ಸಪೋಟದ ನ್ಯೂಟ್ರೀಷನಲ್‌ ವ್ಯಾಲ್ಯು ಗೊತ್ತಾ…?

ತುಮಕೂರು:

    ಜ್ಯೂಸ್ ಕುಡಿಯಲು ಹೋದರೆ ಹೆಚ್ಚಾಗಿ ಜನರು ಇಷ್ಟಪಡುವಂತಹ ಜ್ಯೂಸ್ ಎಂದರೆ ಅದು ಚಿಕ್ಕು ಅಥವಾ ಸಪೋಟ ಜ್ಯೂಸ್ ಎಂದು ಹೇಳಬಹುದು. ಯಾಕೆಂದರೆ ಈ ಹಣ್ಣು ತುಂಬಾ ರುಚಿಕರ ಹಾಗೂ ಸಿಹಿ ಹೊಂದಿರುವುದು. ಇದರಿಂದಾಗಿ ಹೆಚ್ಚಿನವರಿಗೆ ಇದು ಇಷ್ಟವಾಗುತ್ತದೆ. ಸಪೋತಗೆ ವಿವಿಧ ರೀತಿಯ ಹೆಸರುಗಳು ಕೂಡ ಇದೆ. 

   ಲಮೂತ್, ಸಪೊಡಿಲ್ಲಾ, ನೋಸ್ ಬೆರ್ರಿ ಮತ್ತು ಸಪೋಟಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
ಭಾರತದಲ್ಲಿ ಸಪೋಟ ಹಣ್ಣನ್ನು ಹೆಚ್ಚಾಗಿ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಬೆಳೆಯುತ್ತಾರೆ. ಸಪೋತ ಹಣ್ಣಿನ ಜ್ಯೂಸ್, ಜಾಮ್, ಸ್ಮೂಥಿ, ಸಿಹಿ ತಿಂಡಿಗಳು ಇತ್ಯಾದಿಗಳನ್ನು ತಯಾರಿಸುವರು. 

   ಸಪೋಟ ಹಣ್ಣಿನಲ್ಲಿ ಸಸ್ಯಜನ್ಯವಾಗಿರುವಂತಹ ಪಾಲಿಪೆನಾಲ್ ಇದ್ದು, ಹೊಟ್ಟೆಯಲ್ಲಿ ಇದು ಆಮ್ಲದ ಸ್ರವಿಸುವಿಕೆಯನ್ನು ತಟಸ್ಥಗೊಳಿಸುವುದು. ಪರಾವಲಂಬಿ ವಿರೋಧಿ, ವೈರಲ್ ವಿರೋಧಿ, ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವಂತಹ ಸಪೋತ ಹಣ್ಣು ಕಿರಿಕಿರಿ ಉಂಟು ಮಾಡುವ ಹೊಟ್ಟೆಗೆ ಶಮನ ನೀಡುವುದು.

    ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆಯ ಇತರ ಸಮಸ್ಯೆಗಳನ್ನು ಇದು ನಿವಾರಿಸುವುದು. ನಾರಿನಾಂಶವು ಅಧಿಕವಾಗಿ ಇರುವ ಕಾರಣದಿಂದಾಗಿ ಜೀರ್ಣಕ್ರಿಯೆಗೆ ಇದು ಸಹಕಾರಿ ಮತ್ತು ಮಲಬದ್ಧತೆ ಇರುವವರಿಗೆ ವಿರೇಚಕವಾಗಿ ವರ್ತಿಸುವುದು. ಇದು ಹೊಟ್ಟೆಯ ಸೋಂಕನ್ನು ತಗ್ಗಿಸುವುದು. 

   ಚಿಕ್ಕುವಿನಲ್ಲಿ ಇರುವಂತಹ ಕೆಲವೊಂದು ಖನಿಜಾಂಶಗಳಾಗಿರುವ ಕ್ಯಾಲ್ಸಿಯಂ, ಪೋಸ್ಪರಸ್, ತಾಮ್ರ ಮತ್ತು ಕಬ್ಬಿನಾಂಶವು ಮೂಳೆಯನ್ನು ಬಲಗೊಳಿಸುವುದು. ನಿಯಮಿತವಾಗಿ ಚಿಕ್ಕು ತಿಂದರೆ ಅದರಿಂದ ಮೂಳೆಗಳ ಗುಣಮಟ್ಟವು ಸುಧಾರಣೆ ಆಗುವುದು.

   ತಾಮ್ರದ ಕೊರತೆ ಇದ್ದರೆ ಆಗ ಅಸ್ಥಿರಂಧ್ರತೆ ಸಮಸ್ಯೆ ಕಾಡುವುದು. ಸಪೋತ ಹಣ್ಣು ಮೂಳೆಗಳು, ಸ್ನಾಯುಗಳ ಮತ್ತು ಅಂಗಾಂಶಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. 

   ವಿಟಮಿನ್ ಸಿ, ಎ ಮತ್ತು ಆಂಟಿಆಕ್ಸಿಡೆಂಟ್ ಒಳಗೊಂಡಿರುವ ಸಪೋತ ಹಣ್ಣು ಪ್ರತಿರೋಧಕ ಶಕ್ತಿಯನ್ನು ಬಲಿಷ್ಠವಾಗಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಫ್ರೀ ರ್ಯಾಡಿಕಲ್ ನ್ನು ದೂರ ಮಾಡುವುದು, ಚರ್ಮದ ಆರೋಗ್ಯ ವೃದ್ಧಿಸುವುದು ಮತ್ತು ದೀರ್ಘಕಾಲಿಕ ಕಾಯಿಲೆಗಳ ಅಪಾಯ ತಗ್ಗಿಸುವುದು. ಇದು ವೈರಸ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳ ದಾಳಿಯಿಂದ ರಕ್ಷಿಸುವುದು. 

  ಫ್ರಾಕ್ಟೋಸ್ ಮತ್ತು ಸುಕ್ರೋಸ್ ನಿಂದ ಸಮೃದ್ಧವಾಗಿರುವಂತಹ ಸಪೋತ ಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಶಕ್ತಿ ಇದೆ. ಇದನ್ನು ವ್ಯಾಯಾಮದ ಬಳಿಕ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ನೈಸರ್ಗಿಕ ಶಕ್ತಿ ಸಿಗುವುದು.

  ಬೆಳೆಯುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಇದು ತುಂಬಾ ಒಳ್ಳೆಯದು. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಇದು ಒದಗಿಸುವುದು. ಇದರಿಂದ ಆರೋಗ್ಯಕರ ಜೀವನ ಸಾಗಿಸಬಹುದು. 

   ಸಪೋಟ ಹಣ್ಣು ತ್ವಚೆಯ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸುವುದು. ಇದರಲ್ಲಿ ಇರುವಂತಹ ವಿಟಮಿನ್ ಎ, ಸಿ, ಇ ಮತ್ತು ಕೆ ಚರ್ಮವನ್ನು ಹೈಡ್ರೇಟ್ ಆಗಿಡುವುದು ಮತ್ತು ಚರ್ಮದ ಅಂಗಾಂಶ ಗಳನ್ನು ಪುನರ್ಶ್ಚೇತನಗೊಳಿಸುವುದು.

   ಪಾಲಿಫೆನಾಲ್, ಫ್ಲಾವನಾಯ್ಡ್ ಮತ್ತು ಆಂಟಿ ಆಕ್ಸಿಡೆಂಟ್ ಹೊಂದಿರುವ ಸಪೋತ ಹಣ್ಣು ನೆರಿಗೆ ನಿವಾರಿಸುವುದು, ಚರ್ಮದ ವಿನ್ಯಾಸ ಸುಧಾರಿಸು ವುದು, ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುವುದು ಮತ್ತು ನೈಸರ್ಗಿಕವಾಗಿ ಕಾಂತಿಯುತ ವಾಗಿಸುವುದು. ಸಪೋಟದಿಂದ ಹೊರಬರುವಂತಹ ಹಾಲು ಚರ್ಮದ ಶಿಲೀಂಧ್ರ ದೂರ ಮಾಡಲು ಸಹಕಾರಿ.

    ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವಂತಹ ಸಪೋಟ ಹಣ್ಣು ವಿವಿಧ ರೀತಿಯ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡವುದು. ವಿಟಮಿನ್ ಎ ಮತ್ತು ಬಿ ಲೋಳೆಯ ಒಳಪದರವನ್ನು ಆರೋಗ್ಯವಾಗಿಡುವುದು ಮತ್ತು ಇದರಿಂದ ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್ ಬರದಂತೆ ತಡೆಯುವುದು.ಆಹಾರದ ನಾರಿನಾಂಶವು ಅಧಿಕವಾಗಿ ಇರುವಂತಹ ಸಪೋತ ಹಣ್ಣು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದು ಕರುಳಿನ ಕ್ಯಾನ್ಸರ್ ನಿಂದ ಕಾಪಾಡುವುದು.  

    ಅಧಿಕ ರಕ್ತದತೊತಡ ನಿಯಂತ್ರಣದಲ್ಲಿ ಇಡಲು ಸಪೋಟ ಹಣ್ಣು ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವಂತಹ ಪೊಟಾಶಿಯಂ ಅಂಶವು ಸೋಡಿಯಂ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ರಕ್ತ ಸಂಚಾರನ್ನು ಸುಧಾರಿಸುವುದು ಮತ್ತು ರಕ್ತದೊತ್ತಡವನ್ನು ಇದು ನಿಯಂತ್ರಿಸುವುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link