ಹೊಸ ದಾಖಲೆ ಬರೆದ ಚಿನ್ನದ ಬೆಲೆ …: ಎಷ್ಟಿದೆ ಗೊತ್ತಾ….?

ಬೆಂಗಳೂರು: 

    ಏಪ್ರಿಲ್‌ ತಿಂಗಳು ಆಭರಣ ಪ್ರಿಯರಿಗೆ ನಿಜಕ್ಕೂ ಶುಭವಲ್ಲ. ಏಕೆಂದರೆ ಈ ತಿಂಗಳ ಆರಂಭದಿಂದಲೂ ಚಿನ್ನದ ದರದಲ್ಲಿ ಭಾರಿ ಏರಿಕೆಯಾಗುತ್ತಿದೆ. ಚಿನ್ನ & ಬೆಳ್ಳಿಗೆ ಯಾವಾಗಲೂ ಬೆಲೆ ಹೆಚ್ಚು, ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಚಿನ್ನ & ಬೆಳ್ಳಿ ಹೊಸ ದಾಖಲೆ ಬರೆಯುತ್ತಿವೆ.

   ಮತ್ತೊಮ್ಮೆ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ದಾಖಲೆಯ ಮಟ್ಟದ ಏರಿಕೆ ಕಂಡಿದೆ. ಒಂದು ಚಿನ್ನ ಕೊಂಚ ಕಡಿಮೆಯಾದರೆ ಮರುದಿನ ದುಪ್ಪಟ್ಟ ಏರಿಕೆ ಕಾಣುತ್ತಿದೆ. ಏಪ್ರಿಲ್‌ನಲ್ಲಿ ವಿಶೇಷ ಕಾರ್ಯಕ್ರಮಗಳಿದ್ದು ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ನಿಮಗೆ ನಿರಾಸೆ ಕಾಡುವುದು ಖಚಿತ.

   ಚಿನ್ನ ಮತ್ತು ಬೆಳ್ಳಿ ಎರಡೂ ಕೂಡ ಹೊಸ ದಾಖಲೆ ಬೆಲೆ ಪಡೆದಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇವೆರಡೂ ಲೋಹಗಳಿಗೆ ಭಾರೀ ಬೇಡಿಕೆ ಮುಂದುವರಿದಿದೆ. ಮದುವೆ ಸಮಾರಂಭಗಳ ಸೀಸನ್ ಇದು. ಶುಭ ಸಮಾರಂಭಗಳಿಗೆ ಚಿನ್ನಾಭರಣವೂ ಅತೀ ಮುಖ್ಯ. ಹಾಗಾಗಿ ಚಿನ್ನ ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ.

     ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ: 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,350 ರೂ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,290ರೂ. ಬೆಳ್ಳಿ ಬೆಲೆ 1 ಕೆಜಿ: 82,000 ರೂ.

   ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ,ಏರಿಕೆ ಮುಂದುವರಿದಿದೆ. ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap