ಉತ್ತರಪ್ರದೇಶ:
ಸೊಸೆ ಮೇಲೆ ಅತ್ತೆ ಮತ್ತು ನಾದಿನಿ ಸೇರಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶ ದ ಇಟಾ ಪ್ರದೇಶದಲ್ಲಿ ನಡೆದಿದೆ. ವಿಚಿತ್ರವೆಂದರೆ ಮಹಿಳೆಯ ಪತಿ, ತನ್ನ ತಾಯಿ ಮತ್ತು ತಂಗಿಯನ್ನು ತಡೆಯುವ ಬದಲು ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
ಬಿಟ್ಟು ಬಿಡುವಂತೆ ಎಷ್ಟೇ ಗೋಗರೆದರೂ ಕೇಳದೆ ಮಹಿಳೆ ಮೇಲೆ ಬಹಳ ಕ್ರೂರವಾಗಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.
ಇಟಾದಲ್ಲಿ ಈ ಘಟನೆ ನಡೆದಿದ್ದು, ಸೊ ಸೆಯನ್ನು ಅತ್ತೆ ಮತ್ತು ನಾದಿನಿ ಸೇರಿಕೊಂಡು ಚೆನ್ನಾಗಿ ಥಳಿಸಿದ್ದು, ಬಳಿಕ ಆಕೆಯನ್ನು ನೆಲದಲ್ಲಿ ಎಳೆದಾಡಿದ್ದಾರೆ. ಅಲ್ಲೇ ಇದ್ದ ಪತಿ ಮತ್ತು ಮಾವನ ಬಳಿ ಸಹಾಯಕ್ಕಾಗಿ ಆಕೆ ಎಷ್ಟೇ ಅಂಗಲಾಚಿದರೂ ಆಕೆ ಮೇಲೆ ನಡೆಯುತ್ತಿದ್ದ ಮಾರಣಾಂತಿಕ ಹಲ್ಲೆ ಮಾತ್ರ ನಿಲ್ಲುವುದೇ ಇಲ್ಲ. ಮಹಿಳೆಯ ಜೋರಾಗಿ ಕಿರುಚಿಕೊಂಡು ಬಿಟ್ಟು ಬಿಡಿ ಎಂದು ಬೇಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಕೈಹಿಡಿದು ರಕ್ಷಿಸಬೇಕಿದ್ದ ಪತಿಯೇ ಆಕೆಯ ಸಹಾಯಕ್ಕೆ ಬಾರದೇ ಬರೀ ವಿಡಿಯೋ ಮಾಡುತ್ತಾ ನಿಂತಿದ್ದ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರಿಂದ ಖಂಡನೆ ವ್ಯಕ್ತವಾಗಿದೆ. ಇಂತಹ ಕ್ರೂರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಸ್ವಯಂಪ್ರೇರಿತರಾಗಿ ದೂರ ದಾಖಲಿಸಿಕೊಂಡು ಆರೋಪಿಗಳನ್ನು ತಕ್ಷಣ ಅರೆಸ್ಟ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಿಪಲ್ಲಿ ಗ್ರಾಮದಲ್ಲಿ ಕೆಲವು ತಿಂಗಳ ಹಿಂದೆ ಸೊಸೆಯೇ ಅತ್ತೆಯ ಮೇಲೆ ಮೃಗೀಯ ವರ್ತನೆ ತೋರಿದ್ದಳು. 80 ವರ್ಷದ ವೆಂಕಟಲಕ್ಷ್ಮಮ್ಮ ಅವರು ಮನೆಯ ಎದುರು ಮಲಗಿದ್ದಾಗ ಲಕ್ಷ್ಮೀದೇವಮ್ಮ ಎಂಬ ಮಹಿಳೆಯು ಅವರನ್ನು ಎಳೆದಾಡಿದ್ದಾಳೆ. ವೃದ್ಧೆ ಎಂಬುದನ್ನೂ ಲೆಕ್ಕಿಸದ ಸೊಸೆಯು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಸಿಲು ಎಂದು ನೆರಳಿನಲ್ಲಿ ಮಲಗಿದ್ದ ಅತ್ತೆಯ ಮೇಲೆ ಸೊಸೆ ತೋರಿದ ಕ್ರೌರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಳಿಯ ವಯಸ್ಸಿನಲ್ಲಿ ಎರಡು ಹೊತ್ತು ಊಟ ಸಿಕ್ಕರೆ ಸಾಕು ಎಂದು ಬಯಸುವ ಜೀವಕ್ಕೆ ಕಿರುಕುಳ ನೀಡಲು ಅವರು ಮಾಡಿದ ತಪ್ಪೇನು ಎಂಬುದು ತಿಳಿದುಬಂದಿಲ್ಲ. ವೆಂಕಟಲಕ್ಷ್ಮಮ್ಮ ಅವರನ್ನು ಎಳೆದು, ತಿಪ್ಪೆಗೆ ಎಸೆಯುವಾಗ ಅವರ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.