭದಲ್ಲಿ ಭಾಷಣ ಮಾಡುವಾಗ ಬೂಕರ್ ಪ್ರಶಸ್ತಿ ವಿಜೇತ ಲೇಖಕರು ಕೂಡ ಆಗಿರುವ ಅರುಂಧಿತಿ ರಾಯ್, ”ಕಾಶ್ಮೀರವು ಎಂದಿಗೂ ಭಾರತದ ಒಕ್ಕೂಟದ ಭಾಗವಾಗಿಲ್ಲ ಮತ್ತು ಸಶಸ್ತ್ರ ಪಡೆಗಳಿಂದ ಬಲವಂತವಾಗಿ ಆಕ್ರಮಿಸಿಕೊಳ್ಳಲ್ಪಟ್ಟಿದೆ ಎಂದು ಹೇಳಿದ್ದರು ಎನ್ನಲಾಗಿದೆ.

   ಕಾರ್ಯಕ್ರಮದ ನಂತರ, ಸಮ್ಮೇಳನದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಲೇಖಕ ಮತ್ತು ಇತರ ಭಾಷಣಕಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap