ಬೆಂಗಳೂರಿನಲ್ಲಿರುವ ಈ ಪುಟ್ಟ ಫ್ಲ್ಯಾಟ್‌ ಬಾಡಿಗೆ ಎಷ್ಟು ಗೊತ್ತಾ…?

ಬೆಂಗಳೂರು :

    ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ಜೀವನ ನಡೆಸುವುದೇ ದುಬಾರಿಯಾಗಿ ಬಿಟ್ಟಿದೆ. ವರ್ಷದಿಂದ ವರ್ಷಕ್ಕೆ ಮನೆ ಬಾಡಿಗೆಗಳು ಗಗನಕ್ಕೇರುತ್ತಿದ್ದು, ದೊಡ್ಡ ಮನೆ ಬೇಡ ಸಣ್ಣ ಮನೆ ಸಾಕು, ಬಾಡಿಗೆ ಕಡಿಮೆ ಇರುತ್ತೆ ಎಂದು ಅಲ್ಲಿಗೆ ಶಿಫ್ಟ್‌ ಆದ್ರೂ ಕೂಡಾ ನಗರ ಪ್ರದೇಶಗಳಲ್ಲಿ ಆ ಸಣ್ಣ ಮನೆಯ ಬಾಡಿಗೆ ಬೆಲೆ ಕೂಡಾ ಸಿಕ್ಕಾಪಟ್ಟೆ ಕಾಸ್ಟ್ಲಿಯಾಗಿರುತ್ತದೆ. ಇದಕ್ಕೆ ಉತ್ತಮ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ. ಯುವಕನೊಬ್ಬ ಒಂದು ರೂಮ್‌ ಹಾಗೂ ಬಾಲ್ಕನಿಯಿರುವ ಪುಟ್ಟ ಫ್ಲ್ಯಾಟ್‌ಗೆ ತಿಂಗಳಿಗೆ ಬರೋಬ್ಬರಿ 25 ಸಾವಿರ ರೂ. ಬಾಡಿಗೆ ಹಣವನ್ನು ಪಾವತಿ ಮಾಡುತ್ತಿದ್ದು, ಸ್ಟೋರ್‌ರೂಮ್‌ಗಿಂತಲೂ ಸಣ್ಣದಿರುವ ಈ ರೂಮ್‌ ಬಾಡಿಗೆ ಇಷ್ಟೊಂದು ಕಾಸ್ಟ್ಲಿಯೇ ಎಂದು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

   ಈ ಕುರಿತ ವಿಡಿಯೋವನ್ನು ಅಭಿಷೇಕ್‌ ಸಿಂಗ್‌ (abhiskks_17) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ಇಕ್ಕಟ್ಟಾಗಿರು ಕೇವಲ ಒಂದು ಬೆಡ್‌ರೂಮ್‌ ಹೊಂದಿರುವ ಫ್ಲ್ಯಾಟ್‌ನ ಹೋಮ್‌ ಟೂರ್‌ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ನೋಡಿ ಇದು ಕೇವಲ ಒಂದು ಸಣ್ಣ ರೂಮ್‌ ಮತ್ತು ಒಂದು ಪುಟ್ಟ ಬಾಲ್ಕನಿಯನ್ನು ಹೊಂದಿರುವ ಫ್ಲ್ಯಾಟ್‌ ಆಗಿದ್ದು, ಇದರ ತಿಂಗಳ ಬಾಡಿಗೆ 25 ಸಾವಿರ ರೂ. ಎಂದು ಹೇಳಿದ್ದಾನೆ.
   ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೇನು ಸ್ಟೋರ್‌ ರೂಮ್‌ ಇದ್ದಂಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಹೋದರ ಆ ರೂಮ್‌ನಲ್ಲಿ ಶೌಚಾಲಯ ಎಲ್ಲಿದೆ ಎಂದು ಹೇಳ್ಲೇ ಇಲ್ಲʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮುಂಬೈ ಮತ್ತು ಪುಣೆಯಲ್ಲಿ ಕೂಡಾ ಮನೆ ಬಾಡಿಗೆ ಇಷ್ಟೇ ದುಬಾರಿಯಾಗಿದೆʼ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link